More

    ಮುಖ್ಯವಾಹಿನಿಗೆ ಬರಲು ಶಿಕ್ಷಣ ಅವಶ್ಯ

    ಅರಕೇರಾ: ಮಹಿಳೆ ಎಂದರೆ ಅಬಲೆ ಅಲ್ಲ ಸಬಲೆ. ಸಮಾಜವನ್ನು ತಿದ್ದಿ ಮುನ್ನೆಡೆಸುವ ವಿಶೇಷ ಶಕ್ತಿ ಮಹಿಳೆಯರಿಗೆ ಇದೆ ಎಂದು ಸಿಡಿಪಿಒ ವೆಂಕಟಪ್ಪ ಹೇಳಿದರು.
    ಸಮೀಪದ ಮುಷ್ಟೂರು ಗ್ರಾಮದ ಅಂಗನವಾಡಿ ಕೇಂದ್ರ 2ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಪ್ತಾಹ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

    ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಉತ್ತಮ ಶಿಕ್ಷಣ ಪಡೆಯುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ವಿವಿಧ ಕೌಶಲಗಳ ತರಬೇತಿ ಪಡೆಯುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು. ಅತ್ಯಾಚಾರ ಮತ್ತು ಆತ್ಮಹತ್ಯೆಗಳಿಗೆ ಕಡಿವಾಣ ಹಾಕಲು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
    ಎಸಿಡಿಪಿಒ ನಾಗರತ್ನ ಮಾತನಾಡಿ, ಮಹಿಳೆಯರು ಕುಟುಂಬ ನಿರ್ವಹಣೆಗಷ್ಟೆ ಸೀಮಿತವಾಗದೆ ಎಲ್ಲ ರಂಗದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಬೇಕು. ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆ ಅನನ್ಯವಾಗಿದೆ. ಪುರುಷರ ಪ್ರಾಬಲ್ಯವಿರುವ ಜಗತ್ತಿನಲ್ಲಿ ಮಹಿಳೆಯ ಜೀವನದ ಮಹತ್ವಕ್ಕೆ ಮನ್ನಣೆ ನೀಡಬೇಕು ಎಂದರು.
    ಮೇಲ್ವಿಚಾರಕಿ ಶಾಂತಬಾಯಿ ರಾಠೋಡ, ಅಂಗನವಾಡಿ ಕಾರ್ಯಕರ್ತೆ ಶಿವಲಿಂಗಮ್ಮ ಗೆಜ್ಜೆಭಾವಿ, ಸಹಾಯಕಿ ಬೀಬಿ ಗೆಜ್ಜೆಭಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts