More

    ರೈತ ಚಳವಳಿ ಬೆಂಬಲಿಸಿ ಅನಿರ್ದಿಷ್ಟಾವಧಿ ಧರಣಿ

    ಸಾಗರ: ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿ ಬೆಂಬಲಿಸಿ ಸಾಗರದಲ್ಲಿ ರೈತ ಸಂಘ ಸೇರಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಏರ್ಪಡಿಸಿರá-ವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಬುಧವಾರ 13ನೇ ಪೂರೈಸಿದೆ.

    ಭತ್ತ, ಜೋಳ ಖರೀದಿ ಕೇಂದ್ರಗಳನ್ನು ತಕ್ಷಣ ಪ್ರಾರಂಭಿಸಬೇಕು. ರೈತರ ಹಕ್ಕೊತ್ತಾಯವನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ಜ.11ರಂದು ಎಪಿಎಂಸಿ ಎದುರು ಹಮ್ಮಿಕೊಂಡಿರುವ ಪ್ರತಿಭಟನೆಯ ಕರಪತ್ರವನ್ನು ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾಧ್ಯಕ್ಷೆ ಲಕ್ಷ್ಮಮ್ಮ ಹಿರೇಮನೆ ಬಿಡುಗಡೆ ಮಾಡಿದರು.

    ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಮಾತನಾಡಿ, ರಾಜ್ಯ ಸರ್ಕಾರ ಭತ್ತ ಮತ್ತು ಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡುವ ಭರವಸೆ ನೀಡಿತ್ತು. ಆದರೆ ಈವರೆಗೂ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ಇದರಿಂದ ರೈತರು ಭತ್ತ, ಜೋಳವನ್ನು ಹೊನ್ನಾಳಿ ಖರೀದಿ ಕೇಂದ್ರಕ್ಕೆ ಒಯ್ದು ಮಾರಾಟ ಮಾಡುವ ದುಸ್ಥಿತಿ ಬಂದಿದೆ. ಸರ್ಕಾರ ಭತ್ತಕ್ಕೆ ನೀಡುತ್ತಿರುವ ಬೆಂಬಲ ಬೆಲೆ ಕಡಿಮೆ ಇದೆ. ಅದರಲ್ಲಿ ಬೇರೆ ಕಡೆ ಹೋಗಿ ಖರೀದಿ ಕೇಂದ್ರಕ್ಕೆ ಭತ್ತ ಮಾರಾಟ ಮಾಡುವುದು ಇನ್ನಷ್ಟು ಹೊರೆಯಾಗುತ್ತಿದೆ ಎಂದು ದೂರಿದರು.

    ಸರ್ಕಾರದ ರೈತ ವಿರೋಧಿ ಕಾನೂನು ಹಿಂಪಡೆಯಬೇಕು. ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ 5 ಸಾವಿರ ರೂ. ಬೆಂಬಲ ಬೆಲೆ ನೀಡಬೇಕು. ಸಾಗರ ಎಪಿಎಂಸಿಯಲ್ಲಿ ತಕ್ಷಣ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯಿಸಿ ಜ.11ರ ಬೆಳಗ್ಗೆ 11 ಗಂಟೆಗೆ ಸಾಗರದ ಎಪಿಎಂಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ರಾಮಣ್ಣ ಹಸಲರು, ಎನ್.ಡಿ.ವಸಂತಕುಮಾರ್, ವೈ.ಎನ್.ಹುಬ್ಬಳ್ಳಿ, ಬಂಗಾರಪ್ಪ ಶೇಟ್, ರಮೇಶ್ ಐಗಿನಬೈಲ್, ಗಂಗಮ್ಮ, ಗಿರೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts