More

    ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವ ತಗ್ಗಿಸುವ ನೇಸಲ್​ ಸ್ಪ್ರೇ

    ನವದೆಹಲಿ: ತೀವ್ರ ತರದ ಖಿನ್ನತೆಗೆ ಒಳಗಾಗಿ, ಸಾಯುವುದು ಒಂದೇ ಉಳಿದಿರುವ ಮಾರ್ಗ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವವರ ಮನೋಭಾವ ಬದಲಿಸುವಂಥ ಔಷಧವನ್ನು ಜಾನ್ಸನ್​ ಆ್ಯಂಡ್​ ಜಾನ್ಸನ್​ ಸಂಸ್ಥೆ ಸಂಶೋಧಿಸಿದೆ. ಸ್ಪ್ರವಾಟೋ ಎಂಬ ಹೆಸರಿನ ಮೂಗಿನ ಹೊಳ್ಳೆಯ ಮೂಲಕ ಸಿಂಪಡಿಸಿಕೊಳ್ಳಬಹುದಾದ (ನೇಸಲ್​ ಸ್ಪ್ರೇ) ಈ ಖಿನ್ನತೆನಿರೋಧಕವನ್ನು ಆತ್ಮಹತ್ಯೆ ಮಾಡಿಕೊಳ್ಳುವಂಥ ಖಿನ್ನತೆಗೆ ಒಳಗಾಗಿರುವವರಿಗೆ ಕೊಡಲು ಅಮೆರಿಕದ ಔಷಧ ನಿಯಂತ್ರಕರು ಸಮ್ಮತಿಸಿದ್ದಾರೆ.

    ಸ್ಪ್ರವಾಟೋ ಎಂಬ ಈ ಔಷಧವನ್ನು ಬಳಸಲು ಅಮೆರಿಕದ ದ ಫುಡ್​ ಆ್ಯಂಡ್​ ಡ್ರಗ್​ ಅಡ್ಮಿನಿಸ್ಟ್ರೇಷನ್​ ಅನುಮತಿ ನೀಡಿರುವುದರಿಂದ ಅಮೆರಿಕದಲ್ಲಿ ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ತಗ್ಗಲಿದೆ ಎಂದು ಜಾನ್ಸ್​ ಆ್ಯಂಡ್​ ಜಾನ್ಸನ್​ನ ನ್ಯೂರೋಸೈನ್ಸ್​ ಮೆಡಿಕಲ್​ ಅಫೇರ್​ ಘಟಕದ ಉಪಾಧ್ಯಕ್ಷ ಮಿಶೆಲ್​ ಕ್ರಾಮರ್​ ತಿಳಿಸಿದ್ದಾರೆ.

    ಇವರ ಪ್ರಕಾರ ಅಮೆರಿಕದ ಒಟ್ಟು ಜನಸಂಖ್ಯೆ ಶೇ.11ರಿಂದ 12 ಜನರು ಅಂದರೆ 17 ದಶಲಕ್ಷ ಜನರು ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸ್ಪ್ರವಾಟೋ ಬಳಕೆಯಿಂದ ಈ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.

    ಔಷಧಗಳಿಂದ ನಿಯಂತ್ರಿಸಲಾಗದಂಥ ಖಿನ್ನತೆಗೆ ಒಳಗಾಗಿದ್ದ 6 ಸಾವಿರ ಜನರಿಗೆ ಸ್ಪ್ರವಾಟೋ ನೇಸಲ್​ ಸ್ಪ್ರೇ ಅನ್ನು ಕೊಡಲಾಗಿತ್ತು. 2019ರ ಮಾರ್ಚ್​ನಿಂದ ಈ ಟ್ರಯಲ್​ ಮಾಡಲಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದೇ ಉಳಿದಿರುವ ದಾರಿ ಎನ್ನುತ್ತಿದ್ದ ಜನರ ಚಿಂತನೆಗಳು ಸಕಾರಾತ್ಮಕ ರೂಪು ಪಡೆದು, ಬದುಕಲು ನಿರ್ಧರಿಸುವಂತೆ ಮಾಡಿದ್ದಾಗಿ ಕ್ರಾಮರ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಒಡೆತನದ ಫಾರ್ಮ್​ಹೌಸ್​ನಲ್ಲಿ ರಿಯಾ ಕುಟುಂಬದಿಂದ ಹೋಮ- ಹವನ!

    ಸ್ಪ್ರವಾಟೋ ನೇಸಲ್​ ಸ್ಪ್ರೇ ತುಂಬಾ ವೇಗವಾಗಿ ಕೆಲಸ ಮಾಡಿ, ಆತ್ಮಹತ್ಯೆಯ ಚಿಂತನೆಯನ್ನು ಬದಲಿಸುತ್ತದೆ. ಅಂದರೆ, ಹಳೆಯ ಖಿನ್ನತೆನಿರೋಧಕ ಔಷಧಗಳಿಗಿಂತಲೂ ವೇಗವಾಗಿ ಚಿಂತನೆಯನ್ನು ಬದಲಿಸುತ್ತದೆ ಎಂಬುದು ಟ್ರಯಲ್​ನಲ್ಲಿ ಕಂಡುಬಂದಿದ್ದಾಗಿ ಹೇಳಿದ್ದಾರೆ.

    ಈ ನೇಸಲ್​ ಸ್ಪ್ರೇನ ಕ್ಲಿನಿಕಲ್​ ಟ್ರಯಲ್​ನ ಅಂಕಿಅಂಶಗಳನ್ನು ಗಮನಿಸಿದಾಗ, ತೀವ್ರ ತರದ ಖಿನ್ನತೆಗೆ ಒಳಗಾಗಿರುವ ರೋಗಿಗಳಲ್ಲಿನ ಚಿಂತನೆಗಳನ್ನು ಸಕಾರಾತ್ಮಕ ಚಿಂತನೆಗಳಾಗಿ ಬದಲಿಸುವ ಶಕ್ತಿ ಇದಕ್ಕೆ ಇರುವುದು ಖಚಿತವಾಗಿದೆ. ಆದ್ದರಿಂದ, ಅಂಥ ರೋಗಿಗಳಿಗೆ ತಕ್ಷಣ ನೆರವು ನೀಡಲು ವೈದ್ಯರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಟ್ರಯಲ್​ನ ಇನ್​ವೆಸ್ಟಿಗೇಟರ್​ ಆಗಿದ್ದ ಯೇಲ್​ ಖಿನ್ನತೆ ಸಂಶೋಧನಾ ಕಾರ್ಯಕ್ರಮದ ನಿರ್ದೇಶಕ ಗೆರಾರ್ಡ್​ ಸ್ಯಾನಕೋರಾ ಹೇಳಿದ್ದಾರೆ.

    ಒಂದು ಮಾಹಿತಿಯ ಪ್ರಕಾರ 1999ರಿಂದ 2016ರವರೆಗೆ ಅಮೆರಿಕದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣ ಶೇ.30 ಹೆಚ್ಚಾಗುತ್ತಿತ್ತು. ಕೋವಿಡ್​-19 ಪಿಡುಗಿನಿಂದಾಗಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿತ್ತು. ಆದರೆ, ಕೋವಿಡ್​-19 ಸೋಂಕಿಗೆ ತುತ್ತಾದವರಿಗೆ ಸೇರಿ ತೀವ್ರ ತರದ ಖಿನ್ನತೆಗೆ ಒಳಗಾದವರಿಗೆ ಸ್ಪ್ರವಾಟೋ ನೇಸಲ್​ ಸ್ಪ್ರೇ ಕೊಟ್ಟಾದ ನಂತರದಲ್ಲಿ ಆತ್ಮಹತ್ಯೆ ಮನೋಭಾವ ಹೊಂದಿದ್ದವರ ಚಿಂತನೆ ತುಂಬಾ ವೇಗವಾಗಿ ಬದಲಾಗಿದ್ದಾಗಿ ಹೇಳಲಾಗುತ್ತಿದೆ.

    ಯುಪಿಎಸ್​ಸಿ ಪರೀಕ್ಷೆ-2019 ಫಲಿತಾಂಶ ಪ್ರಕಟ: ಪ್ರದೀಪ್​ ಸಿಂಗ್​ ಟಾಪರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts