More

    ಕಾರ್ವಿುಕ ವಿರೋಧಿ ನೀತಿಗೆ ಖಂಡನೆ

    ಹಾವೇರಿ: ಕೇಂದ್ರ ಸರ್ಕಾರದ ಕಾರ್ವಿುಕ ವಿರೋಧಿ ನೀತಿ ಖಂಡಿಸಿ ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿಯ ಜಿಲ್ಲಾ ಘಟಕ, ಎಸ್​ಎಫ್​ಐ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

    ಕೇಂದ್ರ ಸರ್ಕಾರವು ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮೊದಲು ಅದಕ್ಕೆ ಸಂಬಂಧಪಟ್ಟ ಸಮುದಾಯದವರ ಜೊತೆ ರ್ಚಚಿಸಿ, ಸಮಾಲೋಚಿಸಬೇಕು. ಇತ್ತೀಚೆಗೆ 44 ಕಾರ್ವಿುಕ ಕಾನೂನುಗಳನ್ನು ಸಮೀಕರಿಸಿ 4 ಕಾರ್ವಿುಕ ಸಂಹಿತೆಗಳನ್ನಾಗಿ ಮಾಡಲಾಗಿದೆ. ಇದಕ್ಕೆ ಸಂಬಂಧಿತ ಕಾರ್ವಿುಕ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಕಾರ್ವಿುಕ ಸಂಘಟನೆಗಳ ಜೊತೆ ಚರ್ಚೆ, ಸಮಾಲೋಚನೆ ನಡೆಸಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿದ್ದು, ದೇಶದ ಇನ್ನುಳಿದ ರಾಷ್ಟ್ರೀಯ ಪ್ರಾದೇಶಿಕ ಭಾಷೆಗಳಲ್ಲಿಲ್ಲ. ಸಾರ್ವಜನಿಕವಾಗಿ ಹಾಗೂ ಕೇಂದ್ರ ಹಾಗೂ ರಾಜ್ಯಗಳ ಶಾಸನ ಸಭೆಯಲ್ಲಿ ಚರ್ಚೆಯಾಗದೇ, ಅದರ ಸಾಧಕ-ಬಾಧಕಗಳನ್ನು ಅರಿಯದೆ ಜಾರಿ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಪ್ರತಿಭಟನಾ ನಿರತರು ದೂರಿದರು.

    ದೇಶದ ಕುಸಿಯುತ್ತಿರುವ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಸಿದ್ಧವಾಗಿಲ್ಲ. ಸರ್ಕಾರದ ಗೋದಾಮುಗಳು ಆಹಾರಧಾನ್ಯಗಳಿಂದ ತುಂಬಿದ್ದರೂ ಅಗತ್ಯವಿರುವವರಿಗೆ ಉಚಿತ ಪಡಿತರ ನೀಡಲು ಮುಂದಾಗುತ್ತಿಲ್ಲ. ಕೂಡಲೆ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನು ಹಿಂಪಡೆಯುವ ಮೂಲಕ ಕಾರ್ವಿುಕರ ಹಿತಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.

    ಎಸ್​ಎಫ್​ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಶ್ರೀಕಾಂತ ರ್ಬಾ, ಅರುಣ ಆರೇರ, ನಿಯಾಜ್ ಎಸ್.ಎಂ., ಕೃಷ್ಣ ಕಡಕೋಳ, ಮಹೇಶ ಎನ್., ಭರಮಪ್ಪ ಎಸ್., ಹೊನ್ನಪ್ಪ ಮರೆಮ್ಮನವರ, ವಿನಾಯಕ ಕುರುಬರ, ಜೆ.ಡಿ. ಪೂಜಾರ, ಬಸವರಾಜ ಪೂಜಾರ, ಹೇಮಾ ಅಸಾದಿ, ಅಂದಾನೆಪ್ಪ ಹೆಬಸೂರ, ಹೇಮಾವತಿ ಎಲಿ, ದೊಡ್ಡಪ್ಪ ಬೋಳಕಟ್ಟಿ, ಪರಮೇಶ ಪುರದ, ಚಂದ್ರು ಬೆನಕನಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts