More

    ನಗರದ ಮೈದಾನಗಳಲ್ಲಿ ಪಟಾಕಿ ಮಳಿಗೆ ತೆರೆಯಲು ಅವಕಾಶ: ಅ.29, 30 ಕ್ಕೆ ಅರ್ಜಿ ಸಲ್ಲಿಕೆ; ಇಲ್ಲಿದೆ ಎಲ್ಲಾ ವಿವರ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಮೈದಾನಗಳಲ್ಲಿ ಚಿಲ್ಲರೆ ಪಟಾಕಿ ಅಂಗಡಿ ತೆರೆಯಲು ಸಾರ್ವಜನಿಕರಿಂದ ನಗರ ಪೊಲೀಸ್ ಇಲಾಖೆ ಅರ್ಜಿ ಆಹ್ವಾನಿಸಿದೆ. ಸೇವಾಸಿಂಧು ವೆಬ್ ಪೋರ್ಟಲ್ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ ಅ.29ರ ಬೆಳಗ್ಗೆ 8 ಗಂಟೆಯಿಂದ ಅ.30ರ ಸಂಜೆ 5.30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಶುಲ್ಕ 5 ಸಾವಿರ ರೂ.ಗಳಾಗಿದ್ದು ಆನ್‌ಲೈನ್‌ನಲ್ಲಿ ಪಾವತಿಸಬೇಕಾಗಿರುತ್ತದೆ.

    ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ಹೆಸರಿನಲ್ಲಿ 25 ಸಾವಿರ ರೂ. ಮೌಲ್ಯದ ಡಿಮ್ಯಾಂಡ್ ಡ್ರಾಫ್ಟ್​ನಲ್ಲಿ (ಡಿಡಿ) ಹಾಗೂ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಹೆಸರಿನಲ್ಲಿ 5 ಸಾವಿರ ರೂ. ಡಿಡಿಯನ್ನು ಅರ್ಜಿ ಜತೆಗೆ ಅಪ್‌ಲೋಡ್ ಮಾಡಬೇಕು. ಜತೆಗೆ ಇತ್ತೀಚಿನ ಪಾಸ್‌ಪೋರ್ಟ್ ಫೋಟೋ, ಆಧಾರ್ ಅಥವಾ ಮತದಾರರ ಚೀಟಿ, ಜಿಎಸ್‌ಟಿ ನಂಬರ್ ಅಪ್‌ಲೋಡ್ ಮಾಡಬೇಕಾಗಿದೆ. ಅರ್ಜಿದಾರ ತನ್ನ ಅಥವಾ ತಮ್ಮ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿ 2ನೇ ಅರ್ಜಿ ಸಲ್ಲಿಸಿಲ್ಲ ಎಂದು 20 ರೂ. ಮುಖಬೆಲೆಯ ಸ್ಟಾಂಪ್ ಪೇಪರ್ ಮೇಲೆ ಅಫಿಡೆವಿಟ್ ನೀಡಬೇಕು. ಸಾಮಾನ್ಯ ವರ್ಗ, ಸೊಸೈಟಿ/ಸಂಘ, ವಿಕಲ ಚೇತನರು, ಎಸ್‌ಸಿ/ಎಸ್‌ಟಿ ಅಥವಾ ಜನತಾ ಬಜಾರ್ ಆಗಿದ್ದರೆ ಅರ್ಜಿ ಜತೆಗೆ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಅ.30ರ ಸಂಜೆ 5.30ರ ಒಳಗಾಗಿ ಅರ್ಜಿ ಜತೆಗೆ ಸಲ್ಲಿಸಿದ್ದ ದಾಖಲೆ ಮತ್ತು ಡಿಡಿಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತಲುಪಿಸಬೇಕು. ಇಲ್ಲವಾದರೆ ಅರ್ಜಿ ತಿರಸ್ಕರಿಸಲಾಗುತ್ತದೆ ಅಥವಾ ಅರ್ಜಿ ಶುಲ್ಕ 5 ಸಾವಿರ ರೂ. ಮರುಪಾವತಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಮುಂದಿನ ಏಪ್ರಿಲ್​ನಿಂದ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಳ್ಳೋಲ್ಲ! ಹೀಗೆಂದವರು ಯಾರು, ಏಕೆ?

    ವಿಶೇಷ ಸೂಚನೆ: ರಾಷ್ಟ್ರೀಕೃತ, ಖಾಸಗಿ ಮತ್ತು ಷೆಡ್ಯೂಲ್ಡ್ ಬ್ಯಾಂಕ್‌ಗಳಿಂದ ಮಾತ್ರ ಡಿಡಿ ಪಡೆಯಬೇಕು. ಒಂದು ಮೈದಾನಕ್ಕೆ ಒಬ್ಬ ವ್ಯಕ್ತಿಯು ಒಂದೇ ಅರ್ಜಿ ಸಲ್ಲಿಸಬೇಕು. ಬೆಂಗಳೂರು ನಗರ ಪೊಲೀಸ್ ಕಚೇರಿ ಪ್ರಕಟಣೆ ಮೂಲಕ ಅಥವಾ http://www.bcp.gov.in/ ಲಿಂಕ್​ನಲ್ಲಿ ಮೈದಾನಗಳ ವಿವರ ಅಪ್‌ಲೋಡ್ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ತಾಂತ್ರಿಕ ದೋಷವಿದ್ದರೆ ದೂರವಾಣಿ ಸಂಖ್ಯೆ 080-22942373ಅನ್ನು ಸಂಪರ್ಕ ಮಾಡಬಹುದು. ಬಿಬಿಎಂಪಿ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನಿಗದಿ ಮಾಡಿರುವ ಮೈದಾನದಲ್ಲಿ ಮಾತ್ರ ಪಟಾಕಿ ಮಳಿಗೆ ತೆರೆಯಲು ಅವಕಾಶವಿರುತ್ತದೆ.

    ಅ.31ಕ್ಕೆ ಲಾಟರಿ: ಪಟಾಕಿ ಮಳಿಗೆಗೆ ತಾತ್ಕಾಲಿಕ ಪರವಾನಗಿ ನೀಡಲು ಅ.31ರ ಮಧ್ಯಾಹ್ನ 3 ಗಂಟೆಗೆ ಮೈಸೂರು ರಸ್ತೆ ಸಿಎಆರ್ ಕೇಂದ್ರ ಸ್ಥಾನ ಆವರಣದಲ್ಲಿ ಲಾಟರಿ ನಡೆಸಲಾಗುತ್ತದೆ. ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳಿಗೆ ಪರವಾನಗಿ ನೀಡಲಾಗುತ್ತದೆ. ನ.2 ರಂದು ಆನ್‌ಲೈನ್‌ನಲ್ಲಿ ಪರವಾನಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.

    ಆರ್ಯನ್​ ಖಾನ್​ ಡ್ರಗ್ಸ್​ ಕೇಸಲ್ಲಿ ಸಮೀರ್​ ವಾಂಖೇಡೆ ತನಿಖಾಧಿಕಾರಿಯಲ್ಲ: ಬಂದಿತು ಸ್ಪಷ್ಟನೆ

    ಎಬಿಸಿಡಿ ಬರೆಯಲು ಸೆಣಸಾಡಿದ ಇಂಗ್ಲಿಷ್​​​ ಶಿಕ್ಷಕ! ಪೋಷಕರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts