More

    ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾಗಿ ಐವರು ಬಿಜೆಪಿ ಕಾರ್ಯಕರ್ತರ ನೇಮಕ

    ತುಮಕೂರು; ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾಗಿ ಐವರು ಬಿಜೆಪಿ ಕಾರ್ಯಕರ್ತರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಭಾಗವಾಗುವ ಆಸೆಗಳಿಂದ ಕಾದುಕುಳಿತಿದ್ದ ಕಾರ್ಯಕರ್ತರಿಗೆ ಕೊನೆಗೂ ‘ನೇಮಕ ಭಾಗ್ಯ’ ದೊರೆತಿದೆ.

    ಜಾತಿ ಪ್ರಾತಿನಿಧ್ಯ, ಶಾಸಕರ, ಸಂಸದರ, ಪಕ್ಷದ ಜಿಲ್ಲಾಧ್ಯಕ್ಷರ ಕೋಟಾದಡಿ ಟೂಡಾ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಗೊಲ್ಲ ಸಮುದಾಯದ ಜೆ.ಜಗದೀಶ್, ಲಿಂಗಾಯತ ಸಮಾಜದ ಎಂ.ಎನ್.ವೀಣಾ, ದಲಿತ ಸಮುದಾಯದ ಟಿ.ಎಲ್.ಪ್ರತಾಪ್ ಕುಮಾರ್, ಸಾದರ ಜನಾಂಗದ ಡಿ.ಶಿವಕುಮಾರ್ ಹಾಗೂ ನೀರಾವರಿ ಇಲಾಖೆ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹನುಮಂತಪ್ಪ (ವಾಸ್ತುಶಿಲ್ಪಿ)ಅವರನ್ನು ಟೂಡಾ ಸದಸ್ಯರನ್ನಾಗಿ ಮೂರು ವರ್ಷಗಳು ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

    ಜಿಪಂ ಸದಸ್ಯರ ಪತ್ನಿಗೂ ಅದೃಷ್ಟ: ಜಿಪಂ ಸದಸ್ಯ ಗೂಳೂರು ಶಿವಕುಮಾರ್ ಪತ್ನಿ ಎಂ.ಎನ್.ವೀಣಾಗೂ ಟೂಡಾ ಸದಸ್ಯರಾಗುವ ಅದೃಷ್ಟ ಒಲಿದುಬಂದಿದೆ. ಗೂಳೂರು ಶಿವಕುಮಾರ್ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು ಅದೃಷ್ಟ ಖುಲಾಯಿಸಿದೆ. ಇನ್ನೂ ಅಣ್ಣೇನಹಳ್ಳಿ ಶಿವಕುಮಾರ್‌ಗೂ ಕೂಡ ಸುರೇಶ್‌ಗೌಡರ ಕೃಪೆಯಿಂದ ಅಧಿಕಾರ ಒಲಿದುಬಂದಿದೆ.

    ಕಾರ್ಪೋರೇಷನ್‌ಗೂ ನೇಮಕ !: ಟುಡಾಕ್ಕೆ ಐವರು ಸದಸ್ಯರನ್ನು ನೇಮಕ ಮಾಡಿದ ಬಳಿಕ ತುಮಕೂರು ಮಹಾನಗರ ಪಾಲಿಕೆಗೂ ನಾಮಿನಿ ಸದಸ್ಯರನ್ನು ಬಿಜೆಪಿ ಅಂತಿಮಗೊಳಿಸಿದೆ. ಕ್ಯಾತಸಂದ್ರದ ಕೆ.ಎನ್.ಶಿವರಾಜ್ (ಲಿಂಗಾಯತ), ಭೋವಿ ಸಮಾಜದ ವಿಶ್ವಣ್ಣ, ಆರ್ಯವೈಶ್ಯ ಸಮಾಜದ ಮೋಹನ್, ನರಸಿಂಹಸ್ವಾಮಿ (ವಿಶ್ವಕರ್ಮ) ಹಾಗೂ ಉಪ್ಪಾರ ಸಮಾಜದ ತ್ಯಾಗರಾಜ್ ಹೆಸರನ್ನು ಸಂಸದ ಜಿ.ಎಸ್.ಬಸವರಾಜು ಮಾರ್ಗದರ್ಶನದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಂತಿಮಗೊಳಿಸಿದ್ದು ಇನ್ನೆರಡು ದಿನಗಳಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಲಿದೆ. ಐವರು ನಾಮಿನಿ ಸದಸ್ಯರನ್ನು ಪಾಲಿಕೆಗೆ ನೇಮಿಸುವ ಅವಕಾಶ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts