More

    ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್​ ಪುಣ್ಯಭೂಮಿ ತೆರವು ಮಾಡೋದಕ್ಕೆ ಬಿಡುವುದಿಲ್ಲ ಎಂದು ಅನಿರುದ್ಧ

    ಮೈಸೂರು: ‘ಇವತ್ತು ತೃಪ್ತಿ ಆಗಿದೆ. ಹೋರಾಟ, ಸಂಘರ್ಷ ಇವತ್ತಿಗೆ ಮುಗಿಯಿತು. ಇವತ್ತು ಯಜಮಾನೋತ್ಸವ. ಹಳೆಯದನ್ನೆಲ್ಲಾ ನೆನಪಿಸಿಕೊಳ್ಳೋದಕ್ಕೆ ಇಷ್ಟಪಡುವುದಿಲ್ಲ’ ಎಂದು ನಟ ಮತ್ತು ಡಾ. ವಿಷ್ಣುವರ್ಧನ್​ ಅವರ ಅಳಿಯ ಅನಿರುದ್ಧ್​ ಹೇಳಿದ್ದಾರೆ.

    ಇದನ್ನೂ ಓದಿ: ಮೈಸೂರಿನಲ್ಲಿ ವಿಷ್ಣು ಸ್ಮಾರಕ ಉದ್ಘಾಟನೆ: ಸರ್ಕಾರ, ಚಲನಚಿತ್ರ ಮಂಡಳಿ ವಿರುದ್ಧ ಅಭಿಮಾನಿಗಳ ಆಕ್ರೋಶ

    ಮೈಸೂರು ಮತ್ತು ನಂಜನಗೂಡು ಮಾರ್ಗ ಮಧ್ಯೆ ಇರುವ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣವಾಗಿದೆ. 13 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಭವ್ಯ ಸ್ಮಾರಕ ಉದ್ಘಾಟನೆಗೆ ಅಸಂಖ್ಯಾತ ವಿಷ್ಣು ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

    ಸ್ಮಾರಕ ಉದ್ಘಾಟನೆ ನಂತರ ಮಾತನಾಡಿರುವ ಡಾ. ವಿಷ್ಣುವರ್ಧನ್ ಅಳಿಯ ಅನಿರುದ್ದ್, ‘ಇಂದು ತೃಪ್ತಿ ಆಗಿದೆ. ಹೋರಾಟ, ಸಂಘರ್ಷ ಇವತ್ತಿಗೆ ಮುಗಿದಿದೆ. ಈ ಸಂದರ್ಭದಲ್ಲಿ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳೋದಕ್ಕೆ ಇಷ್ಟಪಡುವುದಿಲ್ಲ. ಇದು ಸರ್ಕಾರದ ಕಾರ್ಯಕ್ರಮ. ಚಿತ್ರರಂಗದವರನ್ನು ನಾವು ಆಹ್ವಾನಿಸುವುದಕ್ಕೆ ಆಗುವುದಿಲ್ಲ. ಕೆಲವು ಕಲಾವಿದರು ಸ್ವ ಇಚ್ಚೆಯಿಂದ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಸಾಹಸಸಿಂಹ ಸಭಾಂಗಣದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಆ ಸಂದರ್ಭದಲ್ಲಿ ಚಿತ್ರರಂಗದವರೆಲ್ಲ ಬರುತ್ತಾರೆ ಎನ್ನುವ ನಂಬಿಕೆ ಇದೆ’ ಎಂದು ಹೇಳಿದರು.

    ಇನ್ನು, ಬೆಂಗಳೂರಿನ ಅಭಿಮಾನ್​ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್​ ಸಮಾಧಿ ಕುರಿತು ಮಾತನಾಡಿರುವ ಅವರು, ‘ವಿಷ್ಣುವರ್ಧನ್ ಕುಟುಂಬಸ್ಥರು ಒಪ್ಪಿಗೆ ಕೊಟ್ಟರೆ ಅಭಿಮಾನ್ ಸ್ಟುಡಿಯೋದಲ್ಲಿರುವ ಪುಣ್ಯಭೂಮಿ ತೆರವು ಮಾಡ್ತೀವಿ ಅಂತ ಕೋರ್ಟ್ ಹೇಳಿದೆಯಂತೆ. ನಮಗೆ ಯಾವುದೇ ಕಾಗದ ಪತ್ರಗಳು ಕೋರ್ಟ್ ನಿಂದ, ನ್ಯಾಯಾಧೀಶರಿಂದ ತಲುಪಿಲ್ಲ. ಯಾವುದೇ ಕಾರಣಕ್ಕೂ ಅಭಿಮಾನ್ ಸ್ಟುಡಿಯೋದಲ್ಲಿ ಪುಣ್ಯಭೂಮಿ ತೆರವು ಮಾಡೋದಕ್ಕೆ ನಾವು ಬಿಡುವುದಿಲ್ಲ. ಸಾಹಸ ಸ್ಮಾರಕ ಮೈಸೂರು ನಲ್ಲಿ ನಿರ್ಮಾಣಗೊಂಡಿದೆ. ಅಭಿಮಾನ್‌ ಸ್ಟುಡಿಯೋದಲ್ಲಿ ಅಪ್ಪಾಜಿ ಪುಣ್ಯಭೂಮಿಗೆ ಪೂಜೆ ಪುನಸ್ಕಾರ ಸಲ್ಲಿಸೋದಕ್ಕೆ ನಮ್ಮದು ಅಭ್ಯಂತರ ಇಲ್ಲ’ ಎಂದು ಅವರು ಹೇಳಿದರು.

    ಇದನ್ನೂ ಓದಿ: ವಿಷ್ಣು ಸ್ಮಾರಕ ಉದ್ಘಾಟನೆ: ಬೆಂಗಳೂರಿಂದ ಮೈಸೂರಿನವರೆಗೆ 1000 ರಥಯಾತ್ರೆ, ದಾರಿಯುದ್ದಕ್ಕೂ ಕಟೌಟ್ ಜಾತ್ರೆ

    ಇನ್ನು, ಈ ಸಂದರ್ಭದಲ್ಲಿ ಮಾತನಾಡಿದ ವಿಷ್ಣುವರ್ಧನ್​ ಅವರ ಪುತ್ರಿ ಕೀರ್ತಿ ವಿಷ್ಣುವರ್ಧನ್​, ’13 ವರ್ಷದ ಹೋರಾಟ ಮುಕ್ತಾಯವಾಗಿದೆ. ಕಡಗದ ಕಾನ್ಸೆಪ್ಟ್ ಹಾಗೂ ಫೋಟೋ ಗ್ಯಾಲರಿ ನನ್ನದು. ಕಡಗದ ಮೂಲಕ ಅಪ್ಪಾಜಿ ಪುತ್ಥಳಿ ಕಾಣಬೇಕು ಅಂತ ಹೇಳಿದ್ದೆ. ಅದನ್ನು ಅಮ್ಮ ಹಾಗೂ ಅನಿರುದ್ದ್ ಒಪ್ಪಿಕೊಂಡರು. ಇವತ್ತು ಕಡಗ ಕಾನ್ಸೆಪ್ಟ್ ನಲ್ಲಿ ಸ್ಮಾರಕ ನೋಡೋದಕ್ಕೆ ಖುಷಿಯಾಗುತ್ತಿದೆ’ ಎಂದು ಹೇಳಿದರು.

    ವಿಷ್ಣು ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ: ಅಭಿಮಾನಿಗಳ ಆರಾಧ್ಯ ದೈವನ ಭವ್ಯ ಸ್ಮಾರಕದಲ್ಲಿ ಏನೇನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts