More

    ಕ್ಯಾಪಿಟಲ್ಸ್​ಗೆ ಹ್ಯಾಟ್ರಿಕ್​ ಗೆಲುವಿನ ತವಕ:ಜಯದ ಓಟ ಕಾಯ್ದುಕೊಳ್ಳುವ ಹಂಬಲದಲ್ಲಿ ಸನ್​ರೈಸರ್ಸ್​

    ನವದೆಹಲಿ: ನಾಯಕ ರಿಷಭ್​ ಪಂತ್​ ಆಗಮನದ ಬಳಿಕ ಹೊಸ ಚೈತನ್ಯ ಪಡೆದುಕೊಂಡಿರುವ ಆತಿಥ್ಯ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಐಪಿಎಲ್​&17ರಲ್ಲಿ ತವರು ಅಂಗಣ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಕಣಕ್ಕಿಳಿಯಲಿದೆ.ಸತತ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್​ ಹಾಲಿ ಟೂರ್ನಿಯಲ್ಲಿ ಮೊದಲ ಬಾರಿ ತವರಿನಂಗಣದಲ್ಲಿ ಆಡಲಿದ್ದು ಹ್ಯಾಟ್ರಿಕ್​ ಗೆಲುವಿನ ತವಕದಲ್ಲಿದೆ. ಪ್ಯಾಟ್​ ಕಮ್ಮಿನ್ಸ್​ ಪಡೆ ಜಯದ ಓಟ ಕಾಯ್ದುಕೊಳ್ಳುವ ಹಂಬಲದಲ್ಲಿದೆ.

    ಹಾಲಿ ಟೂರ್ನಿಯಲ್ಲಿ ದಾಖಲೆಯ ರನ್​ ಮಳೆ ಹರಿಸಿರುವ ಸನ್​ರೈಸರ್ಸ ಹೈದರಬಾದ್​ ತಂಡ ಎದುರಾಳಿಗಳಿಗೆ ನಡುಕ ತರಿಸಿದೆ. ಸನ್​ರೈಸರ್ಸ್​ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು, 2 ಸೋಲಿನೊಂದಿಗೆ 8 ಅಂಕ ಸಂಪಾದಿಸಿದ್ದು, ಜತೆಗೆ ಹ್ಯಾಟ್ರಿಕ್​ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್​ 7 ಪಂದ್ಯಗಳಲ್ಲಿ 3 ಜಯ, 4 ಸೋಲಿನೊಂದಿಗೆ 6 ಅಂಕ ಕಲೆಹಾಕಿದ್ದು, ಪ್ಲೇ ಆ್​ ಅವಕಾಶ ವೃದ್ಧಿಸಿಕೊಳ್ಳುವ ನಿರೀೆಯಲ್ಲಿದೆ. ಯುವ ಆಟಗಾರರ ಬ್ಯಾಟಿಂಗ್​ ಬಲ ಹೊಂದಿರುವ ಡೆಲ್ಲಿ, ಅನುಭವಿ ಬೌಲರ್​ಗಳನ್ನು ಹೊಂದಿರುವ ಸನ್​ರೈಸರ್ಸ್​ ತಂಡಗಳ ಕಾದಾಟ ಕುತೂಹಲ ಕೆರಳಿಸಿದೆ.

    ಲಯದಲ್ಲಿ ಬ್ಯಾಟಿಂಗ್​ ವಿಭಾಗ ಯುವ ಆಟಗಾರರಿಂದ ಕೂಡಿರುವ ಡೆಲ್ಲಿ ಬ್ಯಾಟಿಂಗ್​ ವಿಭಾಗ ಉತ್ತಮ ಾಮ್​ರ್ನಲ್ಲಿದ್ದು, ಗುಜರಾತ್​ ಟೈಟಾನ್ಸ್​ ಹಾಗೂ ಲಖನೌ ವಿರುದ್ಧದ ಪ್ರದರ್ಶನ ಬಲ ಹೆಚ್ಚಿಸಿದೆ. 2022ರ ಬಳಿಕ ಪಂತ್​ ಮೊದಲ ಬಾರಿ ದೆಹಲಿಯಲ್ಲಿ ಆಡಲಿದ್ದಾರೆ. ಗಾಯದಿಂದ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಡೇವಿಡ್​ ವಾರ್ನರ್​ ಮರಳಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಟ್ರಿಸ್ಟಾನ್​ ಸ್ಟಬ್ಸ್​ , ಪಂತ್​ ಮಧ್ಯ ಕ್ರಮಾಂಕದಲ್ಲಿ ತಂಡಕ್ಕೆ ಪ್ರಮುಖ ಆಧಾರ ಎನಿಸಿದ್ದಾರೆ. ಕುಲದೀಪ್​ ಯಾದವ್​ ಮ್ಯಾಚ್​ ವಿನ್ನರ್​ ಎನಿಸಿಕೊಂಡಿದ್ದಾರೆ. ಇವರಿಗೆ ಇಶಾಂತ್​ ಶರ್ಮ, ಮುಕೇಶ್​ ಕುಮಾರ್​ ಹಾಗೂ ಖಲೀಲ್​ ಅಹ್ಮದ್​ ಸಾಥ್​ ನೀಡಿದ್ದಾರೆ. ಆದರೆ ಸನರೈಸರ್ಸ್​ ಬಲಿಷ್ಠ ಬ್ಯಾಟಿಂಗ್​ ವಿಭಾಗದ ಎದುರು ನೈಜ ಪರೀೆ ಎದುರಾಗಲಿದೆ.

    ಕಮ್ಮಿನ್ಸ್​ ನಾಯಕತ್ವ ಬಲ ಕಳೆದ ಆವೃತ್ತಿಯ ನೀರಸ ನಿರ್ವಹಣೆಯಿಂದ ಹೊರಬದ್ದಿರುವ ಸನ್​ರೈಸರ್ಸ್​ ಪ್ಲೇ ಆ್​ ಸ್ಥಾನ ಪಡೆಯುವ ಪ್ರಬಲ ತಂಡ ಎನಿಸಿದೆ. ಒಂದೇ ಆವೃತ್ತಿಯಲ್ಲಿ ಎರಡು ಬಾರಿ ಗರಿಷ್ಠ ರನ್​ ದಾಖಲೆ ಬರೆದಿರುವ ಸನ್​ರೈಸರ್ಸ್​ಗೆ ಬ್ಯಾಟಿಂಗ್​ ವಿಭಾಗದ ಜತೆಗೆ ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್​ ಅನುಭವದ ಬಲವಿದೆ. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಟಗಾರರ ಆಯ್ಕೆಯಲ್ಲಿ ಕಮ್ಮಿನ್ಸ್​ ಯಸಸ್ಸು ಪಡೆದಿದ್ದಾರೆ. ಟ್ರಾವಿಸ್​ ಹೆಡ್​, ಅಭಿಷೇಕ್​ ಶರ್ಮ, ಮಾರ್ಕ್ರಮ್​ ಹಾಗೂ ಕ್ಲಾಸೆನ್​ ಭರ್ಜರಿ ಾಮ್​ರ್ನಲ್ಲಿದ್ದಾರೆ. ರನ್​ಗಳಿಸಿವುದರ ಜತೆಗೆ ಎದುರಾಳಿಗಳಿಗೆ ರನ್​ ಬಿಟ್ಟುಕೊಟ್ಟಿರುವುದು ಸನ್​ರೈಸರ್ಸ್​ಗೆ ಕೊಂಚ ಹಿನ್ನಡೆ ಎನಿಸಿದೆ. ಕಮ್ಮಿನ್ಸ್​ ಹೊರತುಪಡಿಸಿ ಇತರ ಬೌಲರ್​ಗಳು ದುಬಾರಿಯಾಗುತ್ತಿದ್ದಾರೆ, ಜತೆಗೆ ಅನುಭವಿ ಸ್ಪಿನ್ನರ್​ಗಳು ಇಲ್ಲದಿರುವುದು ಡೆಲ್ಲಿ ವಿರುದ್ಧ ಹಿನ್ನಡೆ ತರಲಿದೆ.

    ಮುಖಾಮುಖಿ: 23
    ಸನ್​ರೈಸರ್ಸ್​: 12
    ಡೆಲ್ಲಿ: 11
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts