More

    ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಹೋಮ, ಮಂಗಳೂರು ಟೀಂನಿಂದ ಗಾಳಿಪಟ ಹಾರಾಟ

    ಗಂಗಾವತಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಮ ಬಂಟ ಹನುಮಂತನ ಜನ್ಮಸ್ಥಳವಾದ ತಾಲೂಕಿನ ಅಂಜನಾದ್ರಿಯಲ್ಲಿ ಹೋಮ-ಹವನ, ಪಾರಾಯಣ, ಸಂಕೀರ್ತರ, ಗಾಳಿಪಟ ಹಾರಾಟ ಮೊದಲಾದ ಕಾರ್ಯಕ್ರಮಗಳು ಬುಧವಾರ ನಡೆದವು.

    ಧಾರ್ಮಿಕ ಮತ್ತು ದತ್ತಿ ಇಲಾಖೆ ಹಾಗೂ ಯುವಾ ಬಿಗ್ರೇಡ್ ಸಂಯುಕ್ತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಪತಂಜಲಿ ಯೋಗ ಸಮಿತಿಯ ಮುಖಂಡ ಭವರ್‌ಲಾಲ ಆರ್ಯ ಮತ್ತು ವಿಜಯನಗರ ಅರಸರ ವಂಶಸ್ಥರು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಇತರರು ಪಾಲ್ಗೊಂಡಿದ್ದರು. ಜಿಟಿ ಜಿಟಿ ಮಳೆಯ ನಡುವೆಯೂ ಸಿದ್ಧತೆ ಮಾಡಿದ್ದು, ಮೂರು ತಾಸು ಹೋಮ-ಹವನ ನಡೆದವು. ಇದರಂಗವಾಗಿ ಇಡೀ ಬೆಟ್ಟವೇ ಭಗವಾಧ್ವಜಗಳಿಂದ ರಾರಾಜಿಸುತ್ತಿತ್ತು.

    ಗಾಳಿಪಟ ಹಾರಾಟ
    ಮಂಗಳೂರು ಟೀಂ ಆಯೋಜಿಸಿದ್ದ ಗಾಳಿಪಟ ಹಾರಾಟ ಗಮನ ಸೆಳೆಯಿತು. ಶ್ರೀರಾಮ, ಹನುಮ, ಗರುಡ ಪಕ್ಷಿ ಚಿತ್ರಗಳಿರುವ ಗಾಳಿಪಟ ಹಾರಿಸಿ, ರಾಮ ಮಂದಿರ ನಿರ್ಮಾಣಕ್ಕೆ ವಿಜಯದ ಸಂಕೇತ ಸೂಚಿಸಲಾಯಿತು. ಕರಸೇವೆಗಾಗಿ ಆಯೋಧ್ಯೆಗೆ ತೆರಳಿದ್ದ ಕೊಪ್ಪಳ ಜಿಲ್ಲಾ ಕಾರಸೇವಕರನ್ನು ಯುವಾ ಬ್ರಿಗೇಡ್ ನಿಂದ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts