More

    ಮತ್ತೆ ಒಂದಾದ ‘ರೋಜ’ ಜೋಡಿ ಅರವಿಂದ್​-ಮಧೂ … ಯಾವ ಚಿತ್ರ ಗೆಸ್​ ಮಾಡಿ?

    ಭಾರತೀಯ ಚಿತ್ರರಂಗದಲ್ಲಿ ಲ್ಯಾಂಡ್​ಮಾರ್ಕ್​ ಸಿನಿಮಾ ಎಂದೇ ಪರಿಗಣಿಸಲಾಗಿರುವ ಚಿತ್ರ ಎಂದರೆ ಅದು ಮಣಿರತ್ನಂ ನಿರ್ದೇಶನದ ‘ರೋಜ’. ಈ ಚಿತ್ರ ಬಿಡುಗಡೆಯಾಗಿ 28 ವರ್ಷಗಳೇ ಆಗಿವೆ. ಆದರೆ, ಈಗಲೂ ಈ ಚಿತ್ರದ ನೆನಪು ಮತ್ತು ಹಾಡುಗಳು ಜನರ ಮನಸ್ಸಿನಲ್ಲಿ ಹಚ್ಚಹಸುರಾಗಿದೆ.

    ಇದನ್ನೂ ಓದಿ: ಉತ್ತರ ಕರ್ನಾಟಕ ಜನರ ನೆರವಿಗೆ ಬಂದ ಕಿಚ್ಚ! ಈ ನಂಬರ್​ಗೆ ಕರೆ​ ಮಾಡಿದ್ರೆ ಸಿಗುತ್ತೆ ಸಹಾಯ

    ಈಗ್ಯಾಕೆ ಈ ವಿಷಯವೆಂದರೆ, ಆ ಚಿತ್ರದಲ್ಲಿ ಗಂಡ-ಹೆಂಡತಿಯಾಗಿ ನಟಿಸಿದ್ದ ಅರವಿಂದ್​ ಸ್ವಾಮಿ ಮತ್ತು ಮಧು, ಆ ನಂತರ ಯಾವುದೇ ಚಿತ್ರದಲ್ಲೂ ಜತೆಯಾಗಿ ನಟಿಸಿರಲಿಲ್ಲ. ಇದೀಗ 28 ವರ್ಷಗಳ ನಂತರ ಅವರಿಬ್ಬರೂ, ಮತ್ತೊಮ್ಮೆ ಹೊಸ ಚಿತ್ರವೊಂದರಲ್ಲಿ ಗಂಡ-ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಆ ಚಿತ್ರ ಯಾವುದು ಗೊತ್ತಾ? ‘ತಲೈವಿ’. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನ್ನವಾಧರಿಸಿದ ಈ ಚಿತ್ರದಲ್ಲಿ ಕಂಗನಾ ಅವರು ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಅರವಿಂದ್​ ಸ್ವಾಮಿ ಅವರು ಎಂ.ಜಿ. ರಾಮಚಂದ್ರನ್​ ಅವರ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಪತ್ನಿ ಜಾನಕಿ ರಾಮಚಂದ್ರನ್​ ಆಗಿ ಮಧೂ ಕಾಣಿಸಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ‘ಲಕ್ಷ್ಮೀ ಬಾಂಬ್​’ ಟ್ರೇಲರ್​ ನೋಡಿ ಸೂಪರ್ಬ್​ ಎಂದ ಆಮೀರ್​ ಖಾನ್​

    ‘ತಲೈವಿ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚೆನ್ನೈನಲ್ಲಿ ಒಂದು ಹಂತದ ಚಿತ್ರೀಕರಣದಲ್ಲಿ ಕಂಗನಾ ಭಾಗವಹಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿದ್ದ ಅವರು, ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸದ್ಯದಲ್ಲೇ ಸಂಪೂರ್ಣವಾಗಲಿದೆ ಎಂದು ತಿಳಿಸಿದ್ದಾರೆ.

    ಸುಶಾಂತ್​ ಸಾವಿನ ತನಿಖೆ ಇನ್ನೂ ಮುಗಿದಿಲ್ಲ: ಸಿಬಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts