More

    ಚುನಾವಣಾ ಕಾರ್ಯಕ್ಕೆ 32 ಸೆಕ್ಟರ್ ಮ್ಯಾಜಿಸ್ಟ್ರೇಟರ್‌ಗಳ ನೇಮಕ

    ಕೆ.ಆರ್.ನಗರ: ಲೋಕಸಭಾ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಬೇಕೆಂಬ ಚುನಾವಣಾ ಆಯೋಗದ ಆದೇಶ ಮೇರೆಗೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 252 ಮತಗಟ್ಟೆ ಸ್ಥಾಪಿಸಲಾಗಿದ್ದು, ಈ ಪೈಕಿ 8 ಅತಿ ಸೂಕ್ಷ್ಮ ಹಾಗೂ 32 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು.

    ಕ್ಷೇತ್ರ ವ್ಯಾಪ್ತಿಯಲ್ಲಿ 2,17,319 ಮತದಾರರಿದ್ದು, ಇವರಲ್ಲಿ 1,09,903 ಮಹಿಳಾ ಮತದಾರರು ಮತ್ತು 1,07,404 ಪುರುಷ ಮತದಾರರು ಹಾಗೂ 12 ಇತರರು ಇದ್ದಾರೆಂದು ಮಾಹಿತಿ ನೀಡಿದರು.

    ಚುನಾವಣಾ ಕಾರ್ಯಕ್ಕೆ 32 ಸೆಕ್ಟರ್ ಮ್ಯಾಜಿಸ್ಟ್ರೇಟರ್‌ಗಳನ್ನು ನೇಮಕ ಮಾಡಲಾಗಿದೆ. ಇವರೊಂದಿಗೆ 7 ಫ್ಲೈಯಿಂಗ್ ಸ್ವ್ಕ್ಯಾಡ್ ತಂಡ ರಚಿಸಲಾಗಿದೆ. ಇವರಿಗೆ ಪೂರಕವಾಗಿ ಕೆಲಸ ಮಾಡಲು ಮತ್ತಷ್ಟು ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

    ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ 85 ವರ್ಷ ತುಂಬಿದ ಮತದಾರರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತ ಚಲಾವಣೆ ಮಾಡಲು ಬಿಎಲ್‌ಒಗಳು ಮನೆ ಮನೆಗೆ ತೆರಳಿ 12-ಡಿ ಫಾರ್ಮ್ ವಿತರಿಸಲಿದ್ದಾರೆ. ಅದನ್ನು ಭರ್ತಿ ಮಾಡಿ ಬೇಡಿಕೆ ಸಲ್ಲಿಸಿದರೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.

    ಕ್ಷೇತ್ರ ವ್ಯಾಪ್ತಿಯಲ್ಲಿ 5 ಸಖಿ, 2 ಯುವ ಮತ್ತು 1 ಅಂಗವಿಕಲರ ಮತಗಟ್ಟೆ ಸ್ಥಾಪಿಸಲಾಗುವುದು. ಇದರ ಜತೆಗೆ 1 ಪಾರಂಪರಿಕ ಮತಗಟ್ಟೆಯನ್ನೂ ತೆರೆಯಲಾಗುವುದು ಎಂದು ಹೇಳಿದರು.

    ಚುನಾವಣಾ ಸಂಬಂಧಿತ ಅಕ್ರಮದ ಬಗ್ಗೆ ಯಾವುದೇ ದೂರುಗಳಿದ್ದರೂ ಸಾರ್ವಜನಿಕರು ದೂ.08223-262371 ಮಾಹಿತಿ ನೀಡಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts