More

    ಅಕಾಲಕ್ಕೆ ಹೂ ಬಿಟ್ಟ ಮುತ್ತುಗದ ಮರ! ಪರಿಸರ ಅಸಮತೋಲನ ಕಾರಣ? ಬಂಡೀಪುರದಲ್ಲಿ ರೆಡ್ ಫ್ಲವರ್ಸ್

    | ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ

    ಬಂಡೀಪುರ ಅರಣ್ಯ ಪ್ರದೇಶಗಳಲ್ಲಿ ಪ್ರತಿ ವರ್ಷವೂ ಬೇಸಿಗೆಯ ಸಂದರ್ಭದಲ್ಲಿ ಹೂ ಬಿಡುತ್ತಿದ್ದ ಮುತ್ತುಗದ ಮರಗಳು ಚಳಿಗಾಲದ ಆರಂಭದಲ್ಲಿಯೇ ಹೂ ಅರಳಿಸುತ್ತಿವೆ.

    ಹುಲಿ ಯೋಜನೆಯ ಬಂಡೀಪುರ, ಕುಂದಕೆರೆ, ಮದ್ದೂರು, ಓಂಕಾರ್ ಮುಂತಾದ ವಲಯಗಳಲ್ಲಿ ಮುತ್ತುಗದ ಮರಗಳಲ್ಲಿ ಅರಳಿದ ಹೂ ಕೆಂಪಗೆ ನಳನಳಿಸುತ್ತಿವೆ. ‘ಕಾಡಿನ ಬೆಂಕಿ ಮರ’ ಎಂದು ಕರೆಸಿಕೊಳ್ಳುವ ಮುತ್ತುಗ, ಅಕಾಲಿಕವಾಗಿ ಹೂ ಬಿಟ್ಟು ಅಚ್ಚರಿ ಮೂಡಿಸಿದೆ.

    ಮುತ್ತುಗದಂತ ಮರಗಳು ಹೂ ಬಿಟ್ಟಾಗ ಕಾಡಿಗೆ ಕಿಚ್ಚು ಹೊತ್ತಿಕೊಂಡಿರುವಂತೆ ಕಾಣುವುದರಿಂದ ಇದನ್ನು ‘ಕಾಡಿನ ಬೆಂಕಿಮರ’ ಎನ್ನಲಾಗುತ್ತದೆ. ನವೆಂಬರ್-ಡಿಸೆಂಬರ್ ಮಾಸಗಳಲ್ಲಿ ಕೊರೆಯುವ ಚಳಿಯಲ್ಲಿ ಎಲೆ ಉದುರಿಸಿಕೊಂಡ ಮುತ್ತುಗ ಮರಗಳು ಜನವರಿ-ಫೆಬ್ರವರಿ ಆಸುಪಾಸಿನಲ್ಲಿ ಮೊಗ್ಗನ್ನು ಧರಿಸಿ, ಹೂ ಅರಳಿಸುತ್ತವೆ. ಬಂಡೀಪುರದ ಎಲೆ ಉದುರುವ ಮತ್ತು ಅರೆ ನಿತ್ಯ ಹರಿದ್ವರ್ಣ ಪ್ರದೇಶಗಳಲ್ಲಿ ಬೆಳೆಯುವ ಮುತ್ತುಗ ಮರವು ಹಳದಿ ಮಿಶ್ರಿತ ಕೆಂಪು ಹೂಗಳನ್ನು ತೊಟ್ಟು ಬೇಸಿಗೆ ಸಂದರ್ಭದಲ್ಲಿಯೂ ಅರಣ್ಯದ ಸೊಬಗನ್ನು ಮನೋಹರಗೊಳಿಸುತ್ತದೆ.

    ಮಡಗಾಸ್ಕರ್ ಮೂಲದ ಮುತ್ತುಗ ಬೇಸಿಗೆ ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳಿಗೆ ನ್ಯೂಟ್ರಿಷಿಯನ್ ಆಹಾರವಾಗಿದೆ. ಗ್ಲೋಬಲ್ ವಾರ್ವಿುಂಗ್​ನಂತಹ ವಿಶ್ವವ್ಯಾಪಿ ಸಮಸ್ಯೆಯೂ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಮುತ್ತುಗ ಅಕಾಲಿಕವಾಗಿ ಹೂವು ಬಿಡುತ್ತಿರುವುದು ಪರಿಸರ ಕೆಡುತ್ತಿರುವ ಮುನ್ಸೂಚನೆಯಾಗಿದೆ.

    | ಆರ್.ಕೆ.ಮಧು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ

    ಮುತ್ತುಗ ಮರದ ಹೂವಿನ ಪರಾಗಸ್ಪರ್ಶ ಕ್ರಿಯೆಯು ನೇರಳೆ ಬಣ್ಣದ ಸೂರಕ್ಕಿ (ಪರ್ಪಲ್ ಸನ್​ಬರ್ಡ್) ಮತ್ತು ಮೂರು ಗೆರೆಯ ಅಳಿಲು (ತ್ರೀ ಸ್ಟೈಪ್ಡ್ ಸ್ಕಿ ್ವರಲ್)ನಿಂದ ಉಂಟಾಗುತ್ತದೆ. ಕೆಲವೊಮ್ಮೆ ಪ್ರಕೃತಿ ಯಲ್ಲಾಗುವ ಬದಲಾವಣೆಗೆ ಅನುಗುಣವಾಗಿ ಮರಗಿಡಗಳು ಬದುಕನ್ನು ಅನುಸರಿಸುತ್ತವೆ ಎಂಬುದಕ್ಕೆ ಇಂತಹ ನಿದರ್ಶನಗಳಿವೆ.

    | ಶ್ರೀಕಂಠ ಪರಿಸರ ಪ್ರೇಮಿ, ಗುಂಡ್ಲುಪೇಟೆ

    ಶಮಿ ಅಂದ್ರೆ ಉರಿದು ಬೀಳ್ತಿದ್ದ ಹಸಿನಾಗೆ ಇದ್ದಕ್ಕಿದ್ದಂತೆ ಮಾಜಿ ಗಂಡನ ಮೇಲೆ ಉಕ್ಕಿ ಹರಿಯುತ್ತಿದೆ ಪ್ರೀತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts