More

    ಟಾರ್ಗೆಟ್ ಚೀನಾ ಕಾರ್ಟೂನ್ ಅಪ್ಲೋಡ್ ಮಾಡಿದ ಅಮೂಲ್​ ಟ್ವಿಟರ್ ಖಾತೆ ಕೆಲವು ಗಂಟೆಗಳ ಹೊತ್ತು ಬಂದ್​!?

    ಮುಂಬೈ: ಆತ್ಮನಿರ್ಭರ್ ಭಾರತದ ನೀತಿಗೆ ಅನುಗುಣವಾಗಿ ಸಾಮಾಜಿಕ ತಾಣಗಳಲ್ಲಿ ಚೀನಾ ಉತ್ಪನ್ನ ಖರೀದಿಸದಂತೆ ಅಭಿಯಾನ ನಡೆದೇ ಇದೆ. ಇದಕ್ಕೆ ಪೂರಕವಾಗಿ ಭಾರತದ ಡೇರಿ ಉತ್ಪನ್ನಗಳ ಪ್ರಮುಖ ಬ್ರ್ಯಾಂಡ್ ಅಮೂಲ್ ನ ಕಾರ್ಟೂನ್ ಒಂದರಲ್ಲಿ ಚೀನಾದ ಡ್ರ್ಯಾಗನ್ ಚಿತ್ರ ಮತ್ತು ಅದಕ್ಕೆ ಎಕ್ಸಿಟ್ ಡ್ರ್ಯಾಗನ್ ಎಂಬ ಶೀರ್ಷಿಕೆ ಕೊಟ್ಟು ಪ್ರಕಟಿಸಿತ್ತು. ಅದರಲ್ಲಿ ಕೆಳಗೆ ಅಮೂಲ್ ಮೇಡ್ ಇನ್ ಇಂಡಿಯ ಎಂಬ ಉಲ್ಲೇಖವೂ ಇದೆ.

    ಇದನ್ನೂ ಓದಿ: ಜೂನ್​ 11ರಿಂದ ತಿರುಪತಿ ಬಾಲಾಜಿ ದರ್ಶನ: ಆದರೆ ಸುಲಭವಿಲ್ಲ

    ಈ ಕಾರ್ಟೂನ್​ ಅನ್ನು ಗುಜರಾತ್​ ಕೋ ಆಪರೇಟಿವ್​ ಮಿಲ್ಕ್ ಫೆಡರೇಷನ್​ ತನ್ನ ಟ್ವಿಟರ್ ಹ್ಯಾಂಡಲ್​ನಲ್ಲಿ ಪ್ರಕಟಿಸಿತ್ತು. ಇದಾಗಿ ಕೆಲವೇ ಹೊತ್ತಿನಲ್ಲಿ ಟ್ವಿಟರ್ ಹ್ಯಾಂಡಲ್ ಬ್ಲಾಕ್ ಆಗಿತ್ತು. ಟ್ವಿಟರ್ ಹ್ಯಾಂಡಲ್ ಬ್ಲಾಕ್ ಆಗಿರುವುದರ ಬಗ್ಗೆ ನಮಗೆ ಯಾವುದೇ ಅಧಿಕೃತ ಹೇಳಿಕೆ ಟ್ವಿಟರ್​ನಿಂದ ಬಂದಿಲ್ಲ. ಅದನ್ನು ಯಾಕೆ ಬ್ಲಾಕ್ ಮಾಡಲಾಗಿತ್ತು ಎಂಬುದೂ ಗೊತ್ತಿಲ್ಲ ಎಂದು ಫೆಡರೇಷನ್​ನ ಎಂಡಿ ಆರ್​.ಎಸ್.ಸೋಧಿ ಹೇಳಿದ್ದಾರೆ.

    ಇದನ್ನೂ ಓದಿ:  ಕರೊನಾ ಸೇನಾನಿಗಳಿಗೆ ಊಟ ಬಡಿಸಿದ್ದ ಯುವಕನನ್ನೂ ಬಿಡಲಿಲ್ಲ ಜವರಾಯ!

    ಅಮೂಲ್​ ಗರ್ಲ್​ ಅಭಿಯಾನ ಕಳೆದ 55 ವರ್ಷಗಳಿಂದ ಚಾಲ್ತಿಯಲ್ಲಿದೆ. ಕಾರ್ಟೂನ್​ಗಳಲ್ಲಿ ನಾವು ಪ್ರಚಲಿತ ವಿಷಯಗಳನ್ನೇ ಆಯ್ಕೆ ಮಾಡಿಕೊಂಡು ಹಾಸ್ಯಭರಿತವಾಗಿ ಬಿಂಬಿಸುತ್ತೇವೆ. ಜೂನ್​ 4 ರಂದು ರಾತ್ರಿ ಈ ಕಾರ್ಟೂನ್ ಅಪ್ಲೋಡ್ ಮಾಡಿದ್ದೇವೆ. ಇದರ ಬೆನ್ನಿಗೆ ಟ್ವಿಟರ್ ಅಕೌಂಟ್ ಬ್ಲಾಕ್​ ಆಗಿರುವುದು ಗೊತ್ತಾಗಿದೆ. ಕೂಡಲೇ ಟ್ವಿಟರ್​ಗೆ ಅದನ್ನು ಮತ್ತೆ ಸಕ್ರಿಯಗೊಳಿಸುವಂತೆ ಮನವಿ ಕಳುಹಿಸಿದೆವು. ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆಯೂ ಕೇಳಿದ್ದೇವೆ. ಆಗ ಖಾತೆ ಮತ್ತೆ ಸಕ್ರಿಯವಾಗಿದೆ. ಸ್ಪಷ್ಟೀಕರಣ ಇನ್ನೂ ಸಿಕ್ಕಿಲ್ಲ ಎಂದು ಅವರು ವಿವರಿಸಿದ್ದಾರೆ. (ಏಜೆನ್ಸೀಸ್)

    ಉಡುಪಿಯಲ್ಲೇ ಇಂದು ಗರಿಷ್ಠ ಕೇಸ್: ರಾಜ್ಯದಲ್ಲಿ ಒಟ್ಟು 378 ಕೋವಿಡ್ ಕೇಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts