More

    ಅಪ್ಪಣ್ಣ ಹೆಗ್ಡೆ ಸಾಮಾಜಿಕ ಕಳಕಳಿ ಶ್ಲಾಘನೀಯ, ಎ.ಜಿ.ಕೊಡ್ಗಿ ಬಣ್ಣನೆ

    ಕುಂದಾಪುರ: ಗ್ರಾಮೀಣ ಅಭಿವೃದ್ಧಿಯಲ್ಲಿ ಅಪ್ಪಣ್ಣ ಹೆಗ್ಡೆ ಕೊಡುಗೆ ಅಪಾರ. ತನ್ನ ಹುಟ್ಟುಹಬ್ಬದಲ್ಲಿ ಶೈಕ್ಷಣಿಕ ಪ್ರೋತ್ಸಾಹ, ಅನಾರೋಗ್ಯ ಪೀಡಿತರಿಗೆ ಸಹಾಯ ನೀಡುವ ಮೂಲಕ ಜನ್ಮದಿನವನ್ನು ಸಾರ್ಥಕ ಮಾಡಿಕೊಂಡಿದ್ದಾರೆ ಎಂದು ಹಿರಿಯ ರಾಜಕೀಯ ಮುತ್ಸದ್ದಿ ಎ.ಜಿ.ಕೊಡ್ಗಿ ಬಣ್ಣಸಿದ್ದಾರೆ.

    ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಆಶ್ರಯದಲ್ಲಿ ಬಸ್ರೂರು ಶಾರದಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಪ್ಪಣ್ಣ ಹೆಗ್ಡೆ ಜನ್ಮ ದಿನಾಚರಣೆ, ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವು ದತ್ತಿನಿಧಿ ವಿತರಣೆ ಕಾರ‌್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನ್ಮದಿನ ಆಚರನೆಯನ್ನು ಸಮಾಜಕ್ಕೆ ಕೊಡುಗೆ ನೀಡುವುದರೊಂದಿಗೆ ಆಚರಿಸಿರುವುದು ಮಾದರಿ ಎಂದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಶಶಿಕಿರಣ ಉಮಾಕಾಂತ್, ಕರೊನಾ ಚಿಕಿತ್ಸೆ ವೈದ್ಯರೊಬ್ಬರಿಂದ ಆದ ಕೆಲಸವಲ್ಲ. ವೈದ್ಯಕೀಯ ಸಿಬ್ಬಂದಿ, ಆಶಾ ಕಾರ‌್ಯಕರ್ತೆಯರು ಕರೊನಾ ಸೇನಾನಿಗಳ ಪರಿಶ್ರಮವಿದೆ. ಈ ಸನ್ಮಾನ ನನ್ನ ಮೂಲಕ ಕರೊನಾ ವಿರುದ್ಧ ಕೆಲಸ ಮಾಡಿದ ಎಲ್ಲ ಕರೊನಾ ಯೋಧರಿಗೆ ಸಲ್ಲುತ್ತದೆ ಎಂದರು. ಡಾ.ನಾಗಭೂಷಣ ಉಡುಪ, ಡಾ.ನಾಗೇಶ್ ತಮಗೆ ಸಂದ ಪ್ರಶಸ್ತಿ ಆರೋಗ್ಯ ಕಾರ‌್ಯಕರ್ತರಿಗೆ ಸಮರ್ಪಿಸಿದರು.
    ಕಮಲಶಿಲೆ ದೇವಸ್ಥಾನ ವತಿಯಿಂದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ, ಮೂರನೇ ಹಣಕಾಸು ಸಮಿತಿ ಮಾಜಿ ಅಧ್ಯಕ್ಷ ಎ.ಜಿ.ಕೊಡ್ಗಿ ಅವರು ಹೆಗ್ಡೆಯವರನ್ನು ಸನ್ಮಾನಿಸಿದರು.

    ವಿವಿಧ ಶಿಕ್ಷಣ ಇಲಾಖೆ ಮುಖ್ಯಸ್ಥರು, ಸಮಾಜದ ಮುಂದಾಳುಗಳು ಅಪ್ಪಣ್ಣ ಹೆಗ್ಡೆ ಅವರನ್ನು ಗೌರವಿಸಿದರು. ನಾಗರತ್ನಾ ಅಪ್ಪಣ್ಣ ಹೆಗ್ಡೆ ಇದ್ದರು. ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಆಡಳಿತ ನಿರ್ದೇಶಕಿ ಅನುಪಮಾ ಎಸ್.ಶೆಟ್ಟಿ ಸ್ವಾಗತಿಸಿದರು. ಶ್ರೀ ಶಾರದಾ ಕಾಲೇಜಿನ ಉಪನ್ಯಾಸಕಿ ಪ್ರಜ್ಞಾ ಪ್ರಭಾಕರ ಹೆಗ್ಡೆ ಪ್ರಾರ್ಥಿಸಿದರು. ಬಸ್ರೂರು ನಿವೇದಿತಾ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ದಿನಕರ ಶೆಟ್ಟಿ ನಿರೂಪಿಸಿದರು. ಕುಂದಾಪುರ ತಾಪಂ ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಶಾರದಾ ಕಾಲೇಜಿನ ಪ್ರಾಂಶುಪಾಲೆ ಡಾ.ಚಂದ್ರಮತಿ ಶೆಟ್ಟಿ ವಂದಿಸಿದರು.

    ಅಪ್ಪಣ್ಣ ಹೆಗ್ಡೆ ವೈದ್ಯಕೀಯ ಪ್ರಶಸ್ತಿ: ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರ ದೇವಸ್ಥಾನ ಅನುವಂಶೀಯ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಅವರು, ಉಡುಪಿ ಟಿಎಂಎ ಪೈ ಆಸ್ಪತ್ರೆ ವೈದ್ಯಕೀಯ ಮುಖ್ಯಸ್ಥ ಡಾ.ಶಶಿಕಿರಣ ಉಮಾಕಾಂತ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಕುಂದಾಪುರ ಕೋವಿಡ್ ಆಸ್ಪತ್ರೆ ನೋಡಲ್ ಅಧಿಕಾರಿ ಡಾ.ನಾಗೇಶ್ ಅವರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಶ್ರೇಷ್ಠ ವೈದ್ಯಕೀಯ ಪ್ರಶಸ್ತಿ ನೀಡಿ ಗೌರವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts