More

    ಉದ್ಯಮಿ ಆನಂದ್​ ಮಹೀಂದ್ರಾರಿಂದ ಪ್ಯೂರ್​ ವೆಜ್​ ರೆಸ್ಟೋರೆಂಟ್​ ಮೆನು ಕಾರ್ಡ್​ ಶೇರ್​: ಆದ್ರೂ ಇದರಲ್ಲಿದೆ ರೋಚಕ ಟ್ವಿಸ್ಟ್​!

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್​ ಆಫ್​ ಚೇರ್ಮನ್​ ಆನಂದ್​ ಮಹೀಂದ್ರಾ ತಮ್ಮ ಕಣ್ಣಿಗೆ ಬಿದ್ದಂತಹ ವಿಶೇಷತೆಗಳನ್ನು ಪರಿಚಯಿಸುತ್ತಿರುತ್ತಾರೆ. ಅದರಂತೆ ಇಂದು ಬೆಳಗ್ಗೆ ಮಹೀಂದ್ರಾ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ಫೋಟೋ ನೆಟ್ಟಿಗರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

    ಮಹೀಂದ್ರ ಅವರು ರೆಸ್ಟೋರೆಂಟ್​ ಒಂದರ ಮೆನು ಕಾರ್ಡ್​ ಅನ್ನು ತಮ್ಮ ಟ್ವಿಟರ್​ನಲ್ಲಿಂದು ಶೇರ್​ ಮಾಡಿಕೊಂಡಿದ್ದಾರೆ. ಆದರೆ, ಮೆನ್​ ಕಾರ್ಡ್​ನಲ್ಲಿರುವ ವಿಚಾರ ಬಹಳ ವಿಶೇಷತೆಯಿಂದ ಕೂಡಿದ್ದು, ನೋಡಿಗರ ಮುಖದಲ್ಲಿ ನಗು ಮೂಡಿಸುವಂತಿದೆ. ಇದೊಂದು ಪರಿಶುದ್ಧವಾದ ಸಸ್ಯಹಾರಿ ರೆಸ್ಟೋರೆಂಟ್​ ಆಗಿದ್ದು, ಅದರ ಆಹಾರದ ಪಟ್ಟಿಗೆ ಹೀಗಿದೆ ಎಂದು ಹೇಳಿ, ವೆಜ್​ ಫಿಶ್​ ಫ್ರೈ, ವೆಜ್​ ಚಿಕನ್​ ರೈಸ್​ ಮತ್ತು ವೆಜ್​ ಮಟನ್​ ದೋಸಾ ಎಂದು ಬರೆಯಲಾಗಿದೆ.

    ಭಾರತ ಹೇಗೆ ವಿಸ್ಮಯಕಾರಿ ಎಂಬುದಕ್ಕೆ ನಿಜವಾಗಿಯೂ ಇದೊಂದು ಉದಾಹರಣೆಯಾಗಿದೆ. ವಿಚಾರವೊಂದರ ಕುರಿತಾಗಿ ನಮ್ಮ ಮನಸ್ಸಿನ ಶಕ್ತಿಯನ್ನು ಹೇಗೆ ನಿಯಂತ್ರಣದಲ್ಲಿಡಬೇಕೆಂಬುದನ್ನು ಸಾವಿರಾರು ವರ್ಷಗಳಿಂದ ತಿಳಿದಿದ್ದೇವೆ. ವೆಜ್​ ಮತ್ತು ನಾನ್​ವೆಜ್​ನಲ್ಲಿ ವ್ಯತ್ಯಾಸವೇನಿದೆ? ಇದೆಲ್ಲ ನಮ್ಮ ಮನಸ್ಸಿನಲ್ಲಿದೆ ಎಂದು ಮಹೀಂದ್ರಾ ಅವರು ಫೋಟೋ ಕುರಿತು ಬರೆದುಕೊಂಡಿದ್ದಾರೆ.

    ಇಂದು ಬೆಳಗ್ಗೆ ಪೋಟೋ ಪೋಸ್ಟ್​ ಮಾಡಿದ್ದು, ಈವರೆಗೂ 5 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ. ಈ ಮೆನುವಿನಲ್ಲಿರುವ ಆಹಾರದ ರುಚಿ ಹೇಗಿರುತ್ತದೋ ಎಂದು ಕೆಲ ನೆಟ್ಟಿಗರು ನಗೆಚಟಾಕಿ ಹಾರಿಸಿದ್ದರೆ, ಇನ್ನು ಕೆಲವರು ಈ ಆಹಾರದಲ್ಲಿ ಪದಾರ್ಥಗಳೇನಿರಬಹುದೆಂದು ಗೊಂದಲಕ್ಕೀಡಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts