More

    ವಾಸ್ತುಶಿಲ್ಪಿ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್​ 15 ಕೊನೆಯ ದಿನ

    ನವದೆಹಲಿ: ನ್ಯಾಷನಲ್​ ಆಪ್ಟಿಟ್ಯೂಡ್​ ಟೆಸ್ಟ್​ ಇನ್​ ಆರ್ಕಿಟೆಕ್ಚರ್​ (ಎನ್​ಎಟಿಎ) ಪರೀಕ್ಷಾ ದಿನಾಂಕವನ್ನು ಈಗಾಗಲೇ ಮುಂದೂಡಿದೆ. ಜತೆಗೆ, ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದ್ದು, ಏಪ್ರಿಲ್​ 15ರವರೆಗೆ ಅವಕಾಶ ಕಲ್ಪಿಸಿದೆ.

    ಈ ಮೊದಲು ಮಾರ್ಚ್​ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಸದ್ಯ ಇನ್ನೂ ನಾಲ್ಕು ದಿನ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಇಮೇಜ್​ ಅಪ್​ಲೋಡ್​ ಹಾಗೂ ಶುಲ್ಕ ಪಾವತಿ ಮಾಡಲು ಏಪ್ರಿಲ್​ 19 ಕೊನೆಯ ದಿನವಾಗಿದೆ.

    ಏಪ್ರಿಲ್ 22ರಂದು ದೃಢೀಕೃತ ಅರ್ಜಿಯನ್ನು ಮುದ್ರಿಸಿಕೊಳ್ಳಬಹುದು. ಏಪ್ರಿಲ್​ 20ರಿಂದ 22ರವರೆಗೆ ಅರ್ಜಿಯಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಪರೀಕ್ಷೆ ಆಯೋಜಿಸುವ ಕೌನ್ಸಿಲ್​ ಆಫ್​ ಆರ್ಕಿಟೆಕ್ಚರ್​ (ಸಿಒಎ) ಸಂಸ್ಥೆ ಮಾಹಿತಿ ನೀಡಿದೆ.

    ಪರೀಕ್ಷೆ ದಿನಾಂಕ ನಿಗದಿಯಾದ ಬಳಿಕ ಅದಕ್ಕೂ ಕೆಲ ದಿನಗಳ ಮುಂಚೆ ಪ್ರವೇಶಪತ್ರಗಳನ್ನು ಡೌನ್​ಲೋಡ್​ ಮಾಡಿಕೊಳ್ಳಲು ಸೂಚನೆ ನೀಡಲಾಗುತ್ತದೆ ಎಂದು ಸಿಒಎ ಹೇಳಿದೆ.

    ವರ್ಷದಲ್ಲಿ ಎರಡು ಬಾರಿ ನಾಟಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೊದಲ ಆವೃತ್ತಿಯನ್ನು ಇದೇ ತಿಂಗಳ 19ರಂದು ನಡೆಸಲು ಉದ್ದೇಶಿಸಲಾಗಿತ್ತು. ಇನ್ನು ಎರಡನೇ ಆವೃತ್ತಿಯನ್ನು ಜೂನ್​ 14ರಂದು ನಡೆಸಲು ನಿಗದಿ ಮಾಡಲಾಗಿದೆ. ಮೊದಲ ಆವೃತ್ತಿ ವಿಳಂಬ ಕಾರಣದಿಂದ ಎರಡನೇ ಆವೃತ್ತಿ ಪರೀಕ್ಷೆ ಕೂಡ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.

    ಸೂಪರ್​ ಸ್ಪ್ರೆಡರ್​ಗಳಿಗೆ ಧಾರ್ಮಿಕ ಸಭೆಯ ನಂಟು: ಮಲೇಷ್ಯಾಗೂ ಕಾಡಿದೆ ತಬ್ಲಿಘಿ ಜಮಾತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts