More

    ದಾರಿ ಸಮಸ್ಯೆ ಇತ್ಯರ್ಥಕ್ಕೆ ರೈತ ಸಂಘಟನೆಗಳಿಂದ ಮನವಿ

    ವಿಜಯಪುರ: ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ಇತ್ಯರ್ಥಕ್ಕೆ ತಹಸೀಲ್ದಾರರಿಗೆ ಅಧಿಕಾರ ನೀಡಿ ಸರ್ಕಾರ ಆದೇಶ ನೀಡಿರುವುದು ಸ್ವಾಗತಾರ್ಹ.ಆದರೆ ಶೀಘ್ರದಲ್ಲಿ ಅಧಿಸೂಚನೆ ಪ್ರಕಟಿಸಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಒತ್ತಾಯಿಸಿದರು.

    ಈ ಬಗ್ಗೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ಜಮೀನುಗಳಿಗೆ ಹೋಗಲು ದಾರಿ ಇಲ್ಲದ ರೈತರಿಗೆ ದಾರಿ ಮಾಡಿ ಕೊಡಲು ತಹಸೀಲ್ದಾರರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಈಗಾಗಲೇ ಆದೇಶ ಮಾಡಿ 20 ದಿನ ಗತಿಸಿದರೂ ಇಲ್ಲಿಯವರೆಗೂ ಅಧಿಸೂಚನೆ ಹೊರಡಿಸಿರುವುದಿಲ್ಲ. ರಾಜ್ಯ ಸರ್ಕಾರ ವಿಳಂಬ ಮಾಡದೆ ತಕ್ಷಣ ಅಧಿಸೂಚನೆ ಪ್ರಕಟಿಸಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

    ಹಳ್ಳಿಗಳಲ್ಲಿ ದಿನನಿತ್ಯ ದಾರಿ ಸಮಸ್ಯೆಯಿಂದಾಗಿ ಹೊಡೆದಾಟಗಳು ನಡೆಯುತ್ತಿವೆ. ಕೆಲವೊಂದು ಭಾಗಗಳಲ್ಲಿ ಕೊಲೆಗಳಾಗಿವೆ. ದಾರಿ ಇಲ್ಲದ ಕಾರಣ ಜಮೀನಿನಲ್ಲಿ ಬಿತ್ತನೆ ಮಾಡದೆ ಪಾಳು ಬಿಡಲಾಗಿದೆ. ಆದ್ದರಿಂದ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಬೇಕು. ರೈತರು ದಾರಿಗಾಗಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದ ಒಂದು ತಿಂಗಳ ಒಳಗಾಗಿ ದಾರಿ ಸಮಸ್ಯೆ ಇತ್ಯಾರ್ಥ ಮಾಡಿಕೊಡಬೇಕು ಎಂದರು.

    ರೈತ ಮುಖಂಡರಾದ ಸಂಗಮೇಶ ಸಗರ, ಈರಣ್ಣ ದೇವರಗುಡಿ, ಹೊನಕೇರಪ್ಪ ತೆಲಗಿ, ಸೋಮನಗೌಡ ಪಾಟೀಲ, ವಿಠ್ಠಲ ಬಿರಾದಾರ, ಬಸವರಾಜ ಜಂಗಮಶೆಟ್ಟಿ, ಗುರು ಕೋಟ್ಯಾಳ, ಅಭಿಷೇಕ ದೊಡ್ಡಮನಿ, ನಜೀರ ನಂದರಗಿ, ಕಲ್ಲಪ್ಪ ಪಾರಶೆಟ್ಟಿ, ಶಾನೂರ ನಂದರಗಿ, ಹನುಮಂತಪ್ಪ ಬ್ಯಾಡಗಿ, ರಾಮನಗೌಡ ಬ್ಯಾಲ್ಯಾಳ, ಶ್ರೀಶೈಲ ಮುಳಜಿ, ರಘು ಬಳ್ಳಾರಿ, ಶ್ರೀಶೈಲ ಬಾಲಪ್ಪಗೋಳ, ಸಿಕಂದರ ಖರ್ಜಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts