More

    ಸಾಲ ನೀಡದೆ ಬ್ಯಾಂಕ್​ನಿಂದ ರೈತ ವಿರೋಧಿ ಚಟುವಟಿಕೆ

    ಕುಂದಗೋಳ: ರೈತ ದೇಶದ ಬೆನ್ನೆಲುಬು. ರೈತ ದುಡಿದರೆ ಮಾತ್ರ ಎಲ್ಲರಿಗೂ ಅನ್ನ ಸಿಗುತ್ತದೆ. ಇಂತಹ ರೈತರಿಗೆ ಸರಿಯಾದ ರೀತಿಯಲ್ಲಿ ಸಾಲ ಸೌಲಭ್ಯ ಕೊಡದೆ ಬ್ಯಾಂಕ್​ನವರು ಮೋಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಆರೋಪಿಸಿದರು.

    ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡ್ಮೂರು ವರ್ಷಗಳಿಂದ ಅತಿವೃಷ್ಠಿ- ಅನಾವೃಷ್ಠಿಯಿಂದ ರೈತ ನೊಂದು ಬೆಂದಿದ್ದಾನೆ. ಇಂಥದ್ದರಲ್ಲಿ ರೈತನಿಗೆ ಬೀಜ-ಗೊಬ್ಬರ ತೆಗೆದುಕೊಳ್ಳಲು ರಾಷ್ಟ್ರೀಕೃತ ಬ್ಯಾಂಕ್​ಗಳು ಸಾಲ ಕೊಡದೆ ಮೋಸ ಮಾಡುತ್ತಿದ್ದಾರೆ. ಒಟಿಎಸ್ ಹೆಸರಿನಲ್ಲಿ ಸಾಲ ತೀರಿಸುವ ಹಾಗೆ ಮಾಡಿ, ಮರು ಸಾಲ ಕೊಡಲು ಸಿವಿಲ್ ಸ್ಕೋರ್ ನೆಪ ಹೇಳಿ ರೈತರಿಗೆ ಸಾಲ ಸೌಲಭ್ಯ ನೀಡದೆ ರೈತ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಇದು ಕುಂದಗೋಳ ತಾಲೂಕಿನಲ್ಲಿ ಮಾತ್ರ ನಡೆಯುತ್ತಿದೆ ಎಂದು ಪರೋಕ್ಷವಾಗಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಗುಡುಗಿದರು.

    ಲೀಡ್ ಬ್ಯಾಂಕ್​ನವರು ಇನ್ನೂ ನಾಲ್ಕು ದಿನಗಳಲ್ಲಿ ರೈತರ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಕಿಸಾನ್ ತಾಲೂಕು ಘಟಕದ ವತಿಯಿಂದ ತಾಲೂಕಿನ ಎಲ್ಲ ರೈತರು ಸೇರಿಕೊಂಡು ಗಾಳಿ ಮರೆಮ್ಮ ದೇವಸ್ಥಾನದಿಂದ ಪ್ರತಿಭಟನೆ ಮೂಲಕ ತಹಸೀಲ್ದಾರ್​ಗೆ ಮನವಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

    ಕಾಂಗ್ರೆಸ್ ಕಿಸಾನ್ ಘಟಕದ ತಾಲೂಕುಧ್ಯಕ್ಷ ಗಂಗಾಧರ ಪಾಣಿಗಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ಯುವಕರಿಗೆ ಉದ್ಯೋಗ, ಬಡವರಿಗೆ ಆಹಾರ, ಮನೆ ಹಾಗೂ ರೈತರಿಗೆ ಬ್ಯಾಂಕ್​ಗಳಿಂದ ಸಾಲ ಸೌಲಭ್ಯ ನೀಡುವಲ್ಲಿ ವಿಫಲವಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ರೈತರಿಗೆ ಸಾಲ ಸಿಗದಿರುವುದರಿಂದ ಬೆಳ್ಳಿ-ಬಂಗಾರ ಒತ್ತೆ ಇಟ್ಟು ಸಾಲ ತೆಗೆದುಕೊಳ್ಳುವ ಪರಿಸ್ಥಿತಿ ರೈತನಿಗೆ ಬಂದೊದಗಿದೆ. ಅದಕ್ಕಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

    ಜಿ.ಡಿ. ಘೊರ್ಪಡೆ, ಬಸವರಾಜ ರೇವಡೆನವರ, ಮಂಜುನಾಥ ತಿರಳೊಕೊಪ್ಪ, ಫಕೀರೇಶ ಗಾಂಜಿ, ಶರಣಪ್ಪ ಕುರಿಯವರ, ಈರಣ್ಣ ಕುರಿ, ಈರಪ್ಪ ನಾಗಣ್ಣವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts