More

    ಮೂರೇ ದಿನದಲ್ಲಿ 30 ಸಾವಿರ ಕೇಸ್​ಗಳು; ದೆಹಲಿಯನ್ನು ಮೀರಿಸಿದ ಆಂಧ್ರದಲ್ಲಿ ಕೋವಿಡ್​ ಬಿರುಗಾಳಿ….!

    ಹೈದರಾಬಾದ್​: ಆಂಧ್ರಪ್ರದೇಶದಲ್ಲಿ ಕೋವಿಡ್​ ಬಿರುಗಾಳಿಯೇ ಬೀಸುತ್ತಿದೆ. ಸದ್ಯ ಇಡೀ ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಆಂಧ್ರಪ್ರದೇಶ ಮೂರನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದ್ದರೆ, ಆಂಧ್ರದಲ್ಲಿ ಇನ್ನಿಲ್ಲದ ವೇಗದಲ್ಲಿ ಹೆಚ್ಚಾಗುತ್ತಿದೆ.

    ಕಳೆದ 24 ತಾಸುಗಳಲ್ಲಿ ಆಂಧ್ರದಲ್ಲಿ 10,376 ಹೊಸ ಕೇಸ್​ಗಳು ವರದಿಯಾಗಿವೆ. ಈ ಮೂಲಕ ಸತತ ಮೂರು ದಿನಗಳಿಂದ 10 ಸಾವಿರಕ್ಕೂ ಅಧಿಕ ಕೇಸ್​ಗಳು ಕಂಡು ಬಂದಿವೆ. ಅಂದರೆ, ಕಳೆದ ಮೂರು ದಿನಗಳಲ್ಲಿ 30 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾದಂತಾಗಿವೆ.

    ಇದನ್ನೂ ಓದಿ; ಕರೊನಾ ಚಿಕಿತ್ಸೆಗೆ ಬೆಡ್​ಗಳಿವೆ ; ರೋಗಿಗಳೇ ಇಲ್ಲ; ಒಂದೇ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಏನಿದು ಬದಲಾವಣೆ?

    ಸದ್ಯ ರಾಜ್ಯದಲ್ಲಿ ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 1,40,933ಕ್ಕೆ ತಲುಪಿದೆ. ಗುರುವಾರ 10,167, ಬುಧವಾರ 10,093 ಹೊಸ ಪ್ರಕರಣಗಳು ಕಂಡು ಬಂದಿದ್ದವು. ಇದರೊಂದಿಗೆ ಮೂರೇ ದಿನದಲ್ಲಿ 30,363 ಸೋಂಕಿತರು ಹೆಚ್ಚಾಗಿದ್ದಾರೆ.

    ರಾಜ್ಯದಲ್ಲಿ 75,720 ಕೇಸ್​ಗಳು ಸಕ್ರಿಯವಾಗಿವೆ. ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾದವರು 63,864 ಜನ. ಕಳೆದ 24 ತಾಸುಗಳಲ್ಲಿ 3,822 ರೋಗಿಗಳು ಚೇತರಿಸಿಕೊಂಡಿದ್ದಾರೆ. ಅಂತೆಯೇ ಮತ್ತೆ 68 ಜನರು ಸಾವಿಗೀಡಾಗುವ ಮೂಲಕ ಒಟ್ಟು ಸಾವಿನ ಸಂಖ್ಯೆ 1,349ಕ್ಕೆ ಏರಿದೆ. ಕರ್ನಾಟಕಕ್ಕೆ ಹೋಲಿಸಿದರೆ ಇಲ್ಲಿ ಸಾವಿನ ಸಂಖ್ಯೆ ಕಡಿಮೆಯೇ ಆಗಿದೆ.

    ಇದನ್ನೂ ಓದಿ; ಕರೊನಾ ಪಾಸಿಟಿವ್​ ಆದಾಗ ಆಸ್ಪತ್ರೆಗೆ ದಾಖಲಾಗಬೇಕೇ? ಬೇಡವೇ? ನೆರವಾಗಲಿದೆ ತಂತ್ರಜ್ಞಾನ 

    ಶೇ.7.2 ಪ್ರಮಾಣದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

    ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts