More

    ಮಗುವಿನ ವಿಕಸನದ ತಳಹದಿ ಅಂಗನವಾಡಿ ಕೇಂದ್ರ: ರಾ. ಯಳವತ್ತಿ

    ಗದಗ: ನಗರದ ವಾರ್ಡ್​ 7 ರ ವ್ಯಾಪ್ತಿಯಲ್ಲಿನ ಶಿವಾಜಿ ನಗರ ಹಾಗು ರಂಗಾವಧೂತ ನಗರದಲ್ಲಿ ನೂತನವಾಗಿ ಅಂಗನವಾಡಿ ಕೇಂದ್ರ ಸ್ಥಾಪಿಸಬೇಕು ಎಂಬ ಬೇಡಿಕೆ ಇದೆ. ಅದಕ್ಕಾಗಿ ತಾತ್ಕಾಲಿಕವಾಗಿ ಅಮರೇಶ್ವರ ದೇವಸ್ಥಾನದ ಹತ್ತಿರದ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾವೇಂದ್ರ ಯಳವತ್ತಿ ಹೇಳಿದರು.
    ಮಂಗಳವಾರ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕೂಲಿಕಾಮಿರ್ಕರು, ನೇಕಾರರು ಹಾಗು ಆಥಿರ್ಕವಾಗಿ ಹಿಂದುಳಿದ ಜನಾಂಗದವರು ವಾಸವಿದ್ದು ಅದಕ್ಕಾಗಿ ಅವರ ಮಕ್ಕಳ ಬಾಲ್ಯ ಶಿಣ, ಉತ್ತಮವಾದ ವ್ಯಕ್ತಿತ್ವವನ್ನು ನಿಮಿರ್ಸಲು ಅಂಗನವಾಡಿ ಕೇಂದ್ರದ ಅವಶ್ಯಕತೆ ಇದೆ. ಹಾಗಾಗಿ ಸೂಕ್ತ ನಿವೇಶನ ಗುರುತಿಸಿ ಹೊಸದಾಗಿ ಕಟ್ಟಡವನ್ನು ನಿಮಿರ್ಸಲಾಗುವದು ಎಂದು ಭರವಸೆ ನೀಡಿದರು.
    ಅಂಗನವಾಡಿ ಕೇಂದ್ರದ ಶಿಕಿ ಮಕ್ಕಳಿಗೆ ಉತ್ತಮ ಶಿಣವನ್ನು ನೀಡುವುದಲ್ಲದೆ ಅವರ ವೆಕ್ತಿತ್ವ, ಚಾರಿತ್ರ$್ಯ ನಿರ್ಮಾಣ ಮಾಡುವುದರ ಮೂಲಕ ಉತ್ತಮ ಆರೋಗ್ಯ ದೈಹಿಕ ಸಧೃಡತೆಗೆ ಹೆಚ್ಚಿನ ಆಧ್ಯತೆ ನೀಡಿ ವೈಕ್ತಿಕ ಕಾಳಜಿಯ ಮೂಲಕ ಮಗುವಿನ ಸವೋರ್ತೊಮುಖ ಅಭಿವೃದ್ಧಿಗೆ ಶ್ರಮಿಸಿದರೆ ಅಂಗನವಾಡಿ ಕೇಂದ್ರವನ್ನು ಸ್ಥಾಪಿಸಿದ್ದು ಸಾರ್ಥಕವಾಗುತ್ತದೆ ಎಂದರು.
    ಶಿಶು ಸಹಾಯಕ ಅಭಿವೃದ್ಧಿ ಯೋಜನಾಧಿಕಾರಿ ಲಲಿತಾ ಅಳವಂಡಿ, ವಿಜಯಲಕ್ಷಿ$್ಮ ಗುರುಬಸವನಗೌಡ ಪ್ರಾಸ್ತಾವಿಕ ಮಾತನಾಡಿದರು.
    ವೆಂಕಟೇಶ ಬಳ್ಳಾರಿ, ಮಂಜುನಾಥ ಬಗನಾಳ, ಸಂತೋಷ ಡಗೆ, ಕವಿತಾ ಹಿಂಡಿ, ರತ್ನಮ್ಮ ಹೂಗಾರ, ಅಮಿನಾ ಗಾಡಗೋಳಿ, ತುಳಸಾ ದೇಶಪಾಂಡೆ, ಹೇಮಾವತಿ ಬಂಡಾ, ಜ್ಯೋತಿ ಸೋಮಸಾಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts