More

    ಅಮಿತ್​ ಷಾ ಅವರಿಂದ ನಾಳೆ ರಕ್ಷಾ ವಿದ್ಯಾಲಯದ ಶಿವಮೊಗ್ಗ ಅಧ್ಯಯನ ಪೀಠ ಉದ್ಘಾಟನೆ: ಆರಗ ಜ್ಞಾನೇಂದ್ರ

    ಬೆಂಗಳೂರು: ಶಿವಮೊಗ್ಗದಲ್ಲಿ ಸ್ಥಾಪಿತವಾಗಲಿರುವ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಉದ್ಘಾಟನೆಯನ್ನ ಕೇಂದ್ರ ಗೃಹ ಸಚಿವ ಅಮಿತ್​ ಶಾ ಶುಕ್ರವಾರ ಬೆಂಗಳೂರಿನಲ್ಲಿ ವರ್ಚುವಲ್​ ಮೂಲಕ ನಡೆಸಿಕೊಡಲಿದ್ದಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ಧಾರೆ.

    ಶಿವಮೊಗ್ಗ ನಗರದದಲ್ಲಿ ಎಂಟು ಎಕರೆ ಪ್ರದೇಶದಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿರುವ ಸುಸಜ್ಜಿತ ಕಟ್ಟಡಗಳಲ್ಲಿ ರಕ್ಷಾ ವಿಶ್ವ ವಿದ್ಯಾಲಯದ ಪೀಠವು ಕಾರ್ಯ ನಿರ್ವಹಿಸಲಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ, ಕಾರ್ಯಾರಂಭ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

    ರಾಷ್ಟ್ರದ ಪ್ರತಿಷ್ಠಿತ ವಿಶ್ವ ವಿದ್ಯಾಲಯದ ಅಧ್ಯಯನ ಕೇಂದ್ರವು, ಪ್ರಾರಂಭಿಕವಾಗಿ, ಡಿಪ್ಲೊಮಾ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್​ಗಳಿಗೆ ಶಿಕ್ಷಣ ನೀಡಲಿದ್ದು, ಪೊಲೀಸ್ ವಿಜ್ಞಾನ ಮತ್ತು ಆಡಳಿತ, ಸೈಬರ್ ಸೆಕ್ಯೂರಿಟಿ ಮತ್ತು ಡಿಜಿಟಲ್ ಸಂಶೋಧನೆ, ರಕ್ಷಣಾ ನಿರ್ವಹಣೆ, ನ್ಯಾಯ ಅಪರಾಧಿಕಾರಣ, ಕರಾವಳಿ ಸಂರಕ್ಷಣೆ, ರಸ್ತಾ ಸುರಕ್ಷತೆ, ದೈಹಿಕ ಶಿಕ್ಷಣ ಸಂಬಂಧ ವಿಷಯ ಗಳನ್ನೂ ಒಳಗೊಂಡಂತೆ, ಪದವಿ ಹಾಗು ಸರ್ಟಿಫಿಕೇಟ್ ಅನ್ನು ಪ್ರದಾನ ಮಾಡಲಾಗುವುದು ಎಂದು ಹೇಳಿದ್ಧಾರೆ.

    ಅಮಿತ್​ ಷಾ ಅವರಿಂದ ನಾಳೆ ರಕ್ಷಾ ವಿದ್ಯಾಲಯದ ಶಿವಮೊಗ್ಗ ಅಧ್ಯಯನ ಪೀಠ ಉದ್ಘಾಟನೆ: ಆರಗ ಜ್ಞಾನೇಂದ್ರ

    ರಕ್ಷಾ ವಿಶ್ವ ವಿದ್ಯಾಲಯದ ಕೇಂದ್ರವು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಶಿಕ್ಷಣ, ಅಧ್ಯಯನ ಕೇಂದ್ರವಾಗಿ ಕಾರ್ಯವನ್ನ ನಿರ್ವಹಿಸುತ್ತದೆ. ಪೊಲೀಸ್​ ಇಲಾಖೆಯ ವಿವಿಧ ಹುದ್ದೆಗಳಿಗೆ ಸೇರ ಬಯಸುವವರು ಅಭ್ಯರ್ಥಿಗಳಿಗೆ ತರಬೇತಿ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ಧಾರೆ.

    ಶಿವಮೊಗ್ಗದ ರಕ್ಷಾ ವಿಶ್ವವಿದ್ಯಾಲಯವು ವಿಶ್ವ ಮಟ್ಟದ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ ಹಾಗೂ ಇಂತಹ ಕೇಂದ್ರವನ್ನ ಶಿವಮೊಗ್ಗ ಜಿಲ್ಲೆಗೆ ಮಂಜೂರಾತಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಆರಗ ಜ್ಞಾನೇಂದ್ರ ಕೃತಜ್ಱತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

    ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರು ರಕ್ಷಾ ವಿಶ್ವವಿದ್ಯಾಲಯವನ್ನ ರಾಷ್ಟ್ರದ ರಕ್ಷಣಾ ಸಂಬಂಧಿ ಶೈಕ್ಷಣಿಕ ಕ್ಷೇತ್ರದ ಮಹತ್ವದ ಸಂಸ್ಥೆಯಾಗಲಿದೆ ಎಂದಿದ್ದು, ಅಂತಹ ಒಂದು ಸಂಸ್ಥೆಯ ಕೇಂದ್ರವು ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಘಾಟನೆಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಅಮಿತ್​ ಶಾ ಅವರಿಂದ ನಾಳೆ ರಕ್ಷಾ ವಿದ್ಯಾಲಯದ ಶಿವಮೊಗ್ಗ ಅಧ್ಯಯನ ಪೀಠ ಉದ್ಘಾಟನೆ: ಆರಗ ಜ್ಞಾನೇಂದ್ರ

    ಇದನ್ನು ಓದಿ : ರಾಹುಲ್​ ಗಾಂಧಿಗೆ ಜೈಲು ಶಿಕ್ಷೆ: ಕಾಂಗ್ರೆಸ್ಸಿಗರ ಮೌನ ಪ್ರತಿಭಟನೆ

    ಆನ್​ಲೈನ್​​ ಜೂಜಾಟಕ್ಕೆ ನಿಷೇಧ ಹೇರಿದ ತಮಿಳುನಾಡು ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts