More

    ಸಾಂದರ್ಭಿಕ ಪರವಾನಗಿಗೆ ಷರತ್ತು ಅನ್ವಯ: ಅಧಿಕಾರಿಗಳಿಗೆ ಅಬಕಾರಿ ಇಲಾಖೆ ಸೂಚನೆ

    ಬೆಂಗಳೂರು: ಕ್ರಿಸ್‌ಮಸ್ ಹಾಗೂ ವರ್ಷಾಚರಣೆ ನಿಮಿತ್ತ ಸಾಂದರ್ಭಿಕ ಸನ್ನದು (ಸಿಎಲ್-5) ಅನ್ನು ಕೆಲ ಷರತ್ತು ವಿಧಿಸಿ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಅಬಕಾರಿ ಇಲಾಖೆ ಸೂಚಿಸಿದೆ.

    ಸನ್ನದು (ಪರವಾನಗಿ) ಸ್ಥಳದಲ್ಲಿ ಮದ್ಯ, ಬಿಯರ್ ಸೇವನೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಅನುಮತಿ/ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಪಡೆಯತಕ್ಕದ್ದು. ಇದು ಹೊಸ ವರ್ಷ ಮತ್ತು ಕ್ರಿಸ್‌ಮಸ್‌ಗೆ ಮಾತ್ರ ಅನ್ವಯವಾಗುತ್ತದೆ. ರೂಫ್​​ ಟಾಪ್‌ಗಳಿಗೆ ಸನ್ನದು ಮಂಜೂರು ಮಾಡಿದ್ದಲ್ಲಿ ಅಂತಹ ರೂಫ್​​​ ಟಾಪ್‌ಗಳಲ್ಲಿ ಯಾವುದೇ ರೀತಿಯ ಅಡುಗೆ ಕೋಣೆ ಕಾರ್ಯ ನಿರ್ವಹಿಸಬಾರದು. ಒಲೆ, ಸಿಲಿಂಡರ್ ಹಾಗೂ ಬೆಂಕಿ ಉಪಕರಣಗಳು ಇರಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

    ಅಲ್ಲದೆ, ರೂಫ್​​ ಟಾಪ್‌ಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಕಲ್ಪಿಸಿರುವ ಬಗ್ಗೆ ಖಾತರಿಪಡಿಸಿಕೊಂಡ ನಂತರವೇ ಪರವಾನಗಿ ಮಂಜೂರು ಮಾಡಬೇಕು. ನಿಗದಿಪಡಿಸಿದ ಶುಲ್ಕ,ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು. ಸನ್ನದುಗಳನ್ನು ಅನಧಿಕೃತ ಮದ್ಯ ಸೇವಿಸಲು ಅವಕಾಶ ನೀಡುವಂತಿಲ್ಲ. ಕೆಎಸ್‌ಬಿಸಿಎಲ್, ಸಿಎಲ್-2 ಹಾಗೂ ಸಿಎಲ್-11ಸಿ ಸನ್ನದುಗಳಿಂದ ಅಧಿಕೃತವಾಗಿ ಪಡೆದುಕೊಂಡ ಮದ್ಯ/ಬಿಯರ್ ಮಾತ್ರ ಬಳಸತಕ್ಕದ್ದು. ಮಂಜೂರಾದ ಪರವಾನಗಿಗಳ ವಿವರ ಒಳಗೊಂಡ ವಿಶೇಷ ವರದಿಯನ್ನು ಅಬಕಾರಿ ಉಪ ಆಯುಕ್ತರಗಳು ಕೇಂದ್ರ ಕಚೇರಿಗೆ ಸಲ್ಲಿಸಬೇಕೆಂದು ಇಲಾಖೆ ಹೇಳಿದೆ.
    ಡಿ. 31ರ ರಾತ್ರಿ ಎಲ್ಲ ವಲಯ, ಉಪವಿಭಾಗ, ಉಪ ಆಯುಕ್ತರು ಕಚೇರಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಿಬ್ಬಂದಿ, ಜನಜಂಗುಳಿ ಇರುವಂಥ ಸನ್ನದುಗಳ ಮುಂದೆ ಯಾವುದೇ ಅಕ್ರಮ, ಅಹಿತಕರ ಘಟನೆ ನಡೆಯದಂತೆ ಕಣ್ಗಾವಲು ಇಡತಕ್ಕದ್ದು. ಅಕ್ರಮ ಮದ್ಯ, ಮಾದಕ ವಸ್ತುಗಳ ಸಂಗ್ರಹಣೆ, ಶೇಖರಣೆ, ಮಾರಾಟದ ಬಗ್ಗೆ ಗುಪ್ತ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳಬೇಕು. ರಸ್ತೆಗಸ್ತು, ರಸ್ತೆಗಾವಲು ನಡೆಸಿ ಅಬಕಾರಿ ಅಕ್ರಮವನ್ನು ತಡೆಗಟ್ಟಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

    ವೈಎಸ್​ಆರ್​ ಕಾಂಗ್ರೆಸ್​ ಸೇರಿದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು

    ಪರಿಶೀಲಿಸಿ ಕ್ರಮಕೈಗೊಳ್ಳಿ: ಕ್ರಿಸ್‌ಮಸ್, ಹೊಸ ವರ್ಷ ನಿಮಿತ್ತ ಸಾಂದರ್ಭಿಕ ಪರವಾನಗಿ ಮಂಜೂರು ಮಾಡಿರುವ ಸಂಬಂಧ ಸೂಕ್ತ ಭದ್ರತೆ ಹಾಗೂ ಮುಂಜಾಗ್ರತಾ ಕ್ರಮಗಳ ಕೈಗೊಳ್ಳುವ ಬಗ್ಗೆ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಪತ್ರದಲ್ಲಿರುವ ಎಲ್ಲ ಅಂಶಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ತನ್ನ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts