More

    ಸಾಧನೆಗೆ ಇನ್ನೊಂದು ಹೆಸರು ಡಾ. ವಜ್ರಕುಮಾರ

    ಧಾರವಾಡ: ನಗರದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಧಾರವಾಡವನ್ನು ವಿದ್ಯಾಕೇಂದ್ರವನ್ನಾಗಿ ಮಾಡುವಲ್ಲಿ ಡಾ. ನ. ವಜ್ರಕುಮಾರ ಸಫಲರಾದವರು. ಪೇಜಾವರ ಶ್ರೀಗಳ ಆಶೀರ್ವಾದಿಂದ ೫೦ ವರ್ಷಗಳ ಹಿಂದೆ ಧಾರವಾಡಕ್ಕೆ ಬಂದು ಜೆ.ಎಸ್.ಎಸ್ ಶಾಲೆ, ಕಾಲೇಜು, ಎಸ್‌ಡಿಎಂ ಡೆಂಟಲ್ ಹಾಗೂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಸೇವೆಗೆ ಅಡಿಪಾಯ ಹಾಕಿದರು. ಸಾಧನೆಗೆ ಇನ್ನೊಂದು ಹೆಸರು ಡಾ. ನ. ವಜ್ರಕುಮಾರ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
    ನಗರದ ವಿದ್ಯಾಗಿರಿ ಜೆಎಸ್‌ಎಸ್ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಡಾ. ನ. ವಜ್ರಕುಮಾರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಪ್ರೊ. ವಜ್ರಕುಮಾರ ಅವರ ಶ್ರಮದಿಂದ ಇಂದು ಕೆ.ಜಿಯಿಂದ ಪಿ.ಜಿವರೆಗೆ ಜೆ.ಎಸ್.ಎಸ್‌ನ ೨೫ಕ್ಕೂ ಹೆಚ್ಚು ಅಂಗಸAಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅಧ್ಯಾಪಕರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಿದ್ದರು. ಶಿಕ್ಷಕನಲ್ಲಿರುವ ಗುಣ ವಿಶೇಷತೆಗಳನ್ನು ಗುರುತಿಸಿ ಪೋಷಿಸುತ್ತಿದ್ದರು. ಅವರ ಉನ್ನತ ಮೌಲ್ಯಗಳು ಇಂದು ಜೆ.ಎಸ್.ಎಸ್ ಸಂಸ್ಥೆಯ ಕೀರ್ತಿಯನ್ನು ನಿರಂತರ ಹೆಚ್ಚಿಸುತ್ತಿವೆ ಎಂದರು.
    ಮಹಾವೀರ ಉಪಾಧ್ಯೆ, ಸೂರಜ್ ಜೈನ್, ಸಾಧನಾ ಎಸ್., ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts