More

    ಮಳೆ ಜತೆಗೆ ಬಿತ್ತು ಚಿನ್ನದ ನಾಣ್ಯಗಳು: ಗುಂಪಾಗಿ‌ ಜಮಾಯಿಸಿದ ಜನರಿಗೆ ಕಾದಿತ್ತು ಶಾಕ್​!

    ಆನೇಕಲ್: ಆಧುನಿಕ ಜಗತ್ತಿನಲ್ಲಿ ವಿಶ್ವವೇ ಬೆರಳ ತುದಿಯಲ್ಲಿರುವಂತಹ ಕಾಲಘಟ್ಟದಲ್ಲಿ ಜನರಿನ್ನೂ ಮೂಢನಂಬಿಕೆಗಳಿಗೆ ಬೆಲೆ ಕೊಡುತ್ತಿರುವುದು ವಿಪರ್ಯಾಸವೇ ಸರಿ. ಯಾರೋ ಹೇಳಿದರು ಎಂದು ಹಿಂದು-ಮುಂದೆ ಯೋಚಿಸದೆ ಆಸೆಗೆ ಬಿದ್ದು ನಿರಾಸೆ ಅನುಭವಿಸುವ ಘಟನೆಗಳಿಗೇನೂ ಕಮ್ಮಿ ಇಲ್ಲ. ಇಂಥದ್ದೆ ಒಂದು ಪ್ರಸಂಗ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ನಲ್ಲಿ ನಡೆದಿದೆ.

    ಶುಕ್ರವಾರ ರಾತ್ರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯಿತು. ಈ ವೇಳೆ ಬಾಗಲೂರು ಹಾಗೂ ಸರ್ಜಾಪುರ ರಸ್ತೆಯಲ್ಲಿ ಮಳೆಯ ಜೊತೆಗೆ ಚಿನ್ನದ ನಾಣ್ಯಗಳು ಸಹ ಆಕಾಶದಿಂದ ಕೆಳಗೆ ಬಿದ್ದಿವೆ ಎಂಬ ವದಂತಿ ಹರಡಿದೆ. ಇದನ್ನೇ ನಿಜವೆಂದು ನಂಬಿದ ಜನರು ದಂಡು ದಂಡಾಗಿ ರಸ್ತೆಗೆ ಇಳಿದು ನಾಣ್ಯ ಹುಡುಕಾಡಲು ಹರಸಾಹಸಪಟ್ಟರು.

    ಇದನ್ನೂ ಓದಿ: ನವೆಂಬರ್ ಅಂತ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ? ಇಲ್ಲಿದೆ ಸರ್ಕಾರದ ನಿಲುವು

    ಅಚ್ಚರಿಯೆಂದರೆ, ರಸ್ತೆಯಲ್ಲಿ ಗುಂಪು ಗುಂಪಾಗಿ‌ ಜಮಾಯಿಸಿದ ಜನರಿಗೆ ಮಳೆಯ ನಡುವೆ ಚಿನ್ನದ ನಾಣ್ಯ ರೂಪದ ಕೆಲ ನಾಣ್ಯಗಳನ್ನು ಸಹ ದೊರಕಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಾಗಲೂರು ಪೋಲೀಸರು, ಅಲ್ಲಿದ್ದ ನಾಣ್ಯಗಳನ್ನು ತೆಗೆದುಕೊಂಡು ಚಿನ್ನದ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅದು ನಕಲಿ ನಾಣ್ಯ ಎಂದು ಪತ್ತೆಯಾಗಿದೆ.

    ಮಳೆಯ ನಡುವೆಯೂ ಚಿನ್ನದ ನಾಣ್ಯ ಎಂದು ಹುಡುಕಾಡಿ ನಾಣ್ಯಗಳನ್ನು ತೆಗೆದುಕೊಂಡಿದ್ದ ಜನರಿಗೆ ಪೊಲೀಸರು ಹೇಳಿದ ವಿಚಾರ ಕೇಳಿ ನಿರಾಸೆಯಾಗಿ ಪೇಚು ಮೋರೆಯಿಂದ ಮನೆಗೆ ಹಿಂದಿರುಗಿದರು. (ದಿಗ್ವಿಜಯ ನ್ಯೂಸ್​)

    ಸದಾ ಬೆತ್ತಲೆ ಓಡಾಡುವ ದಂಪತಿ: ಇವರ ಹೆಬ್ಬಯಕೆ ಕೇಳಿದ್ರೆ ಶಾಕ್​ ಆಗೋದು ಖಂಡಿತ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts