More

    ಉದ್ಘಾಟನೆಗೂ ಮುನ್ನ ಅಂಗನವಾಡಿಯಲ್ಲಿ ಬಿರುಕು

    ರೋಣ: ಪಟ್ಟಣದ ಶಂಕರಗೌಡ ರಾಯನಗೌಡ್ರ ಬಡಾವಣೆಯಲ್ಲಿ ನಿರ್ವಿುಸಲಾದ ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಮುನ್ನವೇ ಎಲ್ಲ್ಲೆಂದರಲ್ಲಿ ಬಿರುಕು ಬಿಟ್ಟಿದೆ.

    2017-18ನೇ ಸಾಲಿನ ಎಸ್​ಡಿಪಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ನಿರ್ವಿುಸಲಾಗಿದೆ. ಆದರೆ, ಗುತ್ತಿಗೆದಾರರ ಅನಾದರ ಮತ್ತು ಕಳಪೆ ಕಾಮಗಾರಿಯಿಂದಾಗಿ ಕೇಂದ್ರದಲ್ಲಿ ಬಿರುಕು ಮೂಡಿದೆ. ಈ ಕುರಿತು ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ, ಕಾಟಾಚಾರಕ್ಕೆಂಬಂತೆ ಅಲ್ಲಿಷ್ಟು ಇಲ್ಲಿಷ್ಟು ಸಿಮೆಂಟ್ ಹಾಕಿ ಹೋಗುತ್ತಿದ್ದಾರೆ. ಇಂತಹ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸುವುದು ಕಷ್ಟವಾಗುತ್ತದೆ. ಹೀಗಾಗಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವವರೆಗೆ ಕಟ್ಟಡ ಉದ್ಘಾಟನೆ ಮಾಡಲು ಬಿಡಲ್ಲ ಎಂದು ಪುರಸಭೆ ಸದಸ್ಯ ಮಲ್ಲಯ್ಯ ಮಹಾಪುರುಷಮಠ ಎಚ್ಚರಿಸಿದ್ದಾರೆ.

    ಗುತ್ತಿಗೆದಾರರ ನಿರ್ಲಕ್ಷ್ಯ: ತಾಲೂಕಿನಾದ್ಯಂತ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಹೀಗಾಗಿ ದೇವಸ್ಥಾನ, ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಇದನ್ನು ತಪ್ಪಿಸಲು ಕೆಲ ಜನಪ್ರತಿನಿಧಿಗಳು ಹೊಸ ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಸ್ಥಳ ನೀಡಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ. ಆದರೆ, ಗುತ್ತಿಗೆದಾರರು ಕಳಪೆ ಕಾಮಗಾರಿ ಕೈಗೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.

    ಅಂಗನವಾಡಿ ಕಟ್ಟಡದ ಬಗೆಗೆ ಮಾಹಿತಿಯಿಲ್ಲ. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ.
    | ಯು.ಎಸ್. ಮಂಡಸೊಪ್ಪಿ, ಜಿಪಂ ಕಾರ್ಯನಿರ್ವಾಹಕ ಇಂಜಿನಿಯರ್

    ಮಕ್ಕಳ ಭವಿಷ್ಯಕ್ಕೋಸ್ಕರ ಲಕ್ಷಾಂತರ ರೂ. ಮೌಲ್ಯದ ಜಾಗವನ್ನು ಅಂಗನವಾಡಿ ಕೇಂದ್ರಕ್ಕಾಗಿ ಉಚಿತವಾಗಿ ನೀಡಿದ್ದೇವೆ. ಕಟ್ಟಡ ಕಾಮಗಾರಿ ಕಳಪೆಯಾಗಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಕಟ್ಟಡದ ಮರು ನಿರ್ವಣದ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ.
    | ನೂರುಲ್ಲಾಖಾನ್, ಪುರಸಭೆ ಮುಖ್ಯಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts