More

    ಆ್ಯಪಲ್​​ ಫೋನ್​​​​ ಹ್ಯಾಕಿಂಗ್​​ ಪ್ರಯತ್ನ; ಐಫೋನ್, ಐಪ್ಯಾಡ್‌ನಲ್ಲಿ ಲಾಕ್‌ಡೌನ್ ಮೋಡ್ ಆನ್ ಮಾಡುವುದು ಹೇಗೆ?

    ನವದೆಹಲಿ: ದಾಳಿಕೋರರು ನಿಮ್ಮ ಐಫೋನ್​​ಗಳನ್ನು ಹ್ಯಾಕ್ ಮಾಡಬಹುದು ಎಂದು ತಂತ್ರಜ್ಞಾನ ಕಂಪನಿ ಆ್ಯಪಲ್  ಮಂಗಳವಾರ ಪ್ರತಿಪಕ್ಷಗಳ ಐವರು ಸಂಸದರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಸಂದೇಶದಲ್ಲಿ ಏನಿದೆ? ಎಚ್ಚರಿಕೆ ಸಂದೇಶಗಳು ಯಾರಿಗೆ ಬಂದಿವೆ? ಕಂಪನಿ ಹೇಳಿದ್ದೇನು ಎನ್ನುವುದನ್ನು ನೋಡೋಣ….

    ಎಚ್ಚರಿಕೆ ಸಂದೇಶ ಸ್ವೀಕರಿಸಿರುವವರು: ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಕೆಲವರ ಐಫೋನ್‌ಗಳ ಹ್ಯಾಕಿಂಗ್‌ಗೂ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಇದರಲ್ಲಿ ರಾಜ್ಯಸಭಾ ಸದಸ್ಯೆ ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಎಐಎಂಐಎಂನ ಸಂಸದ ಅಸಾದುದ್ದೀನ್ ಓವೈಸಿ, ಎಎಪಿಯ ಸಂಸದ ರಾಘವ ಛಡ್ಡಾ ಹಾಗೂ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರಿಗೂ ಈ ಎಚ್ಚರಿಕೆಯ ಸಂದೇಶ ಬಂದಿದೆ ಎಂದು ವರದಿಯಾಗಿದೆ.

    ಸಂದೇಶದಲ್ಲಿ ಏನಿದೆ?: ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಫೋನ್​​ಗೆ ಪ್ರವೇಶ ಮಾಡಿದರೆ, ಅವರು ನಿಮ್ಮ ಸೂಕ್ಷ್ಮ ಸಂವಹನಕ್ಕೆ ಸಂಬಂಧಿಸಿದ ಡೇಟಾ, ಕ್ಯಾಮರಾ ಅಥವಾ ಮೈಕ್ರೊಫೋನ್‌ಗಳನ್ನು ದೂರದಿಂದಲೇ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ದಯವಿಟ್ಟು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ” ಎಂದು ಆ್ಯಪಲ್  ನಿಂದ ಇಂತಹ ಸಂದೇಶ ಬಂದಿದೆ.

    2021ರಲ್ಲಿ ಬಹಿರಂಗಗೊಂಡ ಪೆಗಾಸಸ್ ಬೇಹುಗಾರಿಕಾ ಹಗರಣದ ನಂತರ ಆ್ಯಪಲ್ ಕಂಪನಿಯು ತನ್ನ ಐಒಎಸ್ 16ರಿಂದ ಲಾಕ್‌ಡೌನ್ ಮೋಡ್ ಎಂಬ ಸೌಲಭ್ಯವನ್ನು ಪರಿಚಯಿಸಿತು. ಇದರ ಮೂಲಕ ಚಿತ್ರಗಳನ್ನು ಹೊರತುಪಡಿಸಿ ಇತರ ಯಾವುದೇ ಅಟಾಚ್‌ಮೆಂಟ್‌ಗಳನ್ನು ಇದು ಹ್ಯಾಕರ್‌ಗಳಿಗೆ ಸಿಗದಂತೆ ಕಾಪಾಡುವ ಸೌಲಭ್ಯ ಹೊಂದಿದೆ ಎಂದೆನ್ನಲಾಗಿದೆ.

    ಐಫೋನ್, ಐಪ್ಯಾಡ್‌ನಲ್ಲಿ ಲಾಕ್‌ಡೌನ್ ಮೋಡ್ ಆನ್ ಮಾಡುವುದು ಹೇಗೆ?:
    ಸಾಧನದಲ್ಲಿ ಸೆಟ್ಟಿಂಗ್ ಆ್ಯಪ್ ತೆರೆಯಿರಿ
    ಪ್ರೈವಸಿ ಅಂಡ್ ಸೆಕ್ಯೂರಿಟಿ ಆಯ್ಕೆ ಮಾಡಿಕೊಳ್ಳಿ
    ಅದರಲ್ಲಿರುವ ಲಾಕ್‌ಡ್‌ನ್ ಮೋಡ್ ಅನ್ನು ಆನ್ ಮಾಡಿ
    ಟರ್ನ್ ಆನ್ ಎಂಬುದನ್ನು ಆಯ್ಕೆ ಮಾಡಿ, ರಿಸ್ಟಾರ್ಟ್ ಮಾಡಿ. ನಂತರ ಫೋನ್ ಆನ್ ಮಾಡಿ

    ಲಾಕ್‌ಡೌನ್ ಮೋಡ್ ಆನ್ ಮಾಡುವುದರ ಪ್ರಯೋಜನ: ಬಳಕೆದಾರರು ಸುರಕ್ಷತೆಯ ಖಾತ್ರಿಪಡಿಸದಿದ್ದರೆ ಜಾವಾಸ್ಕ್ರಿಪ್ಟ್ ಇರುವ ಕೆಲ ಅಂತರ್ಜಾಲ ತಾಣಗಳನ್ನೂ ಇದು ತೆರೆಯದಂತೆ ನಿಯಂತ್ರಿಸುತ್ತದೆ.

    ಐಫೋನ್‌ನಿಂದ ಯಾವುದೇ ಮಾಹಿತಿ ವರ್ಗಾವಣೆಗೊಳ್ಳುವುದನ್ನೂ ಲಾಕ್‌ಡೌನ್ ಮೋಡ್ ತಡೆಯುತ್ತದೆ.

    ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ವ್ಯಕ್ತಿಗಳನ್ನು ಹೊರತುಪಡಿಸಿ ಇತರ ಅಪರಿಚಿತ ಸಂಖ್ಯೆಗಳ ಕರೆಗಳು ಫೋನ್‌ಗೆ ಬಾರದು.
    ಇಸ್ರೇಲ್ ಮೂಲದ ಎನ್‌ಎಸ್‌ಒ ಸಮೂಹವು ಅಭಿವೃದ್ಧಿಪಡಿಸಿದ ಬೇಹುಗಾರಿಕಾ ಕುತಂತ್ರಾಂಶವನ್ನು ಜಾಗತಿಕ ಮಟ್ಟದಲ್ಲಿ ಕೆಲ ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು ಹಾಗೂ ಖಾಸಗಿ ಬೇಹುಗಾರಿಕಾ ಸಂಸ್ಥೆಗಳು ಬಳಸಿಕೊಂಡಿದ್ದವು. ಒಂದು ಬಾರಿ ಈ ಕುತಂತ್ರಾಂಶ ಫೋನ್ ಒಳಗೆ ಪ್ರವೇಶಿಸಿದ ನಂತರ ಕರೆ, ಕ್ಯಾಮೆರಾ, ಮೊಬೈಲ್ ಇರುವ ಸ್ಥಳದ ನಿಖರ ಮಾಹಿತಿಯನ್ನು ನಿರಂತರವಾಗಿ ರವಾನಿಸುತ್ತಿರುತ್ತವೆ.

    ಟೆಕ್ಸ್ ಸಂದೇಶ, ಇಮೇಲ್, ವೈಯಕ್ತಿಕ ಮಾಹಿತಿ, ಪಾಸ್‌ವರ್ಡ್, ಸಂಪರ್ಕ ಸಂಖ್ಯೆಗಳು, ಬೆರಳಚ್ಚು, ಮುಖದ ಗುರುತು ಇತ್ಯಾದಿಗಳನ್ನೂ ಇವು ದಾಖಲಿಸುವ ಸಾಮರ್ಥ್ಯ ಹೊಂದಿವೆ.

    ಆ್ಯಪಲ್ ​​ ಕಂಪನಿಯ ಸ್ಪಷ್ಟನೆ ಏನು?:  ಇಂದು ಬರೆದಿರುವ ಸಂದೇಶದಲ್ಲಿ ಯಾವುದೆ ಹುರುಳು ಇಲ್ಲ. ಬೆದರಿಕೆ ಅಧಿಸೂಚನೆಗಳನ್ನು ನೀಡಲು ನಮಗೆ ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ನೀಡಲು ನಮಗೆ ಸಾಧ್ಯವಾಗುತ್ತಿಲ್ಲ, ಈ ಕುರಿತಾಗಿ ನಮ್ಮ ತಂಡ ತನಿಖೆ ಮಾಡುತ್ತಿದೆ. ಕೆಲವೊಮ್ಮೆ ಇಂತಹ ಸಂದೇಶಗಳು ಸುಳ್ಳಾಗಿರುತ್ತವೆ ಎಂದು ಕಂಪನಿ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts