More

    ಎಲ್‌ಟಿ-2 ಮೀ.ನಡಿ ವಿದ್ಯುತ್ ಬಳಕೆಗೆ ಅನುಮತಿಸಿ: ರೈತ ಸಂಘ

    ಶಿವಮೊಗ್ಗ: ಅಡಕೆ ಸುಲಿಯುವ ಯಂತ್ರಕ್ಕೆ ಎಲ್‌ಟಿ-5ರ ಬದಲು ಎಲ್‌ಟಿ-2 ಮೀ.ನಡಿ ವಿದ್ಯುತ್ ಬಳಕೆಗೆ ಅನುಮತಿ ಕೋರಿ ಸೋಮವಾರ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ನೂರಾರು ರೈತರು ಕೆಇಬಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
    ಅಡಕೆ ಸುಲಿಯುವ ಯಂತ್ರಕ್ಕೆ ರೈತರು ವರ್ಷವಿಡೀ ವಿದ್ಯುತ್ ಬಳಸುವುದಿಲ್ಲ. ಹಾಗಾಗಿ ಮನೆಯ ವಿದ್ಯುತ್ ಸಂಪರ್ಕ ಎಲ್‌ಟಿ-2ರಲ್ಲಿ ಅಡಕೆ ಸುಲಿಯುವ ಯಂತ್ರಕ್ಕೆ ಅವಕಾಶ ನೀಡಬೇಕು. ಇದರಿಂದ ಸಾವಿರಾರು ರೈತರಿಗೆ ಅನುಕೂಲ ಆಗಲಿದೆ ಎಂದು ಮನವಿ ಮಾಡಿದರು.
    ಸಂಘ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ತಾಲೂಕು ಅಧ್ಯಕ್ಷರಾದ ಸಿ.ಚಂದ್ರಪ್ಪ, ರಾಜಪ್ಪ, ಯೋಗೇಶ್, ಈಶಣ್ಣ, ಎಂ.ಮಂಜಪ್ಪ ಕಾಚಿಕೊಪ್ಪ, ಜಿ.ಎನ್.ಪಂಚಾಕ್ಷರಿ, ಪಿ.ಡಿ.ಮಂಜಪ್ಪ, ಡಿ.ಎಚ್.ರಾಮಚಂದ್ರಪ್ಪ, ಜ್ಞಾನೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts