More

    ಗಡಿ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ

    ವಿಜಯವಾಣಿ ಸುದ್ದಿಜಾಲ ಆನೇಕಲ್
    ವಿಧಾನಸಭೆೆ ಚುನಾವಣೆಯಲ್ಲಿ ರಾಜ್ಯದ ಗಡಿ ತಾಲೂಕು ಆನೇಕಲ್‌ನಲ್ಲಿ ಯಾವುದೇ ಅಹಿತಕರ ಘಟನೆ ಇಲ್ಲದೆ ಶಾಂತಿಯುತ ಮತದಾನ ನಡೆಯಿತು.
    ಆನೇಕಲ್ ಪಟ್ಟಣದ ಹಳೆ ಮಾಧ್ಯಮಿಕ ಪಾಠಶಾಲೆಯ ಇವಿಎಂ ಯಂತ್ರ ಕೈ ಕೊಟ್ಟ ಹಿನ್ನೆಲೆ ಏಳು ಗಂಟೆಗೆ ಪ್ರಾರಂಭವಾಗಬೇಕಿದ್ದ ಮತದಾನ 7.30 ಕ್ಕೆ ಆರಂಭಗೊಂಡಿತು. ಮುತ್ತನಲ್ಲೂರಿನಲ್ಲಿ ಬೆಳಗ್ಗೆ ಮತದಾನ ಪ್ರಾರಂಭ ಆದರೂ ಮತಗಟ್ಟೆಯಲ್ಲಿ ಬೆಳಕು ಇಲ್ಲದೆ ಕ್ಯಾಂಡಲ್ ಹಚ್ಚಿಕೊಂಡು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು.
    ವಿಶೇಷ ಚೇತನರಿಗೆ ವೀಲ್ ಚೇರ್ ವ್ಯವಸ್ಥೆ ಮಾಡಿದ್ದರಿಂದಾಗಿ ಕೆಲವೆಡೆ ವೃದ್ಧರು ಹಾಗೂ ವಿಕಲಚೇತನರನ್ನು ವೀಲ್‌ಚೇರ್‌ನಲ್ಲಿ ಕರೆ ತಂದು ಮತದಾನ ಮಾಡಿಸಲಾಯಿತು.
    ಕರ್ಪೂರ ಗ್ರಾಪಂ ವ್ಯಾಪ್ತಿಯ ಹಾಲ್ದೇನಹಳ್ಳಿಯಲ್ಲಿ 75 ವರ್ಷದ ಸಂಪಂಗಪ್ಪ ಎನ್ನುವರನ್ನು ಗ್ರಾಪಂ ಸದಸ್ಯ ತಿಮ್ಮರಾಜು ಮನೆಯಿಂದ ಹೊತ್ತುಕೊಂಡು ಬಂದು ಮತದಾನ ಮಾಡಿಸಿ ಕರೆದೊಯ್ದರು.
    ಅತ್ತಿಬೆಲೆಯಲ್ಲಿ ವಿಶೇಷವಾಗಿ ಸಿಂಗರಿಸಿದ್ದ ಪಿಂಕ್‌ಬೂತ್‌ನಲ್ಲಿ ಮಹಿಳೆಯರು ಸರತಿಯಲ್ಲಿ ನಿಂತು ಮತ ಚಲಾಯಿಸಿದರು.
    ಬೆಳಗ್ಗೆ ಮತದಾನ ಪ್ರಾರಂಭವಾದರೂ 11 ಗಂಟೆಯವರೆಗೆ ಮತಗಟ್ಟೆಗೆ ಮತ ಹಾಕಲು ಮತದಾರರು ಆಗಮಿಸಿರಲಿಲ್ಲ. ಮಧ್ಯಾಹ್ನದ ನಂತರ ತಾಲೂಕಿನ ಬಹುತೇಕ ಮತಗಟ್ಟೆಗಳ ಎದುರು ಸರತಿ ಸಾಲಿನಲ್ಲಿ ನಿಂತು ಜನ ತಮ್ಮ ಹಕ್ಕು ಚಲಾಯಿಸಿದರು.
    ಪ್ರಮುಖವಾಗಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಆನೇಕಲ್ ಪಟ್ಟಣದ ಎಎಸ್‌ಬಿ ಶಾಲೆ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಶಾಸಕ ಬಿ ಶಿವಣ್ಣ ಇಗ್ಗಲೂರಿನಲ್ಲಿ ಮತ ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಕೆ.ಪಿ.ರಾಜು ಅನಂತನಗರ ಹಾಗೂ ಬಿಎಸ್ಪಿ ಅಭ್ಯರ್ಥಿ ಡಾ.ವೈ. ಚಿನ್ನಪ್ಪ ಚಿಕ್ಕ ಹಾಗಡೆಯವರು ಮುತ್ತಾನಲ್ಲೂರಿನಲ್ಲಿ ಮತದಾನ ಮಾಡಿದರು.

    ಹಿರಿಯ ಸಾಹಿತಿ ಮತದಾನ: ಆನೆಕಲ್‌ನ ಹಿರಿಯ ಸಾಹಿತಿ ಎಂದೇ ಖ್ಯಾತಿಯಾಗಿರುವ ವಿಧಾತ ವಿದ್ಯಾಸಂಸ್ಥೆಯ ಸಂಸ್ಥಾಪಕ ತಾನಂ ಕುಮಾರಸ್ವಾಮಿ ಅವರು ಆನೇಕಲ್ ಪಟ್ಟಣದಲ್ಲಿ ಮತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts