More

    ಬಿಜೆಪಿ ಲಿಂಗಾಯತ ನಾಯಕರ ಸಭೆ; ಲಿಂಗಾಯತರೇ ಮುಂದಿನ ಸಿಎಂ ಅಂತ ಘೋಷಿಸಲು ಆಗ್ರಹ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಮನೆಯಲ್ಲಿ ಲಿಂಗಾಯತ ನಾಯಕರೆಲ್ಲ ಒಗ್ಗೂಡಿ ಸಭೆ ನಡೆಸುತ್ತಿದ್ದು, ಲಿಂಗಾಯತರೇ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಘೋಷಿಸುವ ನಿಟ್ಟಿನಲ್ಲಿ ಆಗ್ರಹ ವ್ಯಕ್ತವಾಗಿದೆ. ಹೀಗೊಂದು ಸಭೆಗೆ ಮಹತ್ವದ ಹಿನ್ನೆಲೆ ಕೂಡ ಇದೆ.

    ಬಿಜೆಪಿಯಲ್ಲಿನ ಲಿಂಗಾಯತ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ‌ಲಕ್ಷ್ಮಣ ಸವದಿ ಅವರು ಪಕ್ಷವನ್ನು ಬಿಟ್ಟು ಹೋಗಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಲಿಂಗಾಯತ ವಿರೋಧಿ ಎಂಬ ಅಪಸ್ವರ ಕೇಳಿಬರುತ್ತಿರುವುದರಿಂದ ಲಿಂಗಾಯತ ನಾಯಕರೆಲ್ಲ ಸಭೆ ಸೇರಿದ್ದು, ಲಿಂಗಾಯತ ಕೇಂದ್ರಿತವಾಗಿ ಮಹತ್ವದ ಚರ್ಚೆಯಲ್ಲಿ ತೊಡಗಿದ್ದಾರೆ.

    ಇದನ್ನೂ ಓದಿ: ಪತಿಯ ನಿಧನ, ಬಳಿಕ ಗರ್ಭಪಾತವಾಗಿ ಮಗು ಕೂಡ ಸಾವು; ಇನ್ನು ಮಕ್ಕಳಾಗಲ್ಲವೆಂದು ಮಗುವನ್ನು ಕದ್ದ ಮಹಿಳೆಯ ಬಂಧನ

    ಬಿಜೆಪಿ ಲಿಂಗಾಯತ ವಿರೋಧಿ ‌ಎಂಬ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳುವುದು ಬಹುಮುಖ್ಯವಾಗಿದ್ದು, ಲಿಂಗಾಯತರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುವ ನಿಟ್ಟಿನಲ್ಲಿ ಒಕ್ಕೊರಲ ಆಗ್ರಹ ವ್ಯಕ್ತವಾಗಿದೆ. ಅಧಿಕಾರ ಬರಲಿ, ಬಿಡಲಿ ಮುಂದಿನ ಸಿಎಂ ಲಿಂಗಾಯತ ಸಮುದಾಯದವರು ಎಂದು ಮೊದಲು ಘೋಷಿಸಿ. ಸಂಭಾವ್ಯ ಹಾನಿ ತಪ್ಪಿಸಲು ಇದೊಂದೇ ಉಪಾಯ ಎಂಬ ಅಭಿಪ್ರಾಯವೂ ಸಭೆಯಲ್ಲಿ ಹೊರಹೊಮ್ಮಿದೆ.

    ಇದನ್ನೂ ಓದಿ: ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ವೀರಶೈವ ಲಿಂಗಾಯತ ಮುಖಂಡರು ಪಕ್ಷದಿಂದ ದೂರ ಸರಿದ‌ ಹಿನ್ನೆಲೆಯಲ್ಲಿ ಲಿಂಗಾಯತ ಮತಗಳ ವಿಭಜನೆಯ ಆತಂಕದಲ್ಲಿರುವ ಹೈಕಮಾಂಡ್​ಗೆ ತಮ್ಮ ಈ ಸಲಹೆ ನೀಡಲು ಕೂಡ ನಿರ್ಧರಿಸಲಾಗಿದೆ. ಲಿಂಗಾಯತರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುವುದೊಂದೇ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಹಿಮ್ಮೆಟ್ಟಿಸಲು ಇರುವ ಉಪಾಯ ಎಂದು ನಾಯಕರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಶ್ರೀರಾಮುಲು ಮಾತ್ರವಲ್ಲ, ಅವರ ಪತ್ನಿ ಮತ್ತು ಮಕ್ಕಳಿಬ್ಬರೂ ಕೋಟ್ಯಧಿಪತಿಗಳು!

    ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿ ಆಗಿದ್ದಾರೆ. ಒಂದು ಬಾರಿಯಷ್ಟೇ ಒಕ್ಕಲಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ಮುಖ್ಯಮಂತ್ರಿ ಲಿಂಗಾಯತ ಸಮುದಾಯದವರೇ ಎಂಬುದಾಗಿ ಪ್ರಚುರ ಪಡಿಸುವುದನ್ನು ಉತ್ತರ ಕರ್ನಾಟಕದ‌ ಪ್ರಚಾರದ ಸಮಯದಲ್ಲಿ ಗಂಭೀರವಾಗಿ ಪರಿಗಣಿಸುವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಮೂಲಗಳಿಂದ ತಿಳಿದು ಬಂದಿದೆ.

    ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ

    ಈ ಸಭೆಯಲ್ಲಿ ವಿ.ಸೋಮಣ್ಣ, ಶಂಕರಪಾಟೀಲ್ ಮುನೇನಕೊಪ್ಪ, ಬಸನಗೌಡ ಪಾಟೀಲ್ ಯತ್ನಾಳ, ಬಿ.ಸಿ.ಪಾಟೀಲ್, ಅರವಿಂದ ಬೆಲ್ಲದ್, ರಾಜೇಶ್ ಜಿ.ವಿ. ಮುಂತಾದವರು ಪಾಲ್ಗೊಂಡಿದ್ದಾರೆ.

    ಜೆಡಿಎಸ್​ ಪಟ್ಟಿಯಲ್ಲಿ ಮಹತ್ವದ ಬದಲಾವಣೆ; 12 ಕ್ಷೇತ್ರಗಳಲ್ಲಿ ಹೊಸದಾಗಿ ಅಭ್ಯರ್ಥಿಗಳ ಘೋಷಣೆ!

    ‘ಈ ಸಲ ಯಾರಿಗೆ ಮತ ಹಾಕಲಿ?’ ಎಂದು ಕೇಳಿದರೆ ಇದು ಏನನ್ನುತ್ತೆ?: ಕೃತಕ ಬುದ್ಧಿಮತ್ತೆಯ ಬುದ್ಧಿಮಾತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts