More

    ಕನ್ನಡದ ಚಿತ್ರಕ್ಕೆ ಕೇರಳದ ಕಥೆ; ಸೈಕೋ ಕಿಲ್ಲರ್ ಒಬ್ಬನ ‘ದ್ವಿಪಾತ್ರ’

    ಬೆಂಗಳೂರು: ಕನ್ನಡದಲ್ಲಿ ಸೈಕೋ ಕಿಲ್ಲರ್​ಗಳ ಕುರಿತಾದ ಹಲವು ಕಥೆಗಳ ಬಂದಿವೆ. ಈಗ ಆ ಸಾಲಿಗೆ ‘ದ್ವಿಪಾತ್ರ’ ಎಂಬ ಹೊಸ ಚಿತ್ರವೂ ಸೇರಿದೆ. ವಿಶೇಷವೆಂದರೆ, ಕೇರಳದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ.

    ಇದನ್ನೂ ಓದಿ: ಈ ಚಿತ್ರದಲ್ಲಿರೋದು ಒಂದೇ ಪಾತ್ರ … ‘ರಾಘು’ ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಹೊಸ ಪ್ರಯೋಗ …

    ಈ ಚಿತ್ರವನ್ನು ನಿರ್ದೇಶಿಸಿರುವುದು ಶ್ರೀವತ್ಸ ಆರ್. ಮೂಲತಃ ಅವರೊಬ್ಬ ಚಾರ್ಟರ್ಡ್​ ಅಕೌಂಟೆಂಟ್​ ಅಂತೆ. ಆದರೆ, ಸಿನಿಮಾ ಬಗ್ಗೆ ಆಸಕ್ತಿ ಇದ್ದ ಕಾರಣ, ಅವರು ಚಿತ್ರರಂಗದತ್ತ ಬಂದಿದ್ದಾರೆ. ೨೦೧೬ರಲ್ಲಿ ಕೇರಳದಲ್ಲಿ ನಡೆದ ಒಂದು ಘಟನೆಯನ್ನಿಟ್ಟುಕೊಂಡು ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಡಬಲ್ ಡಿಎನ್‌ಎ ಮನುಷ್ಯನಿಗಿದ್ದರೆ ಏನಾಗುತ್ತದೆ, ಆತನೊಬ್ಬ ಸೈಕೋಕಿಲ್ಲರ್ ಆದರೆ ಹೇಗಿರುತ್ತದೆ ಎಂಬ ವಿಷಯಗಳನ್ನಿಟ್ಟುಕೊಂಡು ಅವರು ಈ ಚಿತ್ರದ ಕಥೆ ಮಾಡಿದ್ದಾರಂತೆ. ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳಿದ್ದು, ಈ ಚಿತ್ರಕ್ಕೆ ಬಿಜಿಎಂ ದೊಡ್ಡ ಶಕ್ತಿ. ಚಿತ್ರಕಥೆ ತುಂಬಾ ಫಾಸ್ಟಾಗಿದ್ದು, ಕ್ಷಣ ಮಿಸ್ ಆದರೂ ಲಿಂಕ್ ತಪ್ಪಿಹೋಗುತ್ತದೆ’ ಎನ್ನುತ್ತಾರೆ.

    ‘ಲಕ್ಷ್ಮೀ ಬಾರಮ್ಮ’ ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಚಂದು ಗೌಡ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ‘ಸೀರಿಯಲ್ ಕಿಲ್ಲರ್ ಒಬ್ಬ ಹೆಣ್ಣುಮಕ್ಕಳನ್ನು ಕೊಲೆ ಮಾಡುತ್ತಿರುತ್ತಾನೆ, ಆತ ಏಕೆ ಮತ್ತು ಹೇಗೆ ಕೊಲೆಗಾರನಾದ ಎಂಬ ಕಾರಣವನ್ನು ಕಂಡುಹಿಡಿಯುವ ಡಿಸಿಪಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ’ ಎಂದು ಹೇಳುತ್ತಾರೆ.

    ಚಿತ್ರದಲ್ಲಿ ನಾಯಕಿಯರಾಗಿ ಪಾಯಲ್​ ಚಂಗಪ್ಪ ಮತ್ತು ಸ್ನೇಹ ಹೆಗಡೆ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಹಿರಿಯ ನಟ ಅವಿನಾಶ್, ನೀನಾಸಂ ಅಶ್ವಥ್, ಮಾಳವಿಕಾ ಅವಿನಾಶ್, ವಿಕ್ಕಿ ಕೋಲಾರ, ಸತ್ಯ, ‘ಬಿಗ್‌ ಬಾಸ್’ ರಘುಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,

    ಇದನ್ನೂ ಓದಿ: ಕಾಲಿವುಡ್​ಗೆ ಹೊಂಬಾಳೆ ಎಂಟ್ರಿ; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘು ತಥಾ’ ನಿರ್ಮಾಣ

    ‘ದ್ವಿಪಾತ್ರ’ ಚಿತ್ರಕ್ಕೆ ಮಹರಾಜ್​ ಸಂಗೀತ ಸಂಯೋಜಿಸಿದ್ದು, ಸತ್ಯಾಶ್ರಯ ನಿರ್ಮಾಣ ಮಾಡಿದ್ದಾರೆ. ಕೋವಿಡ್​ ಸಮಯದಲ್ಲಿ ಪ್ರಾರಂಭವಾದ ಈ ಚಿತ್ರವು ಇದೀಗ ಮುಕ್ತಾಯದ ಹಂತಕ್ಕೆ ತಲುಪಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

    ರವಿವರ್ಮ ಆಕ್ಷನ್​ನಲ್ಲಿ ವಿಜಯಾನಂದ; ವಿಂಗ್ ಕಮಾಂಡರ್ ಅಭಿನಂದನ್ ವೆಬ್​ಸರಣಿಯಲ್ಲಿ ಕನ್ನಡಿಗನ ಕಮಾಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts