More

    ಹಸಿರೀಕರಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ : ಶಾಸಕ ಶಿವಶಂಕರರೆಡ್ಡಿ

    ಗೌರಿಬಿದನೂರು : ಗಿಡಗಳನ್ನು ನೆಡುವುದಷ್ಟೇ ಅಲ್ಲದೆ ಪೋಷಣೆಯನ್ನೂ ಸಮರ್ಪಕವಾಗಿ ನಿರ್ವಹಿಸುವ ಮೂಲಕ ಹಸಿರೀಕರಣಕ್ಕೆ ಮುಂದಾಗಬೇಕೆಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

    ನಗರಸಭೆ ಆವರಣದಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳ ವಿತರಣೆಗೆ ಶುಕ್ರವಾರ ಚಾಲನೆ ನೀಡಿದ ಅವರು, ಸಸಿಗಳನ್ನು ನೆಡುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ. ಕಳೆದ ವರ್ಷ ತಾಲೂಕಿನಲ್ಲಿ 1 ಲಕ್ಷ ಸಸಿಗಳನ್ನು ಉತ್ತರ ಪಿನಾಕಿನ ನದಿ ಎರಡೂ ದಂಡೆಯಲ್ಲಿ 32 ಕಿ.ಮೀ ನಷ್ಟು ದೂರ ನೆಡಲಾಗಿದೆ, ಈ ಬಾರಿಯೂ ಸಹ 60 ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು.

    ನಗರದ ಎಲ್ಲ ವಾರ್ಡ್‌ಗಳ ಸರ್ಕಾರಿ ಖಾಲಿ ಜಾಗ, ಹೊರವಲಯದ ಬೈಪಾಸ್ ರಸ್ತೆಯ ಇಕ್ಕೆಲ ಹಾಗೂ ಅಂಬೇಡ್ಕರ್ ವೃತ್ತದಿಂದ ಬೈಪಾಸ್ ರಸ್ತೆಯವರೆಗೂ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಮುಂದಾಗಿದೆ, ಅದೇ ರೀತಿ ಜನರು ಸರ್ಕಾರಿ ಕಚೇರಿ, ಶಾಲೆ ಅವರಣ ಸೇರಿ ಮನೆ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಕರೆ ನೀಡಿದರು.

    ಪರಿಸರ ನಾಶ ಮನುಕುಲದ ವಿನಾಶಕ್ಕೆ ಕಾರಣವಾಗಲಿದೆ. ಪರಿಸರದ ಮೇಲೆ ಮನುಷ್ಯನ ದಬ್ಬಾಳಿಕೆಯಿಂದ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಹವಾಮಾನ ವೈಪರಿತ್ಯ ಉಂಟಾಗುತ್ತಿದೆ, ಆದ್ದರಿಂದ ಸಮರೋಪಾದಿಯಲ್ಲಿ ಸಂರಕ್ಷಣೆ ಕಾರ್ಯ ತುರ್ತಾಗಿ ನಡೆಸಬೇಕೆಂದು ಉಪ ಅರಣ್ಯ ಜಿಲ್ಲಾ ಸಂರಕ್ಷಣಾಧಿಕಾರಿ ಅರಸಾಲನ್ ಮನವಿ ಮಾಡಿದರು.

    ಸದಸ್ಯ ಮಾರ್ಕೇಟ್ ಮೋಹನ್, ತಾಲೂಕು ಅರಣ್ಯಾಧಿಕಾರಿ ಆರ್.ಎನ್.ಮಂಜುನಾಥ್, ಸಾಮಾಜಿಕ ಅರಣ್ಯ ಅಧಿಕಾರಿ ಪದ್ಮಶ್ರೀ, ನಗರಸಭೆ ಮಾಜಿ ಸದಸ್ಯ ಕೆ.ಎಸ್.ಅನಂತರಾಜು, ಕಂದಾಯ ಅಧಿಕಾರಿ ಖಾದರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts