More

    ಕೇಂದ್ರ ಕೃಷಿ ಸಚಿವರಿಗೆ ಮನವಿ

    ಬಾಗೂರು: ಕೊಬ್ಬರಿಗೆ 12000 ರೂ. ಬೆಲೆ ನಿಗದಿಪಡಿಸಿ ನಫೆಡ್ ಮೂಲಕ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

    ಹೋಬಳಿಯ ಕಾರೆಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತದಿಂದ ಮಂಗಳವಾರ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ತೆಂಗು ಬೆಳೆ ಬೆಳೆಯುವ ತಾಲೂಕುಗಳ ಶಾಸಕರ ಜತೆ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ 15 ದಿನಗಳ ಒಳಗೆ ಮನವಿ ಸಲ್ಲಿಸುತ್ತೇನೆ ಎಂದರು.
    ಕೇಂದ್ರ ಸರ್ಕಾರದಿಂದ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ 4,500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ಹಿರೀಸಾವೆ ಕಡೆಯಿಂದ 6 ಕಡೆ ಅಂಡರ್‌ಪಾಸ್ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಸಿರುವುದರಿಂದ ರಸ್ತೆ ಅಪಘಾತಗಳು ತಪ್ಪಿವೆ ಎಂದರು.

    ಶಾಸಕ ಬಾಲಕೃಷ್ಣೇಗೌಡ ಅವರು ತಾಲೂಕಿನಲ್ಲಿ ಶೇ.85ರಷ್ಟು ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಹರಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊಡುತ್ತಿಲ್ಲ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಬದಲಾಗಿ ಪಡಿತರ ವಿತರಣೆಯ ಅಕ್ಕಿ ಕಡಿಮೆ ಮಾಡಿ, ಮಣ್ಣು ಇರುವ ರಾಗಿ ವಿತರಣೆಯಾಗುತ್ತಿದೆ ಎಂದು ದೂರಿದರು.

    ಶಾಸಕ ಸಿ.ಎನ್. ಬಾಲಕೃಷ್ಣ, ತಹಸೀಲ್ದಾರ್ ಗೋವಿಂದರಾಜ್, ತಾ.ಪಂ. ಇಒ ಹರೀಶ್, ಸಹಾಯಕ ಕೃಷಿ ಅಧಿಕಾರಿ ಜನಾರ್ದನ್, ಗ್ರಾಪಂ ಅಧ್ಯಕ್ಷೆ ಪುಷ್ಪಲತಾ ನಟೇಶ್, ಮುಖಂಡರಾದ ಪರಮ ದೇವರಾಜೇಗೌಡ, ರಾಮಚಂದ್ರಗೌಡ, ಮಂಜುನಾಥ್, ಸತೀಶ್, ಬೆಳಗಳ್ಳಿ ಪುಟ್ಟಸ್ವಾಮಿ, ಜಗದೀಶ್, ಪಿಡಿಒ ಶ್ರೀಧರ್‌ಗೌಡ, ಕಂದಾಯ ನಿರೀಕ್ಷಕ ರಾಜು, ಕಾರ್ಯದರ್ಶಿ ಸೌಭಾಗ್ಯಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts