More

    ಕನ್ನಡ ಮೂಲೆಗುಂಪಾಗಿಸುವ ಪ್ರಯತ್ನ

    ಸಾಗರ: ಅನ್ಯಭಾಷಾ ನಾಮಲಕ ತೆಗೆಯಲು ಒತ್ತಾಯಿಸಿ ಹೋರಾಟ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹಾಗೂ ಸಹಚರರನ್ನು ಬಂಧಿಸಿರುವ ಕ್ರಮ ಖಂಡಿಸಿ ಮಂಗಳವಾರ ಕರವೇ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
    ಅನ್ಯಭಾಷಿಗರ ಆಕ್ರಮಣದಿಂದ ಕನ್ನಡ ಭಾಷೆ ನಶಿಸುವ ಸ್ಥಿತಿ ತಲುಪಿದೆ. ಬೇರೆ ಭಾಷೆಯ ನಾಮಲಕದ ಮೂಲಕ ಕನ್ನಡ ನುಡಿ, ಸಂಸ್ಕೃತಿಯನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.
    ನಾಡು, ನುಡಿ ಉಳಿವಿನ ಬಗ್ಗೆ ಚಿಂತಿಸಬೇಕಾದವರು ವಲಸಿಗರೊಂದಿಗೆ ಶಾಮೀಲಾಗಿ ಸಂಸ್ಕೃತಿಯ ಅಧೋಗತಿಗೆ ಕಾರಣವಾಗುತ್ತಿದ್ದಾರೆ. ನಾಮಫಲಕಗಳಲ್ಲಿ ಶೇ.60:40 ಅನುಪಾತದಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಬೇಕು ಎನ್ನುವ ಕಾನೂನು ಇದ್ದರೂ ವ್ಯಾಪಾರಸ್ಥರು ಅದನ್ನು ಪರಿಪಾಲಿಸುತ್ತಿಲ್ಲ. ಅಧಿಕಾರಿಗಳೂ ಇದನ್ನು ಪ್ರಶ್ನೆ ಮಾಡುತ್ತಿಲ್ಲ. ಇದನ್ನು ಪ್ರಶ್ನೆ ಮಾಡಿ ಕನ್ನಡ ನಾಮಲಕ ಕಡ್ಡಾಯಗೊಳಿಸಲು ಹೋರಾಟ ಮಾಡಿದ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಇತರರನ್ನು ಬಂಧಿಸಿರುವ ಕ್ರಮ ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
    ಕೂಡಲೆ ಸರ್ಕಾರ ಅನ್ಯಭಾಷೆ ನಾಮಲಕ ಹಾಕಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಹೋರಾಟನಿರತ ಕರವೇ ಅಧ್ಯಕ್ಷರು ಮತ್ತಿತರರನ್ನು ಬೇಷರತ್ತು ಬಂಧಮುಕ್ತಗೊಳಿಸಬೇಕು. ಇಲ್ಲವಾದಲ್ಲಿ ವೇದಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
    ವೇದಿಕೆ ತಾಲೂಕು ಅಧ್ಯಕ್ಷ ಮನೋಜ್ ಕುಗ್ವೆ, ಪ್ರಮುಖರಾದ ರವೀಂದ್ರ ಸಾಗರ್, ಸವೇರಾ ರ್ನಾಂಡಿಸ್, ಪ್ರವೀಣ್ ಸಿದ್ದಾಪುರ, ಷಣ್ಮುಖ, ಅಭಿಷೇಕ್, ಸಚಿನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts