More

    ಅಂದಾನಪ್ಪ ದೊಡ್ಡಮೇಟಿ ಕೊಡುಗೆ ಅವಿಸ್ಮರಣೀಯ

    ಗಜೇಂದ್ರಗಡ:ಪಟ್ಟಣದ ಮೈಸೂರು ಮಠದಲ್ಲಿ 196ನೇ ವಾರದ ಸಾಹಿತ್ಯ ಚಿಂತನಾ ಗೋಷ್ಠಿಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

    ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಶ್ರೀನಿವಾಸ ವಡ್ಡರ್, ಸ್ವಾತಂತ್ರ್ಯ ನಂತರ ಚದುರಿಹೋದ ಕನ್ನಡ ನಾಡು ಒಂದಾಗುವುದೆಂಬ ಭರವಸೆಯನ್ನು ವಲ್ಲಭಭಾಯಿ ಪಟೇಲರು ನೀಡಿದ್ದರು. ನಿಜಲಿಂಗಪ್ಪ ಅವರನ್ನು ಕನ್ನಡ ಏಕೀಕರಣ ಮಹಾಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಜಂಟಿ ಕಾರ್ಯದರ್ಶಿಗಳಾಗಿದ್ದ ಅಂದಾನಪ್ಪ ದೊಡ್ಡಮೇಟಿ ಅವರ ಕರ್ನಾಟಕದ ಸ್ವಾತಂತ್ರ್ಯ ಮತ್ತು ಏಕೀಕರಣಕ್ಕಾಗಿ ನೀಡಿದ ಕೊಡುಗೆಗಳು ಅವಿಸ್ಮರಣೀಯ ಎಂದರು.

    ಪುರಸಭೆ ಸದಸ್ಯ ರಾಜು ಸಾಂಗ್ಲಿಕರ್ ಮಾತನಾಡಿ, ಮುಂದಿನ ದಿನಗಳಲ್ಲಿ ಗಜೇಂದ್ರಗಡದ 23 ವಾರ್ಡ್​ಗಳಲ್ಲಿ ಧ್ವಜದ ಕಟ್ಟೆ ನಿರ್ವಿುಸಿ ಕನ್ನಡ ಧ್ವಜಾರೋಹಣ ನೆರವೇರಿಸಲಾಗುವುದು ಎಂದರು.

    ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷೆ ಲೀಲಾವತಿ ವನ್ನಾಲ ಅವರನ್ನು ಸನ್ಮಾನಿಸಲಾಯಿತು. ಗಾಯಕ ಶ್ರೀರಾಮ ಕಾಸರ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು.

    ಕಸಾಪ ತಾಲೂಕಾಧ್ಯಕ್ಷ ಈಶ್ವರಪ್ಪ ರೇವಡಿ, ಪುರಸಭೆ ಸದಸ್ಯರಾದ ಯು.ಆರ್. ಚನ್ನಮ್ಮನವರ, ಲೀಲಾವತಿ ಸವಣೂರು, ಮುದಕಪ್ಪ ಮುಧೋಳ, ಶರಣಪ್ಪ ಉಪ್ಪಿನಬೆಟಗೇರಿ, ಕನಕಪ್ಪ ಅರಳಿಗಿಡದ, ವೆಂಕಟೇಶ್ ಮುದಗಲ್ಲ, ಮುರ್ತಜಾ ಢಾಲಾಯತ, ರವಿ ಶಿಂಗ್ರಿ, ಶರಣಮ್ಮ ಅಂಗಡಿ, ಕೆ.ಎಸ್. ಗಾರವಾಡಹಿರೇಮಠ, ಎಸ್. ಎಸ್. ನರೇಗಲ್ಲ, ಬಿ.ವಿ. ಮುನವಳ್ಳಿ, ಕೆ.ಜಿ. ಸಂಗಟಿ, ಎಚ್.ಆರ್. ಭಜಂತ್ರಿ, ಎಂ.ಎಸ್. ಮಕಾನದಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts