More

    ಮುಂದುವರಿದ ರೊಟ್ಟಿ ನಾಣ್ಯ ಅಭಿಯಾನ

    ಗದಗ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದ ಪ್ರತಿಯೊಂದು ಮನೆಗಳಿಗೂ ಭೇಟಿ‌ ನೀಡುವ ಯೋಜನೆ ರೂಪಿಸಿರುವ ಯುವ ನಾಯಕ ಅನೀಲ್ ಮೆಣಸಿನಕಾಯಿ ಅವರ ‘ಮನೆಗೊಂದು ರೊಟ್ಟಿ- ನಾಣ್ಯ’ ಎಂಬ ಅಭಿಯಾನದ ಎರಡನೇ ದಿನವಾದ ಸೋಮವಾರವೂ ಮುಂದುವರೆಯಿತು.

    ಗದಗ ವಿಧಾನಸಭಾ ಮತಕ್ಷೇತ್ರದ ಸೊರಟೂರ ಗ್ರಾಮದಿಂದ ಈ ಅಭಿಯಾನ ಆರಂಭಗೊಂಡಿತ್ತು. ಗ್ರಾಮದಲ್ಲಿರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ, ಕುಟುಂಬಸ್ಥರಿಂದ ಒಂದು ರೊಟ್ಟಿ-ಒಂದು ರೂಪಾಯಿ ನಾಣ್ಯವನ್ನು ಭಿಕ್ಷೆ ಹಾಕಿಸಿಕೊಳ್ಳುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವದಿಸುವಂತೆ ಅನೀಲ್ ಮೆಣಸಿನಕಾಯಿ ಮನವಿ ಮಾಡಿಕೊಂಡರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಿಷನ್ -150 ಗುರಿಯಾಗಿಸಿಕೊಂಡು  ಹಮ್ಮಿಕೊಂಡಿರುವ ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆಗೆ ರಾಜ್ಯಾದ್ಯಾಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿಯೇ ಭರವಸೆ ಎಂಬ ವಿಶ್ವಾಸ ಭರಿತ ಧ್ಯೇಯ ವಾಕ್ಯ ಜನಜನಿತವಾಗುತ್ತಿದೆ. ಈ ಸುಸಂದರ್ಭದಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದ ಗೆಲುವಿಗಾಗಿ ಆರಂಭಿಸಿರುವ ‘ಮನೆಗೊಂದು ರೊಟ್ಟಿ-ನಾಣ್ಯ’ ಅಭಿಯಾನಕ್ಕೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಮನೆ ಭೇಟಿ ವೇಳೆ ಜನರು ಅತ್ಯಂತ ಪ್ರೀತಿಯಿಂದ ರೊಟ್ಟಿ-ನಾಣ್ಯ ನೀಡಿ ಹಾರೈಸುತ್ತಿದ್ದಾರೆ. ಜನರ ಈ ಹಾರೈಕೆಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಶ್ರೀರಕ್ಷೆಯಾಗಲಿದೆ ಎಂದು ಅಭಿಯಾನದ ಕುರಿತು ಹರ್ಷ ವ್ಯಕ್ತಪಡಿಸಿದರು.

    ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಸರ್ವಾಧಿಕಾರಿ ಧೋರಣೆಗೆ ಜನತೆ ಈಗಾಗಲೇ ಬೇಸತ್ತಿದ್ದು, ಬದಲಾವಣೆ ಬಯಸಿದ್ದಾರೆ. ಅಲ್ಲದೇ, ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳು ಬಿಜೆಪಿಯ ಗೆಲುವಿಗೆ ಮುನ್ನುಡಿ ಬರೆಯಲಿವೆ ಎಂದು ಅನೀಲ್ ಮೆಣಸಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು. 

    ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ದ್ಯಾಮಣ್ಣ ನೀಲಗುಂದ, ಗ್ರಾಮೀಣ ಪ್ರಧಾನ ಕಾರ್ಯದರ್ಶಿಯಾದ ಬೂದಪ್ಪ ಹಳ್ಳಿ, ಮುಖಂಡರಾದ ಕಾಂತಿಲಾಲ್ ಬನ್ಸಾಲಿ, ನಿಂಗಪ್ಪ ಹೊಗ್ಗಿ, ಚಂದ್ರಶೇಖರ್ ಹರಿಜನ, ಬಾಪುಗೌಡ ಪಾಟೀಲ್, ಬಾಬು ಸುಂಕದ, ಕುಮಾರ್ ಮಾರನಬಸರಿ, ಆರ್.ಎಸ್.ಕಮ್ಮಾರ್, ಸವಜೋಗಯ್ಯ ಹಿರೇಮಠ, ಬಿ.ಎಚ್.ಪಾಟೀಲ್, ಎಂ.ಎಚ್‌.ಕೆಚ್ಚಣ್ಣವರ, ಬಿ.ಕೆ.ಕುಸಲಾಪುರ, ಎನ್.ಎಂ.ಹಳ್ಳಿ, ಬಿ.ಡಿ.ಚವ್ಹಾಣ್, ಎಂ.ಟಿ.ಹಡಪದ, ಎಂ.ಪಿ.ಅಡ್ನೂರ್, ದೇವಕ್ಕ ಜಮ್ಮಗಿ, ಎಫ್.ವಿ.ಗುಗ್ಗರಿ, ಫಕ್ಕಿರೇಶ ಗುಡಿ, ಪಿ.ಎಲ್.ಗುಡಿ, ಪಿ.ಎಲ್.ಮುಳಗುಂದ, ರವಿ ತಳವಾರ, ಹನುಮಂತ ಮೋಡಕ್ಕೆ, ಶರಣಪ್ಪ ಹಳ್ಳಿ, ಅರವಿಂದ್ ಅಣ್ಣಿಗೇರಿ, ಕನಕದಾಸ ಮೇಗೂರ್, ಎನ್.ಎಸ್.ಜೋಗಿರ, ಶಿವಕುಮಾರ್ ಹಿರೇಮಠ, ಮುತ್ತಣ್ಣ ಮಡಿಕಿ, ಟಿ.ಎನ್.ಹಳ್ಳಿ, ನಿಂಗಪ್ಪ ದೊಡ್ಡಮನಿ, ಗಂಗಾಧರ ಇಸ್ತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

    ಬಾಕ್ಸ್-

    ‘ಮನೆಗೊಂದು ರೊಟ್ಟಿ-ಒಂದು ನಾಣ್ಯ’ ಅಭಿಯಾನ ಆರಂಭದ ಮೊದಲ ದಿನವಾದ ರವಿವಾರ ರಾತ್ರಿ ಬೆಳದಡಿ ಗ್ರಾಮದಲ್ಲಿ ಅನೀಲ್ ಮೆಣಸಿನಕಾಯಿ ವಾಸ್ತವ್ಯ ಮಾಡಿದರು. ಗ್ರಾಮದ ಶ್ರೀ ಮಂತ್ರಾಲ ಮರಿಯಮ್ಮದೇವಿ ದೇವಸ್ಥಾನದಲ್ಲಿ ವಾಸ್ತವ್ಯ ಮಾಡಿದ ಅವರು, ಸೊರಟೂರ ಗ್ರಾಮದ‌ ಜನರು ಪ್ರೀತಿಯಿಂದ ನೀಡಿದ್ದ ರೊಟ್ಟಿ, ಪಲ್ಯ ಸವಿದು ವಿಶ್ರಾಂತಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts