More

    ರೈತ ವಿರೋಧಿ ನೀತಿ ಖಂಡಿಸಿ ಸೆ.28 ರಂದು ಕೊಪ್ಪಳ ಜಿಲ್ಲೆ ಬಂದ್

    ಗಂಗಾವತಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆ.28 ರಂದು ಕೊಪ್ಪಳ ಜಿಲ್ಲೆ ಬಂದ್‌ಗೆ ಕರೆ ನೀಡಲಾಗಿದ್ದು, 35 ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ರಾಜ್ಯ ರೈತ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶರಣಗೌಡ ಕೇಸರಹಟ್ಟಿ ತಿಳಿಸಿದ್ದಾರೆ.

    ನಗರದ ಎಪಿಎಂಸಿ ಸಭಾಂಗಣದಲ್ಲಿ ರೈತ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕ ಶನಿವಾರ ಆಯೋಜಿಸಿದ್ದ ವಿವಿಧ ಸಂಘಟನೆಗಳ ಸಭೆಯಲ್ಲಿ ಮಾತನಾಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕೃಷಿ ಕ್ಷೇತ್ರ ದುರ್ಬಲಗೊಳಿಸುವ ಹುನ್ನಾರ ನಡೆಸಿದ್ದು, ಕಾರ್ಪೋರೇಟ್ ಕಂಪನಿಗಳ ಪರ ಯೋಜನೆ ರೂಪಿಸುತ್ತಿದೆ.

    ಇದನ್ನು ಖಂಡಿಸಿ ಸೆ.28ರಂದು ಜಿಲ್ಲೆ ಬಂದ್‌ಗೆ ಕರೆಲಾಗಿದ್ದು, ಎಲ್ಲ ತಾಲೂಕು ಮತ್ತು ಹೋಬಳಿ ವ್ಯಾಪ್ತಿಯಲ್ಲಿ ಬಂದ್ ಮಾಡಲಾಗುವುದು. ಅಂಗಡಿ ಮುಂಗಟ್ಟು ಸೇರಿ ಎಲ್ಲ ವಹಿವಾಟು ಬಂದ್ ಮಾಡಲಾಗುತ್ತಿದ್ದು, ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದರು. ವಿವಿಧ ಸಂಘಟನೆ ಪದಾಧಿಕಾರಿಗಳಾದ ಯರಡೋಣಾ ಶರಣೇಗೌಡ, ಎ.ಎಲ್.ತಿಮ್ಮಣ್ಣ, ನಬೀಸಾಬ್, ಶಂಕ್ರಪ್ಪ ಕುರಹಟ್ಟಿ, ಮಂಜುನಾಥ ಡಗ್ಗಿ, ಹುಸೇನಪ್ಪ, ಮಲ್ಲೇಶ ಗಿಣಿಮೋತಿ, ಹನುಮಂತಪ್ಪ ಮೂಳೆ,ಎ.ಎಲ್.ಹುಲುಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts