More

    ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಇದೇನಿದು ಮತ್ತೊಂದು?!

    ಶಿವಮೊಗ್ಗ: ರಾಜ್ಯಾದ್ಯಂತ ಹಿಜಾಬ್​-ಕೇಸರಿ ಸಂಘರ್ಷ ತಾರಕಕ್ಕೇರಿರುವಾಗಲೇ ಮತ್ತೊಂದು ವಿಷಯ ಹರಿದಾಡುತ್ತಿದ್ದು, ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಮತ್ತಷ್ಟು ಧಕ್ಕೆ ಉಂಟಾಗುವ ವಾತಾವರಣ ಗೋಚರಿಸಲಾರಂಭಿಸಿದೆ.

    ನಿನ್ನೆಯಷ್ಟೇ ದಾವಣಗೆರೆ ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆ ಬಳಿ ಒಂದು ಸಮುದಾಯದ ಕೆಲವರು ಗುಂಪುಗೂಡಿ ಪ್ರತಿಭಟನೆ ನಡೆಸಿದ್ದಷ್ಟೇ ಅಲ್ಲದೆ, ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದ್ದರು. ಈಗ ಅಂಥದ್ದೇ ವಿಷಯ ಬೇರೆ ಕಡೆ ವ್ಯಾಪಿಸಲಾರಂಭಿಸಿದೆ.

    ಶಾಲಾ ಮಕ್ಕಳ ನಡುವೆ ಹಿಜಾಬ್​-ಕೇಸರಿ ಸಂಘರ್ಷ ಸಂಕೀರ್ಣಗೊಂಡಿರುವಾಗಲೇ ಪಾಕಿಸ್ತಾನದ ಧ್ವಜವೂ ನುಸುಳಿದೆ. ಶಿವಮೊಗ್ಗದ ಶಾಲೆಯೊಂದರ ವಾಟ್ಸ್​ಆ್ಯಪ್ ಗ್ರೂಪ್​ಗಳಲ್ಲಿ ವಿದ್ಯಾರ್ಥಿಗಳು ಪಾಕಿಸ್ತಾನದ ಧ್ವಜ ಶೇರ್ ಮಾಡಿಕೊಂಡಿರುವುದು ಬಹಿರಂಗಗೊಂಡಿದೆ.
    ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಒಂದು ಕೋಮಿನ ವಿದ್ಯಾರ್ಥಿಗಳು ಪಾಕಿಸ್ತಾನದ ಧ್ವಜ ಶೇರ್ ಮಾಡಿದ್ದಾರೆ. ಇದೇ ಕಾರಣಕ್ಕೆ ಇಂದು ಸಹ್ಯಾದ್ರಿ ಕಾಲೇಜಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು ಎನ್ನಲಾಗಿದೆ. ಆ ಬಳಿಕ ಬಾಪೂಜಿ ಕಾಲೇಜಿಗೂ ಗಲಾಟೆ ವ್ಯಾಪಿಸಿದ್ದು, ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ.

    ಇದನ್ನೂ ಓದಿ: ಕೇಸರಿ-ಹಿಜಾಬ್ ಸಂಘರ್ಷ: ಕುಂದಾಪುರಕ್ಕೆ ಹೈದರಾಬಾದ್ ಮುಸ್ಲಿಮರ ಆಗಮನ

    ಬಿಜೆಪಿ ಆರೋಪ: ಶಿವಮೊಗ್ಗದಲ್ಲಿನ ಪ್ರಕ್ಷುಬ್ದ ಸ್ಥಿತಿಗೆ ಕೆಲವು ವಾಟ್ಸ್​ಆ್ಯಪ್​ ಗ್ರೂಪ್‌ಗಳಲ್ಲಿ ಪಾಕ್ ಧ್ವಜಗಳನ್ನು ಶೇರ್ ಮಾಡಿದ್ದೇ ಕಾರಣ ಎನ್ನಲಾಗಿದೆ. ಇಡೀ ಘಟನಾವಳಿಗಳ ಹಿಂದೆ ಪಿಎಫ್‌ಐ ಹಾಗೂ ಸಿಎಫ್‌ಐ ಸಂಘಟನೆಗಳ ಕೈವಾಡವಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

    ಎರಡು ದಿನ ಶಿವಮೊಗ್ಗ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ನಡೆದಿರುವ ಹಿಜಾಬ್ ಪರ ಹಾಗೂ ವಿರೋಧದ ಪ್ರತಿಭಟನೆಗಳ ಬಗ್ಗೆ ತನಿಖೆ ನಡೆಸಬೇಕು. ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದೆ. ಇದು ಸಮವಸ್ತ್ರಕ್ಕೆ ಸಂಬಂಧಿಸಿದ ವಿವಾದವಲ್ಲ. ಕೋಮುಭಾವನೆ ಕೆರಳಿಸುವ ಷಡ್ಯಂತ್ರವಾಗಿದೆ ಎಂದು ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ದೂರು ಸಲ್ಲಿಸಿದ್ದಾರೆ.

    ಮದರಸಗೆ ಬರುತ್ತಿದ್ದ ಬಾಲಕಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಉಸ್ತಾದ್​ನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts