More

    ಗದಗ: ಹತ್ತಿಕಾಳ ಕೂಟದಲ್ಲಿ ನಡೆದ ಅನೀಲ್ ಮೆಣಸಿನಕಾಯಿ ಅವರ ಬಹಿರಂಗ ಸಭೆ

    ಗದಗ ಮತಕ್ಷೇತ್ರದ ೨೦೨೩ರ ವಿಧಾನಸಭೆ ಚುನಾವಣೆ ಗದಗ ವರ್ಸಸ್ ಹುಲಕೋಟಿ ಮಧ್ಯೆ ನಡೆದಿರುವ ಕದನ. ಗದಗ ಬೆಟಗೇರಿಯ ೩೫ ವಾರ್ಡ್ಗಳು ಹಾಗೂ ಕ್ಷೇತ್ರದ ಗ್ರಾಮೀಣ ಭಾಗದ ೨೯ ಗ್ರಾಮಗಳ ಮತದಾರರ ಸ್ವಾಭಿಮಾನದ ಚುನಾವಣೆಯಾಗಿದ್ದು ಇಂತವರಿಗೆ ಪಾಠ ಕಲಿಸಲು ಇದು ಸಕಾಲ ಎಂದು ಬಿಜೆಪಿ ಅಭ್ಯರ್ಥಿ ಅನೀಲ ಪಿ ಮೆಣಸಿನಕಾಯಿ ಹೇಳಿದರು.

    ನಗರದ ಬಸವೇಶ್ವರ ವೃತ್ತದಲ್ಲಿ (ಹತ್ತಿಕಾಳಕೂಟ) ಬಿಜೆಪಿಯ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಗದಗ ಬೆಟಗೇರಿ ಹಾಗೂ ಗ್ರಾಮೀಣ ಭಾಗದ ಮತದಾರರು ಅವರಿಗೆ ಬೇಕಿಲ್ಲ. ಹುಲಕೋಟಿ ಮಾತ್ರ ಬೇಕು, ಗದಗಿನ ಜನರು ಮೂರ್ಖರು ಎಂದು ತಿಳಿದುಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ಮತದಾರರನ್ನು ಬಳಸಿಕೊಂಡು ಎಸೆಯುವ ಜಾಯಮಾನ ಅವರದು. ಅಭಿವೃದ್ಧಿ ವಿರೋಧಿ ಮನಸ್ಥಿತಿಯ ಶಾಸಕರನ್ನು ಮನೆಗೆ ಕಳಿಸಿ ಎಂದು ಮನವಿ ಮಾಡಿದರು.

    ಒಂದು ಕಾಲಕ್ಕೆ ಗದಗ ನಗರ ಕಾಟನ್ ಕ್ಯಾಪಿಟಲ್ ಆಗಿತ್ತು. ನೇಕಾರಿಕೆಗೆ ಪ್ರಸಿದ್ಧ ಪಡೆದಿತ್ತು. ಶೇಂಗಾ ಮಿಲ್ ಗಳಿದ್ದವು. ರವಾ ಫ್ಯಾಕ್ಟರಿಗಳಿದ್ದವು. ಹುಲಕೋಟಿ ಕುಟುಂಬದ ಕೈಗೆ ಯಾವಾಗ ಅಧಿಕಾರ ಸಿಕ್ಕಿತೋ ಒಂದೊಂದಾಗಿ ಅಸ್ತಿತ್ವ ಕಳೆದುಕೊಳ್ಳತೊಡಗಿದವು. ಹಲವಾರು ಖಾತೆಗಳ ಅಧಿಕಾರ ಅನುಭವಿಸಿದರೂ ಕ್ಷೇತ್ರಕ್ಕೆ, ಜಿಲ್ಲೆಗೆ ಇವರ ಕೊಡುಗೆ ಏನೂ? ಕೈಗಾರಿಕೆ ಸ್ಥಾಪನೆ ಮಾಡಿ ಇಲ್ಲಿನ ಯುವಕರಿಗೆ ಉದ್ಯೋಗ ನೀಡುವ ಎಲ್ಲ ಅವಕಾಶಗಳಿದ್ದವು. ಇದ್ಯಾದನ್ನು ಮಾಡದೇ ಕೇವಲ ಹುಲಕೋಟಿ ಗ್ರಾಮವನ್ನು ಅಭಿವೃದ್ಧಿ ಮಾಡಿ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದಾರೆ. ಎಲ್ಲ ಉದ್ಯಮಗಳ ಹಾಳಾಗಲು ಹುಲಕೋಟಿ ಗೌಡರೆ ಕಾರಣ ಎಂದು ಅವರು ಕಿಡಿಕಾರಿದರು.

    ಕೆ ಎಚ್ ಪಾಟೀಲ ಅವರು ರಾಜಕಾರಣಕ್ಕೆ ಬಂದ ನಂತರ ಕಾಟನ್ ಕ್ಯಾಪಿಟಲ್ ದಿವಾಳಿ ಎಬ್ಬಿಸಿದರು. ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಒಡೆದಾಳುವುದೇ ಅವರ ರಾಜಕಾರಣ ಪರಂಪರೆ. ಕಾಟನ್ ಸೇಲ್ ಸೊಸೈಟಿ ಕಾಂಗ್ರೆಸ್ ಕಚೇರಿಯಾಗಿ ಮಾರ್ಪಟ್ಟಿರುವದೇ ಇದಕ್ಕೆ ಜೀವಂತ ನಿದರ್ಶನವಾಗಿದೆ. ಹಂತಹಂತವಾಗಿ ಗದಗ ವ್ಯಾಪಾರ ಕೇಂದ್ರ ಹಾಳು ಮಾಡಿದರು. ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಏನೆಲ್ಲವನ್ನೂ ಮಾಡಿದರು ಎಂದು ಹಿರಿಯರು ಹೇಳುತ್ತಾರೆ. ಸಣ್ಣ ಸಮುದಾಯಗಳನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ದೊಡ್ಡ ಸಮಾಜವನ್ನು ಒಡೆದು ಆಳುವಂತಹ ಬ್ರಿಟಿಷ್ ಪಾಲಸಿಯನ್ನು ಚನ್ನಾಗಿ ಕಲಿತುಕೊಂಡಿದ್ದಲ್ಲದೇ, ಅದೇ ಪಾಲಸಿಯಿಂದ ೫೫ ವರ್ಷ ಕಾಲ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಒಂದು ಸಲ ಅವಕಾಶ ಕೊಡಿ
    ಕಳೆದೆರಡು ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದೆ. ಈ ಚುನಾವಣೆಯಲ್ಲಿ ನನಗೆ ಮೊದಲ ಸ್ಥಾನವನ್ನು ಕಲ್ಪಿಸುತ್ತೀರೆಂಬ ಅಗಾಧ ನಂಬಿಕೆ ಇದೆ. ನನ್ನ ಶಾಸಕನನ್ನಾಗಿ ಮಾಡಿದರೆ ಮನೆಯ ಮಗನಾಗಿ, ಸಹೋದರನಾಗಿ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ ಎಂದು ಅನೀಲ ಮೆಣಸಿನಕಾಯಿ ಹೇಳಿದರು.

    ಈ ಸಂದರ್ಭದಲ್ಲಿ ಎಂ.ಎಸ್.ಕರೀಗೌಡ್ರ, ರಾಜು ಕುರುಡಗಿ, ಕಾಂತಿಲಾಲ್ ಬನ್ಸಾಲಿ, ಸಂಗಮೇಶ ದುಂದೂರ, ಎಂ.ಎಂ.ಹಿರೇಮಠ, ಸಿದ್ದಣ್ಣ ಪಲ್ಲೇದ, ಉಷಾ ದಾಸರ, ಸುನಂದಾ ಬಾಕಳೆ, ರಾಘವೇಂದ್ರ ಯಳವತ್ತಿ, ಅನೀಲ್ ಅಬ್ಬಿಗೇರಿ, ವಿಜಯಲಕ್ಷ್ಮಿ ಮಾನ್ವಿ, ರಾಜು ಗುಡಿಮನಿ, ರಾಘವೇಂದ್ರ ಹಬೀಬ,  ಶರಣು ಪಾಟೀಲ್, ಭಾರತಿ ಮುಗದುಮ್, ರಜನೀಶ್ ತ್ಯಾಗಿ, ಬಾಬು ಬಾಕಳೆ, ಕಿರಣ್ ಭೂಮಾ, ವಾಣಿ ಮೆಣಸಿನಕಾಯಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

    ಕೋಟ್
    ಚರಂಡಿ ನೀರು ಕುಡಿಸುವೆ ಎಂದವರು!
    ಒಂದು ಸಮುದಾಯವನ್ನು (ವೀರಶೈವ ಲಿಂಗಾಯತ) ಗುರಿಯಾಗಿಟ್ಟುಕೊಂಡು ಅವರಿಗೆ ಏನು ಮಾಡುತ್ತೇನೆ, ಏನನ್ನು ಕುಡಿಸುತ್ತೇನೆ, ಚರಂಡಿ ನೀರು ಕುಡಿಸುತ್ತೇನೆ ಎಂದು ಹೇಳಿ ಬಹಿರಂಗವಾಗಿ ಸವಾಲು ಹಾಕಿದ್ದನ್ನು ಯಾರೂ ಮರೆತಿಲ್ಲ. ಸಂತ ರಾಜಕಾರಣಿ ಎನ್ನುವವರು ಗದಗಗೆ ಏನನ್ನೂ ಮಾಡಲಿಲ್ಲ. ಈಗಿನ ಶಾಸಕರು ಪ್ರಾಮಾಣಿಕ ರಾಜಕಾರಣಿ ಎಂದು ಪೋಸ್ ಕೊಡ್ತಾ ಇದಾರೆ. ಆದರೆ, ಗದಗಗೆ ಕುಡಿಯುವ ನೀರಿಲ್ಲ. ಯುಜಿಡಿ ವ್ಯವಸ್ಥೆ ಇಲ್ಲ. ಮೂಲಸೌಕರ್ಯ ಇಲ್ಲದೇ ದಿವಾಳಿ ಎಬ್ಬಿಸಿದವರು ಯಾರೆಂದರೆ ಹುಲಕೋಟಿ ಕುಟುಂಬದರು.
    ಅನೀಲ ಮೆಣಸಿನಕಾಯಿ, ಬಿಜೆಪಿ ಅಭ್ಯರ್ಥಿ

    ಬಾಕ್ಸ್
    ಎಚ್ ಕೆ ಪಾಟೀಲ ಸುಳ್ಳುಗಾರ!
    ಐದು ಯೋಜನೆಗಳನ್ನು ಕೊಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮಹಾನ್ ಸುಳ್ಳುಗಾರ ಇವರನ್ನು ಯಾರೂ ನಂಬಬೇಡಿ. ೫೫ ವರ್ಷ ನಿಮ್ಮ ಕೈಯಲ್ಲಿಯೇ ಅಧಿಕಾರ ಇದ್ದಾಗ ಇಂತಹ ಯೋಜನೆ ಮಾಡಲಿಲ್ಲವೇಕೆ ಎಂದು ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಪ್ರಶ್ನಿಸಿದರು. ನನಗೊಂದು ಸಲ ಅವಕಾಶ ಕೊಡಿ, ನಾಲ್ಕೈದು ತಿಂಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಿಸುತ್ತೇನೆ. ಆಯುವೇದಿಕ್ ಹಬ್ ಸ್ಥಾಪನೆ, ಸ್ಪೋರ್ಟ್ಸ ಆಂಡ್ ಕಲ್ಚರಲ್ ಸಿಟಿ ಆರಂಭಿಸುವುದು, ಬೆಟಗೇರಿಯಲ್ಲಿ ಗಾಮೆಂಟ್ಸ್ ಫ್ಯಾಕ್ಟರಿ, ಹರ್ತಿಯಿಂದ ಮುಳಗುಂದವರೆಗೆ ಚಿಲ್ಲಿ ಕ್ಲಸ್ಟರ್ ಮಾಡುವುದು ಹೀಗೆ ಸ್ಥಳೀಯರಿಗೆ ಉಪಯುಕ್ತವಾದ ಯೋಜನೆಗಳನ್ನು ನಾಲ್ಕೇ ವರ್ಷದಲ್ಲಿ ಪೂರ್ಣಗಳಿಸಿ ಐದನೇ ವರ್ಷ ನಿಮ್ಮ ಮನೆಯ ಮುಂದೆ ಬಂದು ನಿಲ್ಲುತ್ತೇನೆ. ಒಂದು ರೊಟ್ಟಿ ಒಂದು ನಾಣ್ಯದ ಮೂಲಕ ನಾಮಪತ್ರ ಸಲ್ಲಿಸಿದ ನಾನು ಮಾತಿಗೆ ತಪ್ಪಲ್ಲ. ನುಡಿದಂತೆ ನಡೆಯುತ್ತೇನೆ ಎಂದು ಅನೀಲ ಮೆಣಸಿನಕಾಯಿ ಭರವಸೆ ನೀಡಿದರು.

    ಬಾಕ್ಸ್
    ಅಕ್ಕ ಪಕ್ಕ ರೌಡಿ ಶೀಟರ್ ಗ್ಯಾಂಗ್!
    ನಾವು ಶುದ್ಧ ಹಸ್ತರು, ಸಂತ ರಾಜಕಾರಣಿ ಎಂದು ಬಡಾಯಿಕೊಚ್ಚಿಕೊಳ್ಳುವ ಇವರು ತಮ್ಮ ಅಕ್ಕ ಪಕ್ಕ ರೌಡಿಶೀಟರ್ ಗಳನ್ನು ಕೂರಿಸಿಕೊಳ್ಳುತ್ತಾರೆಂದರೆ ಇವರ ಪ್ರಾಮಾಣಿಕತೆ, ಒಳ್ಳೆಯತನ ಎಷ್ಟಿದೆ ಎಂಬುದು ಜನರಿಗೆ ಗೊತ್ತಿದೆ. ಗೂಂಡಾಗಿರಿ ಮೇಲೆಯೇ ಮತವನ್ನು ಹಾಕಿಸಿಕೊಂಡಿದ್ದಾರೆ. ನಾನು ಯಾರಿಗೂ ಹೆದರುವ ಮಗನಲ್ಲ. ಸತ್ಯವನ್ನೇ ಮಾತನಾಡುತ್ತೇನೆ. ಮನೆಮಂದಿಯಲ್ಲ ಅಧಿಕಾರಿ ಅನುಭವಿಸಿದರೂ ಗದಗ ಜನರ ಋಣವನ್ನು ತೀರಿಸಲಿಲ್ಲ. ಇವರು ಮನಸ್ಸು ಮಾಡಿದ್ದರೆ ಗದಗ ನಗರವನ್ನು ಸಾಕಷ್ಟು ಅಭಿವೃದ್ಧಿ ಮಾಡಲು ಅವಕಾಶವಿದ್ದರೂ ಮಾಡಲಿಲ್ಲ. ಇದರಿಂದ ಇವರ ಮೇಲಿದ್ದ ಭರವಸೆ ಜನರಿಗೆ ಹೊರಟುಹೋಗಿದೆ. ಹೀಗಾಗಿ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಅನೀಲ ಮೆಣಸಿನಕಾಯಿ ಹೇಳಿದರು.

    ಬಜರಂಗಿಗಳು ಟೆರರಿಸ್ಟ್?
    ಬಜರಂಗಿಗಳು ಯಾರ ಮನೆಯಲ್ಲಾದರೂ ಬಾಂಬ್ ಇಟ್ಟಿದ್ದಾರಾ? ಕುಕ್ಕರ್ ಸ್ಪೋಟಗೊಳಿಸಿದ್ದಾರಾ? ಹೀಗಿದ್ದರೂ ಬಜರಂಗಿದಳ ಬ್ಯಾನ್ ಮಾಡುವುದೇಕೆ? ಬಜರಂಗಿಗೆ ಕೈಹಾಕಲು ಕಾಂಗ್ರೆಸ್ಸಿನವರು ಬಂದಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು. ಇಂದು ತಾವೆಲ್ಲರೂ ಸರಿ ಗದಗ ಬಜರಂಗಿಗಳ ಬಲವನ್ನು ಪ್ರದರ್ಶನ ಮಾಡಿದ್ದೀರಿ. ಬಜರಂಗಿಗಳು ಶಾಂತಿ ಪ್ರಿಯರು. ಹಿಂದೂ ದೇವರುಗಳು, ದೇವಸ್ಥಾನಗಳ ತಂಟೆಗೆ ಬರಬೇಡಿ ಎಂದು ಅನೀಲ ಮೆಣಸಿನಕಾಯಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts