ಸರ್ಕಾರ ಇನ್ನಾದರೂ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು: ಅನುಪಮ್ ಖೇರ್

blank

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷವನ್ನು ಕಾಲದಿಂದ ಕಾಲಕ್ಕೆ ಹೊಗಳುತ್ತಲೇ ಬಂದಿರುವ ಮತ್ತು ಈ ಮೂಲಕ ಅವರ ಕಟ್ಟಾ ಬೆಂಬಲಿಗ ಎಂದು ಗುರುತಿಸಿಕೊಂಡಿರುವ ಬಾಲಿವುಡ್​ನ ಹಿರಿಯ ನಟ ಅನುಪಮ್​ ಖೇರ್​, ಈಗ ಮೊದಲ ಬಾರಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಸರ್ಕಾರ ಇನ್ನಾದರೂ ತನ್ನ ತಪ್ಪು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.

blank

ಇದನ್ನೂ ಓದಿ: ಜೀ ಕನ್ನಡದಲ್ಲಿ ವೀಕೆಂಡ್​ ಮನರಂಜನೆ: “ಕಥಾಸಂಗಮ” ಹಾಗೂ “ರಾಮಾರ್ಜುನ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

ಕರೊನಾ ಎರಡನೆಯ ಅಲೆಯಿಂದ ದೇಶದಲ್ಲಿ ಆಹಾಕಾರ ಎದ್ದಿದ್ದು ಜನ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಸ್ವಲ್ಪ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿತ್ತು ಎಂದು ಸಂದರ್ಶನವೊಂದರಲ್ಲಿ ಎಚ್ಚರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಎಲ್ಲೋ ಒಂದು ಕಡೆ ಸರ್ಕಾರ ಜನರನ್ನು ಕಾಪಾಡಲು ಮತ್ತು ಸಂಕಷ್ಟದಿಂದ ಪಾರು ಮಾಡುವುದರಲ್ಲಿ ಎಡವಿದೆ. ಇದನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಬರೀ ಇಮೇಜ್​ ವೃದ್ಧಿಸಿಕೊಳ್ಳುವುದಷ್ಟೇ ಅಲ್ಲ, ತಾವೆಲ್ಲಿ ಎಡವುತ್ತಿದ್ದೇವೆ ಮತ್ತು ಹೇಗೆ ಇದರಿಂದ ಬರಬೇಕು ಎಂದು ಸರ್ಕಾರ ಯೋಚಿಸುವುದರ ಜತೆಗೆ, ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ಅನುಪಮ್​ ಖೇರ್​ ಹೇಳಿದ್ದಾರೆ.

ಇದನ್ನೂ ಓದಿ: ಕೊನೆಗೂ ಅಣ್ಣಾತ್ತೆ ಚಿತ್ರೀಕರಣ ಮುಗಿಸಿ ಚೆನ್ನೈಗೆ ವಾಪಸ್ಸಾದ ರಜನಿಕಾಂತ್

ಈ ಸರ್ಕಾರದ ಬಗ್ಗೆ ಜನರಲ್ಲಿ ಸಾಕಷ್ಟು ನಂಬಿಕೆ ಇತ್ತು. ಆದರೆ, ಈ ಸರ್ಕಾರವನ್ನು ಆಯ್ಕೆ ಮಾಡಿದ ಹಲವರು ಟೀಕೆ ಮಾಡುತ್ತಿದ್ದಾರೆ ಮತ್ತು ಆ ಟೀಕೆ ನ್ಯಾಯಯುತವಾಗಿಯೇ ಇದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಏಕೆಂದರೆ, ಅವರು ಜನರಿಂದ ದೊಡ್ಡ ಮಟ್ಟ ಬಹುಮತದಲ್ಲಿ ಆರಿಸಲ್ಪಟ್ಟಿದ್ದಾರೆ. ಹಾಗೆಯೇ, ಅವರನ್ನು ಆಯ್ಕೆ ಮಾಡಿದ ನಮ್ಮಂತಹ ಸಾಮಾನ್ಯ ಜನರು, ಇದನ್ನೆಲ್ಲ ನೋಡಿ ಕೋಪಗೊಂಡರೆ ಅದರಲ್ಲಿ ತಪ್ಪಿಲ್ಲ. ಇವೆಲ್ಲಕ್ಕೂ ಸರ್ಕಾರವನ್ನೇ ಜವಾಬ್ದಾರಿಯುತ ಸ್ಥಾನದಲ್ಲಿ ನಿಲ್ಲಿಸಿದರೆ ತಪ್ಪಿಲ್ಲ ಎಂದು ಅನುಪಮ್​ ಖೇರ್​ ಹೇಳಿಕೊಂಡಿದ್ದಾರೆ.

ಇಡೀ ದೇಶದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ರಾಧೇ ಬಿಡುಗಡೆ …

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank