More

    ಅರಸೀಕೆರೆಯಲ್ಲಿ ಶ್ರೀ ಬಸವೇಶ್ವರ ಕಾನ್ವೆಂಟ್ ವಾರ್ಷಿಕೋತ್ಸವ

    ಅರಸೀಕೆರೆ: ವ್ಯಾಸಂಗದ ಅವಧಿಯಲ್ಲಿ ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ನಯ, ವಿನಯ, ಗುರು, ಹಿರಿಯರಿಗೆ ಗೌರವ ನೀಡುವ ಪರಿಪಾಠ ಕಲಿಸುವುದು ಮೊದಲ ಆದ್ಯತೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ತಾಲೂಕಿನ ಮಾಡಾಳು ಗ್ರಾಮದ ನಿರಂಜನ ಪೀಠದ ಆವರಣದಲ್ಲಿರುವ ಶ್ರೀ ಬಸವೇಶ್ವರ ಕಾನ್ವೆಂಟ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರ ದಿನಚರಿ ಎಲ್ಲರಿಗೂ ಪ್ರೇರಣೆಯಾಗುವಂತಿರಬೇಕು ಎಂದರು.

    ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ರುದ್ರಮುನಿ ಸ್ವಾಮೀಜಿ, ತಹಸೀಲ್ದಾರ್ ಎ.ಜಿ.ಸಂತೋಷ್ ಕುಮಾರ್, ಜಿಪಂ ಸದಸ್ಯ ಮಾಡಾಳು ಸ್ವಾಮಿ, ತಾಪಂ ಸದಸ್ಯರಾದ ಯಶೋದಾ ನಟರಾಜ್, ವನಜಾ ಪ್ರಕಾಶ್ ಮೂರ್ತಿ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಹಿರಿಯ ಪತ್ರಕರ್ತ ಮಾಡಾಳು ಶಿಲಿಂಗಪ್ಪ, ಮುಖ್ಯ ಶಿಕ್ಷಕ ಎಂ.ಸಿ.ಸತೀಶ್, ಸೋರಲಮಾವು ಗ್ರಾಪಂ ಸದಸ್ಯ ಸ್ವಾಮಿ, ವಿಜಯಕುಮಾರ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts