More

    ಅನಂತಕುಮಾರ್ ಪ್ರತಿಷ್ಠಾನಕ್ಕೆ ಭೂಮಿ ಕೊಡಲ್ಲ, ಸರ್ಕಾರದ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
    ಕುಂದಾಣ ಹೋಬಳಿ ಜಾಲಿಗೆ ಪಂಚಾಯಿತಿ ಹೆಗ್ಗನಹಳ್ಳಿ ಖರಾಬು ಭೂಮಿಯಲ್ಲಿ 3.10 ಎಕರೆ ಜಾಗವನ್ನು ಸರ್ಕಾರ ‘ಅನಂತಕುಮಾರ್ ಪ್ರತಿಷ್ಠಾನ’ಕ್ಕೆ ಮಂಜೂರು ಮಾಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಭಾನುವಾರ ಕೆಲ ಗ್ರಾಮಸ್ಥರು ವಿವಾದಿತ ಸ್ಥಳಕ್ಕೆ ಆಗಮಿಸಿ ಈ ಭೂಮಿಯನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು.


    ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್ ಸ್ವಗ್ರಾಮ ಹೆಗ್ಗನಹಳ್ಳಿಯಲ್ಲಿ ಅನಂತ್‌ಕುಮಾರ್ ನೆನಪಾರ್ಥ ಗೋಶಾಲೆ, ಆಶ್ರಮ ಮತ್ತಿತರ ಸೇವಾ ಕಾರ್ಯಗಳಿಗೆ ಸರ್ಕಾರ ಜಾಗ ಮಂಜೂರು ಮಾಡಿದೆ ಎನ್ನಲಾಗಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು, ನಿವೇಶನರಹಿತ ಬಡವರಿಗೆ ನಿವೇಶನ ಹಂಚಿಕೆಯಾಗಬೇಕು. ಇದನ್ನು ಸರ್ಕಾರ ಯಾರಿಗೂ ಪರಭಾರೆ ಮಾಡಬಾರದು ಎಂದು ಆಗ್ರಹಿಸಿದರು.


    ಗ್ರಾಪಂ ಮಾಜಿ ಸದಸ್ಯ ವೆಂಕಟೇಶ್ ಮಾತನಾಡಿ, ಇಲ್ಲಿ ನಿವೇಶನರಹಿತರಿಗೆ ನಿವೇಶನ, ಅಂಬೇಡ್ಕರ್ ಭವನ ಹಾಗೂ ಇನ್ನಿತರ ಸಾರ್ವಜನಿಕ ಉದ್ದೇಶಕ್ಕೆ ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಗ್ರಾಪಂಗೆ ಸ್ಥಳೀಯರು ಸಲ್ಲಿಸಿದ ಮನವಿ ಮೇರೆಗೆ ಗ್ರಾಮಸಭೆಯ ನಡಾವಳಿಗಳಲ್ಲಿ ಅನುಮೋದನೆಗೊಂಡು, ತಾಪಂಗೆ ಕಡತ ಹೋಗಿದೆ. ಆದರೆ ಸರ್ಕಾರ ಈ ಭೂಮಿಯನ್ನು ಅನಂತಕುಮಾರ್ ಟ್ರಸ್ಟ್‌ಗೆ ಮಂಜೂರು ಮಾಡಿರುವ ಮಾಹಿತಿ ಕೇಳಿ ಗಾಬರಿಯಾಗಿದೆ ಎಂದು ತಿಳಿಸಿದರು.


    ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಸ್ಥಳಕ್ಕಾಗಮಿಸಿ ನಡೆಸಿದ ಗ್ರಾಮಸ್ಥರ ಮನವೊಲಿಕೆ ಪ್ರಯತ್ನ ಸಲವಾಗಲಿಲ್ಲ. ಗ್ರಾಮಸ್ಥರು ವಿವಾದಿತ ಜಾಗದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ಪ್ರತಿಭಟನೆ ಮುಂದುವರಿಸಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts