More

    VIDEO| ಅಮೆರಿಕ ಚುನಾವಣೆ: ಸುಳ್ಳಾಗಲಿಲ್ಲ ಪ್ರಾಣಿಗಳು ನುಡಿದ ಭವಿಷ್ಯ..!

    ವಾಷಿಂಗ್ಟನ್​: ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಅಮೆರಿಕ ಚುನಾವಣೆ ಮುಕ್ತಾಯಗೊಂಡಿದೆ. ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್​ ಎದುರು ಡೆಮಾಕ್ರಟಿಕ್​ ಪಕ್ಷದ ಜೋ ಬೈಡೆನ್​ ಪ್ರಚಂಡ ಗೆಲವು ಸಾಧಿಸುವ ಮೂಲಕ ಮುಂದಿನ ಯುಎಸ್​ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಅಮೆರಿಕ ಚುನಾವಣೆ ವಿಚಾರದಲ್ಲಿ ಪ್ರಾಣಿಗಳು ನುಡಿದ ಭವಿಷ್ಯವು ಕೂಡ ನಿಜವಾಗಿದೆ.

    ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂದು ರಷ್ಯಾದ ರೋಯೆವ್​ ರುಚೆ ಮೃಗಾಲಯದ ಪ್ರಾಣಿಗಳು ಸುಳಿವು ನೀಡಿದ್ದವು. ವಿನೂತನ ಪ್ರಯೋಗದಲ್ಲಿ ಪ್ರಾಣಿಗಳಾದ ಖಾನ್​, ಬೌನ್​ ಮತ್ತು ಬರ್ಟೆಕ್​ ಭಾಗವಹಿಸಿ, ಕಲ್ಲಂಗಡಿಯ ಮೂಲಕ ಯಾರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದವು. ಈ ಪ್ರಯೋಗಕ್ಕೆ ಒಂದೇ ಗಾತ್ರದ ಮತ್ತು ಬಣ್ಣದ 6 ಕಲ್ಲಂಗಡಿಗಳನ್ನು ಬಳಸಲಾಗಿತ್ತು. ಅದರ ಮೇಲೆ ಡೊನಾಲ್ಡ್ ಟ್ರಂಪ್​ ಮತ್ತು ಜೋ ಬೈಡೆನ್ ಚಿತ್ರಗಳನ್ನು ಬಿಡಿಸಲಾಗಿತ್ತು.

    ಮೊದಲು ಟ್ರಂಪ್​ ಮತ್ತು ಜೋ ಬೈಡೆನ್ ಚಿತ್ರವಿರುವ ಎರಡು ಕಲ್ಲಂಗಡಿಯನ್ನು ಬರ್ಟೆಕ್​ ಹುಲಿಯ ಪಂಜರದ ಮುಂದಿನ ಟೇಬಲ್​ನಲ್ಲಿ ಇಡಲಾಗಿತ್ತು. ಅದರ ಮುಂದೆ ಬಂದ ಬರ್ಟೆಕ್​ ಹುಲಿ ಎರಡು ಕಲ್ಲಂಗಡಿಯನ್ನು ಉರುಳಿಸಿ, ಕೊನೆಯಲ್ಲಿ ಬಿಡೆನ್​ ಚಿತ್ರವಿದ್ದ ಹಣ್ಣನ್ನು ತಿಂದಿತ್ತು.

    ಇದನ್ನೂ ಓದಿ: ಡೊನಾಲ್ಡ್​ ಟ್ರಂಪ್​ಗೆ ಡಿವೋರ್ಸ್ ಕೊಡ್ತಾರಾ ಮೆಲನಿಯಾ? ದಾಂಪತ್ಯ ರಹಸ್ಯ ಬಿಚ್ಚಿಟ್ಟ ಸಲಹೆಗಾರ!

    ಇದಾದ ಬಳಿಕ ಮತ್ತೆರೆಡು ಹಣ್ಣನ್ನು ಖಾನ್​ (ಬಿಳಿ ಬಣ್ಣದ ಬೆಂಗಾಲ್​ ಟೈಗರ್​) ಮುಂದೆ ಇಡಲಾಗಿತ್ತು. ಅದು ಕೂಡ ಬೈಡೆನ್​ ಚಿತ್ರವಿದ್ದ ಕಲ್ಲಂಗಡಿಯನ್ನು ಒದ್ದು, ಕೊನೆಗೆ ಘರ್ಜಿಸುತ್ತಾ ಹಣ್ಣಿನ ಮಧ್ಯಭಾಗದಲ್ಲಿ ರಂಧ್ರ ಮಾಡಿತ್ತು. ಇದಾದ ಬಳಿಕ ಬೌನ್​ (ಕರಡಿ) ಮುಂದೆ ಮತ್ತೆರೆಡು ಹಣ್ಣನ್ನು ಇಡಲಾಯಿತು. ಅದು ಕೂಡ ಬೈಡೆನ್​ ಅವರನ್ನೇ ಆಯ್ಕೆ ಮಾಡಿ, ಆ ಹಣ್ಣನ್ನು ತಿಂದಿತ್ತು. ಹೀಗಾಗಿ ಮೂರು ಪ್ರಾಣಿಗಳು ಬೈಡೆನ್​ ಚಿತ್ರವಿದ್ದ ಹಣ್ಣನ್ನೇ ಆಯ್ಕೆ ಮಾಡಿದ್ದರಿಂದ ಚುನಾವಣೆಯಲ್ಲಿ ಬೈಡೆನ್​ ಅವರು ಗೆಲವು ಸಾಧಿಸಲಿದ್ದಾರೆ ಎಂದು ಊಹಿಸಲಾಗಿತ್ತು.

    ಪ್ರಾಣಿಗಳು ನುಡಿದ ಭವಿಷ್ಯದಂತೆ ಬೈಡೆನ್​ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 538 ಮತಗಳ ಪೈಕಿ ಅಧ್ಯಕ್ಷ ಗಾದಿಗೇರಲು ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಅಗತ್ಯವಿದ್ದು, ಜೋ ಬೈಡೆನ್​ 290 ಮತಗಳೊಂದಿಗೆ ಭರ್ಜರಿ ಜಯ ಸಾಧಿಸಿದ್ದಾರೆ. ಹಾಲಿ ಅಧ್ಯಕ್ಷ ಟ್ರಂಪ್​ 214 ಮತಗಳನ್ನು ಹಿನ್ನಡೆಯೊಂದಿಗೆ ಹೀನಾಯ ಸೋಲನ್ನು ಅನುಭವಿಸಿದ್ದಾರೆ. (ಏಜೆನ್ಸೀಸ್​)

    VIDEO| ಯಾರಾಗಲಿದ್ದಾರೆ ಮುಂದಿನ ಅಮೆರಿಕ ಅಧ್ಯಕ್ಷ? ಪ್ರಾಣಿಗಳ ಅಚ್ಚರಿಯ ಭವಿಷ್ಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts