More

    ಕೊಚ್ಚಿ ಹಡಗು ನಿರ್ಮಾಣ ಸಂಸ್ಥೆಯಲ್ಲಿ ಅಪ್ರೆಂಟಿಸ್​​ಷಿಪ್ : ಯಾರಿಗೆ ಅವಕಾಶ?

    ಕೊಚ್ಚಿ: ಕೇಂದ್ರ ಸರ್ಕಾರದ ಪ್ರಮುಖ ಮಿನಿರತ್ನ ಕಂಪನಿಯಾದ ಕೊಚ್ಚಿ ಶಿಪ್​ಯಾರ್ಡ್ ಲಿಮಿಟೆಡ್​​ನಲ್ಲಿ ಒಂದು ವರ್ಷದ ಅಪ್ರೆಂಟಿಸ್​ಷಿಪ್​​ಗೆ ವೃತ್ತಿಪರ / ಐಟಿಐ ಪೂರೈಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಟೆಕ್ನಿಷಿಯನ್ (ವೊಕೇಷನಲ್) ಅಪ್ರೆಂಟಿಸ್​​​​ಗೆ ಒಟ್ಟು 8 ಸ್ಥಾನಗಳಿವೆ. ಸಂಬಂಧಿಸಿದ ವೃತ್ತಿಯಲ್ಲಿ ವೊಕೇಷನಲ್ ಹೈಯರ್ ಸೆಕೆಂಡರಿ ಶಿಕ್ಷಣ (ವಿಎಚ್​​ಎಸ್​ಇ) ಆಗಿರಬೇಕು. ಮಾಸಿಕ ಸ್ಟೈಫಂಡ್ 9000 ರೂ. ನೀಡಲಾಗುತ್ತದೆ.

    ಇದನ್ನೂ ಓದಿ: ಅಂದು ಕೆಮಿಸ್ಟ್ರಿಯಲ್ಲಿ ಕೇವಲ 24 ಅಂಕ, ಇಂದು ಐಎಎಸ್​ ಅಧಿಕಾರಿ: ವಿದ್ಯಾರ್ಥಿ, ಪಾಲಕರು ಓದಲೇಬೇಕಾದ ಸ್ಟೋರಿ!

    ಟ್ರೇಡ್ ಅಪ್ರೆಂಟಿಸ್​​ಗೆ ಒಟ್ಟು 346 ಸ್ಥಾನಗಳಿವೆ. ಸಂಬಂಧಿಸಿದ ಟ್ರೇಡ್​​ನಲ್ಲಿ ಐಟಿಐ ಆಗಿರಬೇಕು. ಆಯಾ ಟ್ರೇಡ್​​ನಲ್ಲಿ ಸರ್ಟಿಫಿಕೇಟ್/ ಪ್ರೊವಿಜನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಪೂರೈಸಿರಬೇಕು. ಮಾಸಿಕ 8000 ರೂ. ಸ್ಟೈಫಂಡ್ ನೀಡಲಾಗುತ್ತದೆ. ಆಗಸ್ಟ್ 4 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕೇರಳದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ www.cochinshipyard.com ಸಂಪರ್ಕಿಸಬಹುದು.

    ಕರೊನಾ ಹೆಸರಲ್ಲಿ ದೆಹಲಿಯಲ್ಲಿ ಪ್ಲಾಸ್ಮಾ ಮಾಫಿಯಾ: ಸ್ಫೋಟಕ ಮಾಹಿತಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts