More

    ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಕಾರ್ಯಕ್ರಮ ಫೆ. 24ರಂದು

    ಮುಂಡರಗಿ: ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯು 2024ರ ಡಿಸೆಂಬರ್​ಗೆ 100 ವರ್ಷ ಪೂರೈಸಲಿದೆ. ಸಮಿತಿಯ ಶತಮಾನೋತ್ಸವ ಹಿನ್ನೆಲೆಯಲ್ಲಿ 2024ರ ವರ್ಷದುದ್ದಕ್ಕೂ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರ ಅಪ್ಪಣೆ ಮೇರೆಗೆ 100 ಕಾರ್ಯಕ್ರಮ ಆಯೋಜಿಸುವುದಕ್ಕೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಹೇಳಿದರು.


    ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನದಾನೀಶ್ವರ ವಿದ್ಯಾ ಸಮಿತಿಯು 1912ರಲ್ಲಿ ಸಂಸ್ಕೃತ ಪಾಠ ಶಾಲೆ ಹಾಗೂ ಉಚಿತ ಪ್ರಸಾದ ನಿಲಯ ಸ್ಥಾಪಿಸಿತು. 1924ರಲ್ಲಿ ನ್ಯೂ ಇಂಗ್ಲಿಷ್ ಮಾಧ್ಯಮ ಶಾಲೆ 12 ವಿದ್ಯಾರ್ಥಿಗಳೊಂದಿಗೆ ಆರಂಭವಾಯಿತು. ಈಗ ವಿದ್ಯಾ ಸಮಿತಿಯ 33 ಅಂಗ ಸಂಸ್ಥೆಗಳನ್ನು ಹೊಂದಿದೆ ಎಂದರು.


    ಶತಮಾನೋತ್ಸವ ಕಾರ್ಯಕ್ರಮದ ಪ್ರಾರಂಭೋತ್ಸವವನ್ನು ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸವದಲ್ಲಿ ಫೆ. 24ರಂದು ನಡೆಸಲಾಗುತ್ತದೆ. ವಿವಿಧ ಸ್ವಾಮೀಜಿಗಳು, ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಶಿಕ್ಷಣ ತಜ್ಞರಿಂದ ವಿಶೇಷ ಉಪನ್ಯಾಸ ನಡೆಸಲಾಗುವುದು. ಅಂದಿನಿಂದ ಪ್ರಸ್ತುತ ವರ್ಷ ಪೂರ್ತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಯುವಜನೋತ್ಸವ, ರಸಪ್ರಶ್ನೆ, ಅಂತರ ಕಾಲೇಜ್ ಹಬ್ಬ, ಕ್ರೀಡಾಹಬ್ಬ, ಜನಪದ ಹಬ್ಬ, ಆರೋಗ್ಯ ಶಿಬಿರ, ಆಹಾರ, ಉದ್ಯೋಗ ಮೇಳ, ಯುವ ಸಾಹಿತ್ಯ ಮೇಳ, ಕಲೆ, ಕವನ, ಚುಟುಕು ಸಾಹಿತ್ಯ, ವಿದ್ಯಾ ಸಮಿತಿ ಶತಮಾನದ ದಾಖಲೆಗಳ ಸಂಪುಟ, ಶ್ರೀಗಳ ಭವ್ಯ ಇತಿಹಾಸವುಳ್ಳ ಗ್ರಂಥ, ಹೀಗೆ ಹಲವು ಕಾರ್ಯಕ್ರಮ ನಡೆಸಲಾಗುತ್ತದೆ. ಕಾರ್ಯಕ್ರಮದ ಆಯೋಜನೆ ಹಿನ್ನೆಲೆ ಜ. 8ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ವರ್ಷದ ಕೊನೆಯಲ್ಲಿ 3ದಿನದ ಮುಕ್ತಾಯ ಕಾರ್ಯಕ್ರಮ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.


    ಸುದ್ದಿಗೋಷ್ಠಿಯಲ್ಲಿ ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ, ಬಸವರಾಜ ಬನ್ನಿಕೊಪ್ಪ, ಎಸ್.ಬಿ. ಹಿರೇಮಠ, ಎಸ್.ಸಿ. ಚಕ್ಕಡಿಮಠ, ಬಿ.ಎಫ್. ಈಟಿ, ಶಿವರಾಜಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts