More

    ಕಾಂಗ್ರೆಸ್ ನಾಯಕರಿಗೆ ಖಿನ್ನತೆ: ಅಣ್ಣಾಮಲೈ

    ಉಡುಪಿ: ಕರ್ನಾಟಕಕ್ಕೆ ಕೇಂದ್ರ ನಾಯಕರ ಸರಣಿ ಭೇಟಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಟೀಕಿಸುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ಕಾಣಿಸಿಕೊಳ್ಳುವುದು ಕಾಂಗ್ರೆಸ್ ನಾಯಕರ ಪರಿಪಾಠ. ಆದರೆ ತಮಿಳುನಾಡಿನಲ್ಲಿ ಚುನಾವಣೆ ಇಲ್ಲದಿದ್ದರೂ ಕಳೆದ 2 ತಿಂಗಳಿನಲ್ಲಿ 43 ಕೇಂದ್ರ ಸಚಿವರು ಬಂದಿದ್ದಾರೆ. ದೇಶದಲ್ಲಿ ಈಗ ಜನಕೇಂದ್ರಿತ ಆಡಳಿತ ಇರುವ ಕಾರಣ ಎಲ್ಲಾ ಕಡೆ ಓಡಾಡುತ್ತಾರೆ. ಕಾಂಗ್ರೆಸ್ ನಾಯಕರು ಖಿನ್ನತೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕರ್ನಾಟಕ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರಲ್ಲಿ ಕಾಂಗ್ರೆಸ್ ಮಂತ್ರಿಯ ಅಪಾಯಿಂಟ್ಮೆಂಟ್ ಸಿಗಲು 5 ಲಕ್ಷ ರೂ. ಕೊಡಬೇಕಿತ್ತು. ಈ ಬಗ್ಗೆ ದಾಖಲೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ರಿಟೈರ್ಮೆಂಟ್ ಅನ್ನೋದೆ ಇಲ್ಲ. ಒಂದು ಕುಟುಂಬದ ಕೈಕೆಳಗೆ ಕಾಂಗ್ರೆಸ್ ಇದೆ. ಕಾಂಗ್ರೆಸ್‌ನಲ್ಲಿ ಕರ್ಮವೀರ ಕಾಮರಾಜರ ಫೋಟೋ ಕೈ ಬಿಟ್ಟಿದ್ದಾರೆ. ಈಗ ದೇಶದಲ್ಲಿರುವ ಕಾಂಗ್ರೆಸ್ ಒಂದು ಕುಟುಂಬದ ಪಕ್ಷ ಎಂದರು.

    ತಮಿಳುನಾಡಿನಲ್ಲಿ ಸೈನಿಕ ಹತ್ಯೆ ವಿಚಾರದಲ್ಲಿ ಪಕ್ಷದ ವತಿಯಿಂದ 10 ಲಕ್ಷ ರೂ. ನೀಡುತ್ತೇವೆ. ನಾವು ಸದಾ ಕಾಲ ಸೈನಿಕರ ಜೊತೆಗಿರುತ್ತೇವೆ. ಡಿ ಎಂ ಕೆ ಸರ್ಕಾರದಲ್ಲಿ ನೈತಿಕತೆ ಇಲ್ಲ. ಅವರು ಸೈನಿಕರಿಗೆ ಕನಿಷ್ಠ ಗೌರವ ನೀಡುತ್ತಿಲ್ಲ. ಅವರದೇ ಪಕ್ಷದ ಕೌನ್ಸಿಲರ್ ಹತ್ಯೆ ಮಾಡಿದರೂ ಮುಖ್ಯಮಂತ್ರಿಗಳಿಗೆ ಏನೂ ಅನಿಸಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಉತ್ತಮ ಬೆಳವಣಿಗೆ ಕಾಣುತ್ತಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ನಾಲ್ಕು ಲೋಕಸಭೆ 4 ವಿಧಾನಸಭಾ ಸದಸ್ಯರನ್ನು ಹೊಂದಿದ್ದೆವು. ಈಗ ಬಿಜೆಪಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. 2024ರಲ್ಲಿ ಗಣನೀಯ ಸಂಖ್ಯೆಯ ಲೋಕಸಭಾ ಸದಸ್ಯರು ಗೆಲ್ಲಲಿದ್ದಾರೆ. ಹಿರಿಯರು ಯುವಕರು ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ತಮಿಳುನಾಡು ಯಾವತ್ತು ರಾಷ್ಟ್ರೀಯ ಪಕ್ಷಗಳನ್ನು ಸಪೋರ್ಟ್ ಮಾಡಿದೆ. 1967 ರವರೆಗೆ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಅಧಿಕಾರದಲ್ಲಿತ್ತು. ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ಹೊರಟ ಕಾರಣ ಅಧಿಕಾರ ಕಳೆದುಕೊಂಡಿತು. ಆಮೇಲೆ ದ್ರಾವಿಡಿಯನ್ ಪಕ್ಷಗಳು ಅಧಿಕಾರ ಪಡೆಯುತ್ತಾ ಬಂದಿವೆ. 2024 ಮತ್ತು 26ರ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts