More

    ಕೊನೆಗೂ ನೀಟ್, ಜೆಇಇ ಮೇನ್ಸ್​ ಎಕ್ಸಾಂ ಡೇಟ್​ ಫಿಕ್ಸ್

    ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಮಂಗಳವಾರ ನೀಟ್​ ಮತ್ತು ಐಐಟಿ-ಜೆಇಇ(ಮುಖ್ಯ) ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸಿದೆ. ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಯು ಜುಲೈ 26ರಂದು ನಡೆಯಲಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಜೆಇಇ ಮುಖ್ಯ ಪರೀಕ್ಷೆಯು ಜುಲೈ18 ರಿಂದ 23ರವರೆಗೆ ನಡೆಯಲಿದೆ. ಆಗಸ್ಟ್‌ನಲ್ಲಿ ಜೆಇಇ-ಅಡ್ವಾನ್ಸ್ಡ್ ಪರೀಕ್ಷೆ ನಡೆಯಲಿದ್ದು, ನಿಖರ ದಿನಾಂಕ ಶೀಘ್ರ ಪ್ರಕಟಿಸಲಾಗುವುದು ಎಂದು ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.

    ಇಲಾಖೆಯ ಫೇಸ್​ಬುಕ್​ ಮತ್ತು ಟ್ವಿಟರ್​ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಪರೀಕ್ಷಾ ದಿನಾಂಕ ಘೋಷಿಸಿದರು. ಐಐಟಿ-ಜೆಇಇ (ಮುಖ್ಯ) ಪರೀಕ್ಷೆ ಜುಲೈ 18, 20, 21, 22, ಮತ್ತು 23ರಂದು ನಡೆಯಲಿದೆ. ಐಐಟಿ-ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯು ಆಗಸ್ಟ್‌ನಲ್ಲಿ ಯಾವ ದಿನ ನಡೆಯಲಿದೆ ಎಂದು ನಂತರ ತಿಳಿಸಲಾಗುವುದು ಎಂದಿದ್ದಾರೆ.

    ಇದನ್ನೂ ಓದಿರಿ ಲಾಕ್​ಡೌನ್​ನಲ್ಲೇ ರಾಜಕುಮಾರಿ ಕಿರೀಟ ಧರಿಸಿದ ಪಿಗ್ಗಿ!

    ಮೇ 3ರಂದು ನಡೆಯಬೇಕಿದ್ದ ನೀಟ್​ ಪರೀಕ್ಷೆಯು ಕರೊನಾ ಲಾಕ್​ಡೌನ್​ನಿಂದಾಗಿ ರದ್ದಾಗಿತ್ತು. ನೀಟ್-2020 ಪರೀಕ್ಷೆಗೆ 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ದೇಶದಲ್ಲಿ ತಲೆದೋರಿರುವ ಕೋವಿಡ್​-19 ಬಿಕ್ಕಟ್ಟಿನಿಂದಾಗಿ ಎರಡು ತಿಂಗಳು ಈ ಪರೀಕ್ಷೆಯನ್ನು ಮುಂಡೂಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದ್ದಾರೆ. ಜೂನ್​ನಲ್ಲಿ ಪರೀಕ್ಷೆ ನಡೆಯಲಿದೆ ಎಂಬ ಮಾತೂ ಕೇಳಿ ಬಂದಿತ್ತು. ಈಗ ಎಲ್ಲ ಗೊಂದಲಕ್ಕೂ ಸಚಿವರು ತೆರೆ ಎಳೆದಿದ್ದಾರೆ.

    ಸಾಮಾನ್ಯವಾಗಿ ನೀಟ್​ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಒಂದು ತಿಂಗಳ ಮೊದಲೇ ವಿತರಣೆ ಮಾಡಲಾಗುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಈ ಬಾರಿ ಪರೀಕ್ಷೆಗೆ ಒಂದು ವಾರ ಇಲ್ಲವೇ 10 ದಿನ ಇರುವಂತೆ ಪ್ರವೇಶಪತ್ರ ನೀಡಲಾಗುತ್ತದೆ. ವಿದ್ಯಾರ್ಥಿಗಳು ಪರಿಸ್ಕೃತ ವೇಳಾಪಟ್ಟಿಯ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ಗಳನ್ನು ನೋಡುತ್ತಿರಬೇಕು ಎಂದು ಸೂಚಿಸಿದ್ದಾರೆ.
    ಕೋವಿಡ್​-19 ಉಂಟು ಮಾಡಿರುವ ಬಿಕ್ಕಟ್ಟಿನಿಂದಾಗಿ ಮುಂಬರುವ ಶೈಕ್ಷಣಿಕ ವರ್ಷದ ಪಠ್ಯಕ್ರಮ ಕಡಿಮೆ ಮಾಡಲು ಸಿಬಿಎಸ್‌ಇ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿರಿ ಆರೋಗ್ಯ ಸೇತು ಆ್ಯಪ್​ ಇಲ್ಲದಿದ್ದರೆ ಜೈಲು ಸೇರಬೇಕಾಗುತ್ತೆ ಎಚ್ಚರ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts