More

    ಗ್ರಾಮೀಣ ಭಾಗದಲ್ಲಿ ಮರೆಯಾಗುತ್ತಿವೆ ಮೌಲ್ಯಗಳು

    ಅರಕೇರಾ: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತವಾಗಿದ್ದು ಎರಡರ ನಡುವಿನ ಜೀವನದಲ್ಲಿ ಸಮಾಜಕ್ಕೆ ನೀಡುವ ಕೊಡುಗೆಗಳು ಮೌಲ್ಯಗಳಾಗಿ ಉಳಿಯಲಿವೆ ಎಂದು ಮಾಜಿ ಸಂಸದ ಬಿ.ವಿ.ನಾಯಕ ಹೇಳಿದರು.

    ಪಟ್ಟಣದ ಭಗಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜಿಪಂ ಮಾಜಿ ಸದಸ್ಯ ವೆಂಕಟೇಶ ಪೂಜಾರಿ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ಹಾಗೂ ಬಡ ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

    ಇದನ್ನೂ ಓದಿ: ಗ್ರಾಮೀಣ ಪ್ರದೇಶಕ್ಕೂ ಸ್ಕೇಟಿಂಗ್ ತಲುಪಲಿ

    ಗ್ರಾಮೀಣ ಭಾಗದಲ್ಲಿ ಮೌಲ್ಯಗಳು ಮರೆಯಾಗುತ್ತಿವೆ. ರೈತರು ಹಾಗೂ ಯುವಕರಿಗಾಗಿ ಸ್ಪರ್ಧೆಗಳು ಆಯೋಜಿಸಿರುವುದು ಶ್ಲಾಘನೀಯ ಎಂದರು.
    ಗೊಲಪಲ್ಲಿ ವಾಲ್ಮೀಕಿ ಮಠದ ಶ್ರೀ ವರದಾನೇಶ್ವರ ಸ್ವಾಮೀಜಿ ಮಾತನಾಡಿ, ಹಣ ಇದ್ದವರು ಆಳುಗಳಿಗೆ ಮಾತ್ರ ಯಜಮಾನರಾಗಿದ್ದು, ಗುಣ ಇದ್ದವರು ಸಮಾಜಕ್ಕೆ ಯಜಮಾನ ಆಗಿರುತ್ತಾರೆ. ಬದುಕಿದ್ದಷ್ಟು ದಿನ ಸಮಾಜದಲ್ಲಿ ಪ್ರೀತಿ ಗಳಿಸುವುದಕ್ಕೆ ಮಹತ್ವ ನೀಡಬೇಕು ಎಂದರು.

    ಸಿದ್ದಣ್ಣ ತಾತ ಮುಂಡರಗಿ, ಚನ್ನವೀರಯ್ಯ ಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ರವಿ ಪಾಟೀಲ್, ಸತ್ಯನಾರಾಯಣ ನಾಯಕ ಪೊ.ಪಾ., ಕೆ.ಅನಂತರಾಜ ನಾಯಕ, ಎ.ರಾಜಶೇಖರ ನಾಯಕ, ಗಂಗಾವತಿಯ ಉದ್ಯಮಿ ರಾಜು ನಾಯಕ, ಚಿತ್ರನಟ ರೂರಲ್ ಅಂಜನ್, ದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ, ತಿಮ್ಮಪ್ಪ ನಾಯಕ ಪೊ.ಪಾ., ಗೋಪಾಲಪ್ಪ ಗೌಡ ಚಿಂತಲಕುಂಟಿ, ಭೀಮರಾಯ ಹದ್ದಿನಾಳ, ವೆಂಕಟೇಶ ದೊರೆ, ಡಾ.ಎಚ್.ಎ ನಾಡಗೌಡ, ಗುತ್ತಿಗೆದಾರ ಶರಣಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts