More

    ಕೋವಿಡ್​ ಕೇರ್​ ಸೆಂಟರ್​ ಆಗಿರುವ ಹೋಟೆಲ್​ನಲ್ಲಿ ಬೆಂಕಿ ಅವಘಡ: ಸಾವಿನ ಸಂಖ್ಯೆ 10ಕ್ಕೇರಿಕೆ

    ವಿಶಾಖಪಟ್ಟಣಂ: ಕೋವಿಡ್​ ಕೇರ್​ ಸೆಂಟರ್​ ಆಗಿರುವ ವಿಜಯವಾಡದ ಹೋಟೆಲ್​​ವೊಂದರಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಗಢದಲ್ಲಿ ದಾರುಣವಾಗಿ ಸಾವಿಗೀಡಾಗಿದವರ ಸಂಖ್ಯೆ 10ಕ್ಕೇರಿದೆ. ಬೆಳಗ್ಗೆ ಏಳು ಮಂದಿ ಪ್ರಾಣಬಿಟ್ಟಿದ್ದರು.

    ಅನೇಕ ಮಂದಿ ಹೋಟೆಲ್​ನಲ್ಲಿಯೇ ಸಿಲುಕಿರುವ ಮಾಹಿತಿ ಇದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅನೇಕ ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

    ಅವಘಡದಲ್ಲಿ ಏಳು ಮಂದಿ ದಾರುಣವಾಗಿ ಸಾವಿಗೀಡಾಗಿದ್ದು, ಈವರೆಗೆ 30 ಮಂದಿಯನ್ನು ರಕ್ಷಿಸಲಾಗಿದೆ. ಸುಮಾರು 15 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

    ಘಟನೆ ನಡೆದಾಗ ಹೋಟೆಲ್​ನಲ್ಲಿ 30 ಮಂದಿ ಇದ್ದರು ಎಂದು ತಿಳಿದುಬಂದಿದೆ. ಹೋಟೆಲ್​ ಹೆಸರು ಸ್ವರ್ಣ ಪ್ಯಾಲೇಸ್​ ಆಗಿದ್ದು, ರಮೇಶ್​ ಆಸ್ಪತ್ರೆ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತಿತ್ತು.

    ಇನ್ನು ಘಟನೆಯ ಬಗ್ಗೆ ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ವಿಜಯವಾಡದ ಕೋವಿಡ್​ ಕೇರ್​ ಸೆಂಟರ್​ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಕೇಳಿ ಆಘಾತವಾಯಿತು. ಘಟನೆಯಲ್ಲಿ ಪ್ರೀತಿ ಪಾತ್ರದವರನ್ನು ಕಳೆದುಕೊಂಡವರಿಗೆ ಸಾಂತ್ವಾನ ಹೇಳುತ್ತೇನೆ. ಗಾಯಗೊಂಡವರ ಶೀಘ್ರ ಚೇತರಿಕೆ ಹಾರೈಸುತ್ತೇನೆ. ಘಟನೆ ಈ ಕುರಿತು ಸಿಎಂ ಜಗನ್​ ರೆಡ್ಡಿ ಜತೆ ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts