More

    ಕಾರ್ಮಿಕ ವಿರೋಧಿ ನೀತಿ ತಡೆಗೆ ಒತ್ತಾಯಿಸಿ ಹೊಸಪೇಟೆಯಲ್ಲಿ ಇಲಾಖೆ ಅಧಿಕಾರಿಗೆ ಸಿಐಟಿಯು ತಾಲೂಕು ಸಮಿತಿ ಮನವಿ

    ಹೊಸಪೇಟೆ: ಬಂಡವಾಳ ಶಾಹಿಗಳ ಹಿತದೃಷ್ಟಿಯಿಂದ ಕಾರ್ಮಿಕರ ಕಾನೂನು ತಿದ್ದುಪಡಿಗೆ ಮುಂದಾಗಿರುವ ಸರ್ಕಾರ ಕ್ರಮ ಖಂಡಿಸಿ ಸಿಐಟಿಯು ತಾಲೂಕು ಸಮಿತಿ ಸೋಮವಾರ ಕಾರ್ಮಿಕ ಇಲಾಖೆ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

    ಮುಖಂಡ ಆರ್.ಭಾಸ್ಕರರೆಡ್ಡಿ ಮಾತನಾಡಿ, ಕೆಲಸದ ಅವಧಿಯನ್ನು 8 ರಿಂದ 12 ತಾಸಿಗೆ ಹೆಚ್ಚಿಸಲು ಮುಂದಾಗಿರುವ ಸರ್ಕಾರಗಳ ಕ್ರಮ ಕಾರ್ಮಿಕ ವಿರೋಧಿ ನೀತಿಯಾಗಿದೆ. ಜತೆಗೆ ಕಾರ್ಖಾನೆ, ಕೈಗಾರಿಕಾ ವಿವಾದ, ಗುತ್ತಿಗೆ ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡುವ ಉದ್ದೇಶಿಸಲಾಗಿದೆ. ಅಲ್ಲದೆ, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸರ್ಕಾರಗಳು ಬಂಡವಾಳ ಹೂಡಿಕೆ ಆಕರ್ಷಿಸುವ ನೆಪದಲ್ಲಿ ಕಾರ್ಮಿಕ ಕಾನೂನುಗಳನ್ನು ಕಸಿದುಕೊಳ್ಳಾಲಾಗುತ್ತಿದೆ. ಆದ್ದರಿಂದ ರಾಜ್ಯಪಾಲರು ಮಧ್ಯಪ್ರವೇಶಿಸಿ ತಿದ್ದುಪಡಿ ತಡೆಯಬೇಕು ಎಂದು ಒತ್ತಾಯಿಸಿದರು.ಸಿಐಟಿಯು ಮುಖಂಡರಾದ ಎಂ.ಗೋಪಾಲ, ನಾಗರತ್ನಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts