More

    ಸೇವೆಗೆ ಮತ್ತೊಂದು ಹೆಸರು ಹನುಮ

    ತಾಳಿಕೋಟೆ: ಸೇವಾ ಭಾವಕ್ಕೆ ಮತ್ತೊಂದು ಹೆಸರೇ ಹನುಮಂತ. ಶ್ರೀರಾಮಚಂದ್ರನ ಭಕ್ತಿಯಿಂದ ಸೇವೆ ಮಾಡುತ್ತಾ ಎಲ್ಲಾ ಕಾರ್ಯಗಳಲ್ಲೂ ವಿಜಯಿಯಾದ ಎಂದು ಕೈಲಾಸಪೇಟೆಯ ಶ್ರೀ ಬಸವಪ್ರಭು ದೇವರು ಹೇಳಿದರು.

    ಮಂಗಳವಾರ ಪಟ್ಟಣದ ಆಶ್ರಯ ನಗರ ಬಡಾವಣೆಯಲ್ಲಿರುವ ಶ್ರೀ ಮಾರುತೇಶ್ವರ ದೇವಸ್ಥಾನದ 15ನೇ ವರ್ಷದ ಜಯಂತ್ಯುತ್ಸವ ಹಾಗೂ ರಥೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಶ್ರೀ ರಾಮನನ್ನು ನಿಷ್ಠೆಯಿಂದ ಆರಾಧಿಸಿದ್ದರಿಂದಲೇ ಆತನ ಕೀರ್ತಿ ಅಜರಾಮರವಾಗಿದೆ. ಸೀತಾಪಹರಣ ಸಂದರ್ಭದಲ್ಲಿ ಹನುಮನ ಸೇವೆ ಶ್ಲಾನೀಯ ಎಂದರು.

    ಶ್ರೀ ಭವಾನಿ ಮಂದಿರ ಅರ್ಚಕ ವೇ. ಸಂತೋಷಭಟ್​ ಜೋಶಿ ಮಾತನಾಡಿ, ಜೀವನದಲ್ಲಿ ಧರ್ಮಾಚರಣೆ ಮಾಡುತ್ತಾ, ದಾನ, ಧರ್ಮ, ಪರೋಪಕಾರ ಗುಣಗಳನ್ನು ಅಳವಡಿಸಿಕೊಂಡು, ಹನುಮ ಸ್ಮರಣೆ ಮಾಡುತ್ತಿರಬೇಕು ಎಂದರು.

    ಹಿರಿಯ ಪತ್ರಕರ್ತ ಜಿ.ಟಿ. ೂರ್ಪಡೆ ಮಾತನಾಡಿ, ಭಕ್ತರ ಸಹಾಯದಿಂದ ಕಳೆದ ಹದಿನೈದು ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡ ಶ್ರೀ ಮಾರುತಿ ಮಂದಿರದ ಕಾರ್ಯಚಟುವಟಿಕೆಗಳನ್ನು ನೆನಪಿಸಿಕೊಂಡರು. ಶ್ರೀ ಖಾಸ್ಗತೇಶ್ವರ ಮಠ ಉಸ್ತುವಾರಿ ವೆ. ಮುರುಘೇಶ ವಿರಕ್ತಮಠ ಸಾನಿಧ್ಯ ವಹಿಸಿದ್ದರು.

    ವೇ. ಎಸ್​.ಎಂ. ಬೇನಾಳಮಠ ಮಾತನಾಡಿದರು. ನಂತರ ಶ್ರೀ ಮಾರುತೇಶ್ವರ ದೇವರ ರಥೋತ್ಸವ ವೈಭವದಿಂದ ನಡೆಯಿತು. ಸುಮಂಗಲೆಯರಿಂದ ತೊಟ್ಟಿಲೋತ್ಸವ ಜರುಗಿತು. ಲಕ್ಷ್ಮೀಕಾಂತ ಬಡಿಗೇರ, ವೇ. ಗುರುಶಾಂತಯ್ಯ ಮಹಾಸ್ವಾಮಿಗಳು, ಪತ್ರಕರ್ತ ಬಸವರಾಜ ಕಟ್ಟಿಮನಿ, ಶಿಕರಾದ ಪ್ರಕಾಶ ಕಟ್ಟಿಮನಿ, ದೇವರಾಜ ಬಾಗೇವಾಡಿ, ಎಸ್​.ಎಸ್​.ಗಡೇದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts